ಬೆಂಗಳೂರು ಗ್ಯಾಂಗ್ ರೇಪ್ ಪ್ರಕರಣ- ಮಾದಕದ್ರವ್ಯ ನೀಡಿ ಕಾಲೇಜು ಯುವತಿಯರನ್ನು ಖೆಡ್ಡಾಕ್ಕೆ ಕೆಡವುತ್ತಿದ್ದ ಕಾಮುಕರು


ಬೆಂಗಳೂರು: ಕಾಲೇಜು ಯುವತಿಯ ಮೇಲಿನ ಗ್ಯಾಂಗ್‌ರೇಪ್ ಆರೋಪ ಪ್ರಕರಣದ ತನಿಖೆ ವೇಳೆ ಬೆಚ್ಚಿಬೀಳಿಸುವ ಸಂಗತಿ ಹೊರಗೆ ಬಂದಿದೆ. ಮೊದಲಿಗೆ ಯುವತಿಯರೊಂದಿಗೆ ಸ್ನೇಹ ಬೆಳೆಸಿ ಅವರನ್ನು ಮಾದಕದ್ರವ್ಯಗಳ ಬಲೆಗೆ ಸಿಲುಕಿಸಿ, ಬಳಿಕ ಅತ್ಯಾಚಾರ ಎಸಗಿ, ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು  ಅಮೃತಹಳ್ಳಿ ಪೊಲೀಸರು ಬಯಲಿಗೆಳೆದ್ದಿದ್ದಾರೆ.

ನಿಖಿಲ್ ಮತ್ತು ಡಿಕ್ಸನ್ ಈ ಜಾಲದ ಪ್ರಮುಖ ಆರೋಪಿಗಳು. ಇವರಲ್ಲಿ ನಿಖಿಲ್ ಮಾಸ್ಟರ್‌ಮೈಂಡ್ ಎಂದು ತಿಳಿದುಬಂದಿದೆ. ನಿಖಿಲ್ ಹಾಸನ ಜಿಲ್ಲೆಯ ಸಕಲೇಶಪುರ ಮೂಲದವನು. ಡಿಕ್ಸನ್ ಪಶ್ಚಿಮ ಬಂಗಾಳ ರಾಜ್ಯದವನು. ನಿಖಿಲ್‌ಗೆ ಡಿಕ್ಸನ್ ರೀತಿಯಲ್ಲೇ ಮೂರು ನಾಲ್ಕು ಯುವಕರು ಆತನ ಗ್ಯಾಂಗ್‌ನಲ್ಲಿ ಇದ್ದರು. ನಿಖಿಲ್ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಒಂದು ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ ಮತ್ತು ಕಾರ್ ವಾಶಿಂಗ್ ಸೆಂಟರ್ ನಡೆಸುತ್ತಿದ್ದ. ನಿಖಿಲ್ ತನ್ನ ಗ್ಯಾಂಗ್‌ನ ಹುಡುಗರಿಗೆ ಆಗ್ಗಾಗ್ಗೆ ಹುಡುಗಿಯರನ್ನು ಕರೆಸುವುದಕ್ಕೆ‌ ಹೇಳುತ್ತಿದ್ದ. ಆದ್ದರಿಂದ  ಡಿಕ್ಸನ್ ಮತ್ತು ಟೀಮ್ ಕಾಲೇಜು ಹುಡುಗಿಯರ ಜೊತೆಗೆ ಸ್ನೇಹ ಬೆಳೆಸುತ್ತಿದ್ದರು.

ಆರೋಪಿಗಳು ಇನ್‌ಸ್ಟಾಗ್ರಾಮ್ ಮೂಲಕ ಪ್ರತಿಷ್ಠಿತ ಕಾಲೇಜುಗಳ ಯುವತಿಯರೊಂದಿಗೆ ಸ್ನೇಹ ಬೆಳೆಸಿ, ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದರು. ಅಲ್ಲಿ ಅವರಿಗೆ ಡ್ರಗ್ಸ್ ಬೆರೆಸಿದ ಪಾನೀಯಗಳನ್ನು ನೀಡಿ ಅಥವಾ ನೇರವಾಗಿ ಡ್ರಗ್ಸ್ ನೀಡಿ ಪ್ರಜ್ಞಾಹೀನರನ್ನಾಗಿಸುತ್ತಿದ್ದರು. ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿ, ಬೆತ್ತಲೆ ವಿಡಿಯೋಗಳು ಮತ್ತು ಫೋಟೊಗಳನ್ನು ತೆಗೆದು ಬ್ಲಾಕ್‌ಮೇಲ್ ಮಾಡುತ್ತಿದ್ದರು. ಈ ಮೂಲಕ ಅವರನ್ನು ಮತ್ತೆ ಮತ್ತೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಪಾರ್ಟಿಯ ಬಳಿಕ ಆರೋಪಿಗಳು ಏನೂ ಅರಿಯದವರಂತೆ ವರ್ತಿಸಿ, ಕುಡಿದ ನಶೆಯಲ್ಲಿದ್ದೆವು. ಏನಾಗಿದೆಯೆಂದು ಗೊತ್ತಿಲ್ಲ ಎಂದು ನಾಟಕವಾಡುತ್ತಿದ್ದರು. ಬಹಳಷ್ಟು ಯುವತಿಯರು ತಮ್ಮ ಗೌರವಕ್ಕೆ ಹೆದರಿ, ಪೊಲೀಸರಿಗೆ ದೂರು ನೀಡಲು ಹಿಂಜರಿಯುತ್ತಿದ್ದರು. ಆದರೆ, ಇತ್ತೀಚೆಗೆ ನಡೆದ ಘಟನೆಯಲ್ಲಿ ಯುವತಿಯೋರ್ವಳು ನೀಡಿರುವ ದೂರಿನಿಂದ ಆರೋಪಿಗಳ ಅಸಲಿ ಮುಖ ಬಯಲಾಗಿದೆ. ಇವರು ಸುಮಾರು 19ಯುವತಿಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.  ಹೀಗಾಗಿ ಈ ಮಾದಕಜಾಲದ ಹಿಂದೆ ರಾಜಕಾರಣಿಗಳು ಮತ್ತು ದೊಡ್ಡ ಹುದ್ದೆಗಳಲ್ಲಿರುವವರು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಆರೋಪಿಗಳಾದ ನಿಖಿಲ್, ಡಿಕ್ಸನ್ ಮತ್ತು ಇತರರು ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿ, ಫೋಟೋ ಶೂಟ್, ಮಾಡೆಲಿಂಗ್ ಅಥವಾ ಪಾರ್ಟಿಗಳ ನೆಪದಲ್ಲಿ ಯುವತಿಯರನ್ನು ಆಹ್ವಾನಿಸುತ್ತಿದ್ದರು. ಆರಂಭದಲ್ಲಿ ಪಬ್‌ಗಳು ಮತ್ತು ಕೆಫೆಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದರು. ಅಲ್ಲಿ ಯಾವುದೇ ಅಸಭ್ಯ ವರ್ತನೆ ಇರುತ್ತಿರಲಿಲ್ಲ. ಬಳಿಕ, ಆಫ್ಟರ್ ಪಾರ್ಟಿ ನೆಪದಲ್ಲಿ ವಿಲ್ಲಾಗಳಿಗೆ ಆಹ್ವಾನಿಸಿ ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸುತ್ತಿದ್ದರು. ಕೆಲವರು ಒಪ್ಪಿಕೊಂಡರೆ, ಕೆಲವರಿಗೆ ಮಾದಕ ದ್ರವ್ಯಗಳನ್ನು ಬಲವಂತವಾಗಿ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿತ್ತು.

ಆರೋಪಿಗಳು ಮುಖ್ಯವಾಗಿ ಪ್ರತಿಷ್ಠಿತ ಕಾಲೇಜುಗಳ ಯುವತಿಯರನ್ನು ಗುರಿಯಾಗಿಸಿಕೊಂಡಿದ್ದರು. ಅನ್ಯ ರಾಜ್ಯದ ಯುವತಿಯರೇ ಇವರ ಟಾರ್ಗೆಟ್​​ ಆಗಿತ್ತು. ದೂರು ನೀಡಿರುವ ಸಂತ್ರಸ್ತ ಯುವತಿ ಕೂಡ ಮೂಲತಃ ತಮಿಳುನಾಡಿನವಳು. ಡಿಕ್ಸನ್ ಈ ಯುವತಿಯನ್ನು ಪ್ರೀತಿಸುವ ನೆಪದಲ್ಲಿ ಸಂಪರ್ಕಿಸಿ, ವಿಶ್ವಾಸ ಗಳಿಸಿ ಪಾರ್ಟಿಗೆ ಕರೆದುಕೊಂಡು ಹೋಗಿದ್ದನು. ಆಕೆ ಸಹಕರಿಸಲು ನಿರಾಕರಿಸಿದಾಗ, ಮಾದಕ ದ್ರವ್ಯ ನೀಡಿ ಇಬ್ಬರು ಆರೋಪಿಗಳು ಬಲವಂತವಾಗಿ ಆಕೆಯನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.


ಇನ್ನು ಘಟನೆ ಸಂಬಂಧ ಫೆಬ್ರವರಿ 21ರಂದು ಯುವತಿ ದೂರು ನೀಡುವ ಮೊದಲು, ಆರೋಪಿ ನಿಖಿಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಆ ಯುವತಿ ತನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ದೂರು ದಾಖಲಿಸಿದ್ದ. ನಂತರ, ಯುವತಿಯ ದೂರಿನ ಆಧಾರದ ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಯುವತಿಯೇ ತಪ್ಪಿತಸ್ಥೆ ಎಂದು ಬಿಂಬಿಸಲು ಯತ್ನಿಸಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ಸಕಲೇಶಪುರದ ನಿಖಿಲ್​​ ಮತ್ತು ಪಶ್ಚಿಮ ಬಂಗಾಳದ ನಿಖಿಲ್​​ನ ಪೊಲೀಸರು ಬಂಧಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu