ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ವಿಕೃತಿ!: ಚಲಿಸುವ ಖಾಸಗಿ ಬಸ್‌ನಲ್ಲಿ ಸಹಪ್ರಯಾಣಿಕರೆದುರು ವೃದ್ಧನ ಅಸಭ್ಯ ವರ್ತನೆ, ವೀಡಿಯೋ ಮಾಡಿದ ಪ್ರಯಾಣಿಕರು!

 


ಬಂಟ್ವಾಳ: ಕರಾವಳಿಯ ಖಾಸಗಿ ಬಸ್‌ನಲ್ಲಿ ವೃದ್ಧನೊಬ್ಬ ಸಹಪ್ರಯಾಣಿಕರ ಮುಂದೆ ತನ್ನ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿರುವ ಅಸಹ್ಯಕರ ಘಟನೆ ಜುಲೈ 30 ರಂದು ಮಧ್ಯಾಹ್ನ ನಡೆದಿದ್ದು, ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

​ನಡೆದಿದ್ದೇನು?

​ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಿಂದ ಉಪ್ಪಿನಂಗಡಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್‌ಗೆ ಜುಲೈ 30 ರಂದು ಮಧ್ಯಾಹ್ನ 2:10 ರ ಸುಮಾರಿಗೆ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಸುಮಾರು 60 ರಿಂದ 70 ವರ್ಷದ ವೃದ್ಧನೊಬ್ಬ ಹತ್ತಿದ್ದಾನೆ. ಬಸ್ ಚಾಲಕನ ಎಡಭಾಗದ ಸೀಟ್‌ನಲ್ಲಿ ಕುಳಿತಿದ್ದ ಈತ, ಮೆಲ್ಕಾರ್ ಜಂಕ್ಷನ್ ಬಂದಾಗ ಇಳಿದು ತೆರಳಿದ್ದಾನೆ.

​ಆದರೆ ಬಸ್‌ನಲ್ಲಿ ಚಲಿಸುತ್ತಿದ್ದಾಗ ಈ ವೃದ್ಧ ಇತರ ಪ್ರಯಾಣಿಕರು ಹಾಗೂ ಮಹಿಳೆಯರಿಗೆ ಕಾಣುವಂತೆ ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸಿ ವಿಕೃತವಾಗಿ ವರ್ತಿಸಿದ್ದಾನೆ.

​ಕ್ಯಾಮೆರಾದಲ್ಲಿ ವಿಕೃತಿ ಸೆರೆ:

​ವೃದ್ಧನ ಈ ವಿಕೃತ ನಡವಳಿಕೆಯನ್ನು ಬಸ್‌ನಲ್ಲಿದ್ದ ಜಾಗರೂಕ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ವಿಷಯ ಬಸ್ ಚಾಲಕನ ಗಮನಕ್ಕೆ ಬರುತ್ತಿದ್ದಂತೆಯೇ, ಅವರು ತಡಮಾಡದೇ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.

​ದೂರು ಸ್ವೀಕರಿಸಿದ ಬಂಟ್ವಾಳ ನಗರ ಪೊಲೀಸರು ಬಿಎನ್‌ಎಸ್ (BNS-2023) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ವೀಡಿಯೋ ದೃಶ್ಯಾವಳಿಗಳನ್ನು ಆಧರಿಸಿ ಕೃತ್ಯ ಎಸಗಿದ ವೃದ್ಧ ಯಾರೆಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ.