-->
1000938341
ಮರುಬಿಡುಗಡೆಯಾಗಿ ಕೋಟಿಗಟ್ಟಲೆ ಹಣಗಳಿಸಿದ ಪವರ್ ಸ್ಟಾರ್ ಜಾಕಿ ಸಿನಿಮಾ

ಮರುಬಿಡುಗಡೆಯಾಗಿ ಕೋಟಿಗಟ್ಟಲೆ ಹಣಗಳಿಸಿದ ಪವರ್ ಸ್ಟಾರ್ ಜಾಕಿ ಸಿನಿಮಾ

 

ಎಲ್ಲೆಡೆ ಸಂಚಲನ ಮೂಡಿಸಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜಾಕಿ ಸಿನಿಮಾ  ಈಗ ಫಸ್ಟ್ ಟೈಮ್  ಹೊಸ ಚಿತ್ರದಂತೆ ಜಾಕಿ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಸೋಲ್ಡ್ ಔಟ್ ಶೋಗಳು, ಮರು ಬಿಡುಗಡೆಗೊಂಡ ಮೊದಲನೇ ದಿನವೇ ಒಟ್ಟು 1 ಕೋಟಿ ರೂಪಾಯಿ ಸಂಪಾದಿಸಿದೆ.
ಎರಡನೇ ದಿನದ ಶೋಗಳು ಇದೇ ರೀತಿಯ ಪ್ರತಿಕ್ರಿಯೆಯನ್ನು ಕಾಣುತ್ತಿದ್ದು  14 ವರ್ಷಗಳ ನಂತರ ಜಾಕಿ ಮಾರ್ಚ್ 15, 2024ರಂದು 175 ಚಿತ್ರಮಂದಿರಗಳಲ್ಲಿ ಭರ್ಜರಿ ಮರು ಬಿಡುಗಡೆಯನ್ನು ಕಂಡಿತು
. ಇನ್ನಾವ ಮರು ಬಿಡುಗಡೆಯಾದ ಚಿತ್ರವೂ ಪಡೆಯದಂತಹ ಮತ್ತು ಊಹಿಸಲು ಸಾಧ್ಯವಾಗದಂತಹ ಪ್ರತಿಕ್ರಿಯೆಯನ್ನು ಈ ಸಿನಿಮಾ ಕಂಡಿದೆ. ಈ ಚಿತ್ರವನ್ನು ವಿತರಿಸಿದ ಕೆ.ಆ‌ರ್.ಜಿ ಸ್ಟುಡಿಯೋಸ್, ಪಿ.ಆ‌ರ್.ಕೆ ಮತ್ತು ಅಪ್ಪು ಅಭಿಮಾನಿಗಳ ಸತತ ಪರಿಶ್ರಮಕ್ಕೆ ತಕ್ಕ ಫಲವೇ ದೊರೆತಿದೆ ಎಂದರೆ ತಪ್ಪಾಗಲಾರದು. ಈ ಕುರಿತು ಕೆ.ಆ‌ರ್.ಜಿ ಸ್ಟುಡಿಯೋಸ್ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿ, 'ಜಾಕಿ ಒಂದು ಮಾಸ್ ಚಿತ್ರ. ಈ ಚಿತ್ರದ ಮರು ಬಿಡುಗಡೆಯ ಮೂಲಕ ನಾವು ಮತ್ತು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನು ಸಂಭ್ರಮಿಸಲು ಇಚ್ಛಿಸುತ್ತೇವೆ. ಇದೇ ರೀತಿ ಪ್ರತಿ ವರ್ಷವೂ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ನಟನೆಯ ಯಾವುದಾದರೊಂದು ಚಿತ್ರವನ್ನು ಮರು ಬಿಡುಗಡೆ ಮಾಡುತ್ತೇವೆ.
ಮುಂದಿನ ವರ್ಷ, ಅವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೆ. ಆ‌ರ್.ಜಿ ಸ್ಟುಡಿಯೋಸ್ ಮತ್ತು ಪಿ.ಆ‌ರ್.ಕೆ ಪುನೀತ್ ಅವರ ಚೊಚ್ಚಲ ಚಿತ್ರವಾದ ಅಪ್ಪುವನ್ನು ಮರು ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದೇವೆ. ಚಿತ್ರದ ಕಲರ್ ಗ್ರೇಡಿಂಗ್ ಮತ್ತು ಇನ್ನಿತರ ಕೆಲಸಗಳು ಏಪ್ರಿಲ್ ತಿಂಗಳಲ್ಲಿ ಆರಂಭಗೊಳಲ್ಲಿವೆ ಎಂದಿದ್ದಾರೆ. 

Ads on article

Advertise in articles 1

advertising articles 2

Advertise under the article