ಮಂಗಳೂರು: ಜೇನು ಕೃಷಿ ಕಲಿಸುತ್ತೇನೆಂದು ನಂಬಿಸಿ ಅಪ್ರಾಪ್ತೆಯನ್ನು ನಿರಂತರ ಅತ್ಯಾಚಾರಗೈದ ಆರೋಪಿಯನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಬ್ದುಲ್ ಗಫೂರ್ ಎಂಬಾತ ಪ್ರಕರಣದ ಆರೋಪಿ.
ಬೆಳಗಾವಿ ಮೂಲದ ದಂಪತಿ ತಮ್ಮ ಅಪ್ರಾಪ್ತ ಪುತ್ರಿಯೊಂದಿಗೆ ಕೆಲಸದ ನಿಮಿತ್ತ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಆರೋಪಿ ಅಬ್ದುಲ್ ಗಫೂರ್ ಇವರನ್ನು ಪರಿಚಯ ಮಾಡಿಕೊಂಡು ಅವರ ಅಪ್ರಾಪ್ತ ಪುತ್ರಿಗೆ ಜೇನು ಕೃಷಿ ಕಲಿಸುತ್ತೇನೆಂದು ಹೇಳಿದ್ದಾನೆ. ಅದರಂತೆ ದಂಪತಿ ತಮ್ಮ ಪುತ್ರಿಯನ್ನು 2ತಿಂಗಳಿನಿಂದ ಆರೋಪಿಯ ಮನೆಯಲ್ಲಿ ಬಿಟ್ಟಿದ್ದರು.
ಊರಿಗೆ ತೆರಳಿದ್ದ ಹೆತ್ತವರು ಡಿ.19ರಂದು ಮರಳಿದ್ದಾರೆ. ಈ ವೇಳೆ ಬಾಲಕಿ ಆರೋಪಿ ಡಿ.2ರ ಬಳಿಕ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿರುವುದಾಗಿ ತಿಳಿಸಿದ್ದಾಳೆ. ಅದರಂತೆ ಬಾಲಕಿಯ ಹೆತ್ತವರು ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ. ಕ್ರ 118/2025, ಕಲಂ:115(2),351(2),65(1) BNS-2023 4,6 ಪೊಕ್ಸೊ ಕಾಯ್ದೆ 2012ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.