ಪ್ರೇಯಸಿಯನ್ನು ಕೊಲೆಗೈದು ಶವದೊಂದಿಗೆ ಸೆಕ್ಸ್ ಮಾಡಿದ ವಿಕೃತಕಾಮಿ ಪ್ರಿಯಕರ- ಯೂಟ್ಯೂಬ್ ನೋಡಿ ಆಕೆಯ ಆತ್ಮದೊಂದಿಗೆ ಮಾತನಾಡಲು ಯತ್ನ



ಮಧ್ಯಪ್ರದೇಶ: ಇಂದೋ‌ರ್‌ನಲ್ಲಿ ಎಂಬಿಎ ವಿದ್ಯಾರ್ಥಿಯೋರ್ವನು ತನ್ನ ಪ್ರೇಯಸಿನ್ನು ಭೀಕರವಾಗಿ ಕೊಲೆಗೈದು, ಬಳಿಕ ಆಕೆಯ ಆತ್ಮವನ್ನು ವಶೀಕರಣ ಮಾಡಲು ಮಾಟಮಂತ್ರಕ್ಕೆ ಮೊರೆ ಹೋದ ವಿಚಿತ್ರ ಘಟನೆಯೊಂದು ನಡೆದಿದೆ.

ಪಿಯೂಷ್ ಧಮ್ನೋಡಿಯಾ ಎಂಬಾತ ತನ್ನ ಪ್ರೇಯಸಿ 24 ವರ್ಷದ ಎಂಬಿಎ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ್ದಾನೆ. ಇಂದೋರ್‌ನ ದ್ವಾರಕಪುರಿಯ ಅಪಾರ್ಟ್‌ಮೆಂಟ್‌ನಲ್ಲಿ ಗಲಾಟೆ ನಡೆದು, ಆರೋಪಿಯು ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಆರೋಪಿ ಪಿಯೂಷ್ ತನ್ನ ಪ್ರೇಯಸಿಯ ಕೈಕಾಲುಗಳನ್ನು ಕಟ್ಟಿ, ಆಕೆಯ ಎದೆಯ ಮೇಲೆ ಕುಳಿತು ಚಾಕುವಿನಿಂದ ಇರಿದಿದ್ದಾನೆ. ಇರಿತದ ರಭಸಕ್ಕೆ ಚಾಕುವೇ ಮುರಿದುಹೋಗಿದೆ ಎನ್ನಲಾಗಿದೆ. ಕೊಲೆಗೈದ ಬಳಿಕ ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬಳಿಕ ಶವದ ಪಕ್ಕದಲ್ಲೇ ಕುಳಿತು ಬಿಯರ್ ಕುಡಿದು ಪರಾರಿಯಾಗಿದ್ದಾನೆ.

ಮುಂಬೈಗೆ ಪರಾರಿಯಾಗಿದ್ದ ಆತ, ಅಲ್ಲಿನ ಹೋಟೆಲ್ ಗಳಲ್ಲಿ ತಂಗಿದ್ದಾಗ ಯೂಟ್ಯೂಬ್‌ನಲ್ಲಿ “ಆತ್ಮಗಳನ್ನು ಕರೆಯುವುದು ಹೇಗೆ?” ಎಂದು ಸರ್ಚ್ ಮಾಡಿದ್ದಾನೆ. ಕೊಲೆ ಮಾಡಿದ್ದಕ್ಕೆ ಕ್ಷಮೆ ಕೇಳಲು ಹಾಗೂ ಆಕೆಯೊಂದಿಗೆ ಮಾತನಾಡಲು ಧೂಪ ಬೆಳಗಿ ಮಾಟಮಂತ್ರದ ಮಾದರಿಯಲ್ಲಿ ಆಕೆಯ ಆತ್ಮವನ್ನು ಕರೆಯಲು ಪ್ರಯತ್ನಿಸಿದ್ದಾನೆ.

ಪ್ರೇಯಸಿ ತನ್ನೊಂದಿಗೆ ಮಾತನಾಡದೆ ಬೇರೆ ವ್ಯಕ್ತಿಯೊಂದಿಗೆ ಚಾಟ್ ಮಾಡುತ್ತಿದ್ದಳು ಎಂಬ ಅನುಮಾನ ಮತ್ತು ಕೋಪದಿಂದ ಈ ಕೃತ್ಯ ಎಸಗಿದ್ದಾನೆ. ಫೆಬ್ರವರಿ 10 ರಂದು ಯುವತಿ ಕಾಣೆಯಾಗಿದ್ದಳು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ತನ್ನ ಈ ಎಲ್ಲಾ ವಿಲಕ್ಷಣ ಮತ್ತು ಕ್ರೂರ ಕೃತ್ಯಗಳನ್ನು ಒಪ್ಪಿಕೊಂಡಿದ್ದಾನೆ.

ವಿಚಿತ್ರ ನಡವಳಿಕೆ: ಕೊಲೆಯ ನಂತರ ಆರೋಪಿಯು ಮಹಾರಾಷ್ಟ್ರದ ಪನ್ವೇಲ್ಲೆ ಪರಾರಿಯಾಗಿದ್ದನು. ಅಲ್ಲಿನ ಖಾಸಗಿ ಹೋಟೆಲ್ನಲ್ಲಿ ತಂಗಿದ್ದ ಆತ, ಯುವತಿಯ ಆತ್ಮವನ್ನು ಮಾತನಾಡಿಸಲು ಮತ್ತು ವಶೀಕರಣ ಮಾಡಲು ಮಾಟಮಂತ್ರದ ಪ್ರಯೋಗ ಮಾಡಿದ್ದ ಎನ್ನಲಾಗಿದೆ. ಫೆಬ್ರವರಿ 11 ರಂದು ಯುವತಿ ನಾಪತ್ತೆಯಾದ ಬಗ್ಗೆ ಆಕೆಯ ತಂದೆ ದೂರು ನೀಡಿದ್ದರು. ಫೆಬ್ರವರಿ 13 ರಂದು ಯುವತಿಯ ಮೃತದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಪಿಯೂಷನ್ನು ಬಂಧಿಸಿದಾಗ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಪ್ರಸ್ತುತ ಆರೋಪಿಯನ್ನು ಪೊಲೀಸರು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu