ನವದೆಹಲಿ: ಈ ದಂಪತಿಗೆ ಮದುವೆಯಾಗಿ 17 ವರ್ಷಗಳು ಕಳೆದಿದೆ. ಮೂವರು ಮಕ್ಕಳನ್ನು ಹೊಂದ್ದಾರೆ. ಆದರೂ ಪತ್ನಿಗೆ ಪತಿಯೊಂದಿಗೆ ಇರಬೇಕೋ ಬೇಡವೋ ಎಂಬ ಗೊಂದಲವೊಂದು ಕಾಡಿದೆ. ಈ ಗೊಂದಲಕ್ಕೆ ಇವರಿಬ್ಬರ ನಡುವಿನ ಅಸಲಿ ಸಂಬಂಧವೇ ಕಾರಣವಂತೆ.
ಯುಎಸ್‌ನ ಕೊಲೊರಡೊದ ಸೆಲಿನಾ ಕ್ವಿನಾನ್ಸ್ ಮತ್ತು ಜೋಸೆಫ್ ದಂಪತಿ 2006ರಲ್ಲಿ ವಿವಾಹವಾಗಿದ್ದರು.
ಮೂವರು ಮಕ್ಕಳೂ ಇದ್ದಾರೆ. ಆದರೆ ಮದುವೆಯಾಗಿ 17 ವರ್ಷಗಳ ಬಳಿಕ ಇವರಿಗೆ ತಾವು ಕಸಿನ್ಸ್ ಎಂಬುದು ಡಿಎನ್ಎ ಪರೀಕ್ಷೆಯಿಂದ ತಿಳಿದು ಬಂದಿದೆ. ಈ ದಂಪತಿ ತಮ್ಮ ವಂಶವೃಕ್ಷವನ್ನು ತಿಳಿಯುವ ಕುತೂಹಲದಿಂದ ಡಿಎನ್ಎ ಪರೀಕ್ಷೆ ಮಾಡಿಸಿದ್ದಾರೆ. ಈ ಡಿಎನ್ಎ ಪರೀಕ್ಷೆಯಲ್ಲಿ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿತ್ತು. ಇವರಿಬ್ಬರು ಇದೀಗ ಸಂಬಂಧದಲ್ಲಿ ಕಸಿನ್ಸ್ ಎಂದು ತಿಳಿದುಬಂದಿತ್ತು.
ತಾನು ಈ ಪರೀಕ್ಷೆ ವರದಿ ನೋಡಿ ದಿಗ್ಭ್ರಾಂತಗೊಂಡಿದ್ದು, ಇದೀಗ ಖಿನ್ನಳಾಗಿದ್ದೇನೆ. ಆದರೆ ಬಳಿಕ ನನ್ನ ಪತಿ ಆ ಬೇಸರದಿಂದ ಹೊರಬರುವಂತೆ ಮಾಡಿದ್ದರು. ನಾವು ಕಸಿನ್ಸ್ ಎಂದು ಗೊತ್ತಾದಾಗ ನಾವಿನ್ನು ಜೊತೆಗಿರಬೇಕೋ ಇಲ್ಲ ಬೇರೆಯಾಗಿ ಬಿಡಬೇಕೋ ಎಂಬ ಗೊಂದಲ ಕಾಡಿತ್ತು ಎಂದು ಸೆಲಿನಾ ತನ್ನ ಟಿಕ್‌ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಳು. ಅದಾಗ್ಯೂ ತಮ್ಮ ದಾಂಪತ್ಯ ಮುಂದುವರಿಸುವ ನಿಲುವು ತಳೆದಿರುವ ಸೆಲಿನಾ, ಐ ಲವ್ ಮೈ ಕಸಿನ್ ಎಂದು ಹೇಳಿಕೊಂಡಿದ್ದಾರೆ.