ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಾಗ ಮೃತಪಟ್ಟ ಮಹಿಳೆಯ ಕುತ್ತಿಗೆಯಲ್ಲಿದ್ದ ₹1.50 ಲಕ್ಷದ ಚಿನ್ನದ ಸರ ಕಳವು!



ಮಂಗಳೂರು: ಆಸ್ಪತ್ರೆಗೆ ಬಂದಾಗ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹದಿಂದಲೇ ಲಕ್ಷಾಂತರ ರೂಪಾಯಿ ಮೌಲ್ಯದ ಮಾಂಗಲ್ಯ ಸರವನ್ನು ಕಳವು ಮಾಡಿರುವ ಅಮಾನವೀಯ ಘಟನೆ ಕರಾವಳಿಯ ಪ್ರಸಿದ್ಧ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಡೆದಿದೆ.

​ಘಟನೆಗೆ ಸಂಬಂಧಿಸಿದಂತೆ ಮೃತರ ಪತಿ ಸುಂದರ ಎಂಬವರು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

​ನಡೆದಿದ್ದೇನು?

​ಜುಲೈ 26 ರಂದು ಬೆಳಿಗ್ಗೆ 8:00 ಗಂಟೆ ಸುಮಾರಿಗೆ ಜಾನಕಿ (53) ಎಂಬವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರ ಪತಿ ಸುಂದರ ಆಟೋರಿಕ್ಷಾದಲ್ಲಿ ಪತ್ನಿಯನ್ನು ಸಿಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಸೂಕ್ತ ವೈದ್ಯರಿಲ್ಲದ ಕಾರಣ, ತಕ್ಷಣವೇ ವೆನ್‌ಲಾಕ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದ್ದಾರೆ.

​ವೈದ್ಯರು ಪರೀಕ್ಷೆ ನಡೆಸಿ ಜಾನಕಿ ಅವರು ಈಗಾಗಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

​ಮೃತದೇಹದಲ್ಲಿದ್ದ ಆಭರಣ ನಾಪತ್ತೆ:

​ಪತ್ನಿಯನ್ನು ಆಸ್ಪತ್ರೆಗೆ ಕರೆತರುವಾಗ ಅವರ ಕೊರಳಿನಲ್ಲಿ 16 ಗ್ರಾಂ ಚಿನ್ನದ ಗುಂಡುಗಳನ್ನೊಳಗೊಂಡ ಒಟ್ಟು 32 ಗ್ರಾಂ ತೂಕದ (ಅಂದಾಜು ಮೌಲ್ಯ ₹1.50 ಲಕ್ಷ) ಮಾಂಗಲ್ಯ ಸರವಿತ್ತು. ಆದರೆ ಮೃತದೇಹವನ್ನು ನೋಡಿದಾಗ ಕೊರಳಿನಲ್ಲಿದ್ದ ಕರಿಮಣಿ ಸರ ಮಾಯವಾಗಿತ್ತು.

​ದುಃಖದಲ್ಲಿದ್ದ ಕುಟುಂಬಸ್ಥರು, ಆಸ್ಪತ್ರೆಯಲ್ಲೇ ಯಾರೋ ಈ  ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.