ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಮಂಗಳೂರು ಖಾಸಗಿ ಕಾಲೇಜಿನಲ್ಲಿ ರ‌್ಯಾಗಿಂಗ್ ಪ್ರಕರಣ5 ಮಂದಿ ವಿದ್ಯಾರ್ಥಿಗಳು ಬಂಧನ

ಮಂಗಳೂರು ನಗರದ ಗುಜ್ಜರಕೆರೆ ಚಹಾ ಅಂಗಡಿ ಬಳಿ ಖಾಸಗಿ ಕಾಲೇಜಿನ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ನಡೆಸಿದ ರ‌್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಘಟನೆಯ ವಿವರ:
ಲಾಜಿಸ್ಟಿಕ್ಸ್ ಡಿಪ್ಲೊಮಾ ದ್ವಿತೀಯ ವರ್ಷದ ಹಿರಿಯ ವಿದ್ಯಾರ್ಥಿಗಳು
ಪ್ರಥಮ ವರ್ಷದ BBA ಮತ್ತು ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ “ಶೂ ಧರಿಸಬಾರದು” ಎಂದು ಡ್ರೆಸ್ ಕೋಡ್ ಹೇರಲು ಯತ್ನ
ವಿರೋಧ ವ್ಯಕ್ತಪಡಿಸಿದಾಗ ತೀವ್ರ ಹಲ್ಲೆ
ಸಂತ್ರಸ್ತರು ಮತ್ತು ಆರೋಪಿಗಳು ಕೇರಳ ಮೂಲದವರು
ಆರಂಭದಲ್ಲಿ ಕೇವಲ ಹಲ್ಲೆ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ರ‌್ಯಾಗಿಂಗ್ ದೃಢಪಟ್ಟಿದ್ದರಿಂದ ರ‌್ಯಾಗಿಂಗ್ ನಿರೋಧಕ ಕಾಯ್ದೆಯ ಕಲಂಗಳನ್ನು ಸೇರ್ಪಡೆಗೊಳಿಸಲಾಗಿದೆ.
ಬಂಧಿತ 5 ಮಂದಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುತ್ತಿದೆ. ಆಸ್ಪತ್ರೆಯಲ್ಲಿರುವ ಸಂತ್ರಸ್ತರು ಗುಣಮುಖರಾದ ನಂತರ 6ನೇ ಆರೋಪಿಯನ್ನು ಗುರುತಿಸುವ ಪ್ರಕ್ರಿಯೆ ನಡೆಯಲಿದೆ.