ನಂತೂರು ಭೀಕರ ಅಪಘಾತ: ಸಹಸವಾರೆಯ ಮೇಲೆಯೇ ಹರಿದ ಬಸ್- ಯುವತಿ ಮೃತ್ಯು


ಮಂಗಳೂರು: ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ  ಡಿಕ್ಕಿಯಾಗಿ ಸಹಸವಾರೆಯ ಮೇಲೆಯೇ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ನಂತೂರು ವೃತ್ತದ ಬಳಿ ಬುಧವಾರ ರಾತ್ರಿ 7.45ರ ಸುಮಾರಿಗೆ ನಡೆದಿದೆ.

ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಎಂಬಾಕೆ ಮೃತಪಟ್ಟ ಯುವತಿ. ಈಕೆ ಕಿಶೋರ್(32) ಎಂಬವರೊಂದಿಗೆ ಶಿವಭಾಗ್ ಕಡೆಯಿಂದ ಸ್ಕೂಟರ್ ನಲ್ಲಿ ವಾಮಂಜೂರು ಕಡೆಗೆ ತೆರಳುತ್ತಿದ್ದರು. ಈ ವೇಳೆ, ಕದ್ರಿ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಸಾಗುತ್ತಿದ್ದ ಬಸ್ ಇವರಿದ್ದ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಸಹ ಸವಾರೆ ದೀಪ್ತಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ, ಬಸ್ ಆಕೆಯ ಹೊಟ್ಟೆಯ ಮೇಲೆ ಹರಿದಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ದೀಪ್ತಿಯನ್ನು ಎಜೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅಷ್ಟರಲ್ಲಿ ಆಕೆ ಅಸುನೀಗಿದ್ದಾರೆ. ಸ್ಕೂಟರ್‌ ಸವಾರ ಕಿಶೋರ್ ಅಪಾಯದಿಂದ ಪಾರಾಗಿದ್ದಾರೆ. 

BREAKING NEWS
Loading latest news...
Join our WhatsApp Channel Powered By : Online Pudu