ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

15 ವರ್ಷಗಳಿಂದ ತಲೆಮರೆಸಿದ್ದ- ಪಿಟಾ ಪ್ರಕರಣದ ವಾರೆಂಟ್ ಆರೋಪಿ ಸೆರೆ

ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಅನೈತಿಕ ಮಾನವ ಕಳ್ಳಸಾಗಣೆ ತಡೆ ಕಾಯ್ದೆ (PITA) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ, ಹೆಸರು ಮತ್ತು ವಿಳಾಸ ಬದಲಿಸಿ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರೆಂಟ್ ಆರೋಪಿತೆಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತೆ:
ಸಫಿಯಾ (53) – ಪುತ್ತಿಗೆ ಗ್ರಾಮ, ಬಡಗಮಿಜಾರು, ಮೂಡಬಿದರೆ

ಆರೋಪಿತೆ ವಿರುದ್ಧ 2011ರಲ್ಲಿ ಪಿಟಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ದಸ್ತಗಿರಿ ಸಂದರ್ಭದಲ್ಲಿ ಸುಳ್ಳು ಹೆಸರು ಮತ್ತು ವಿಳಾಸ ನೀಡಿ ತಲೆಮರೆಸಿಕೊಂಡಿದ್ದಳು. ನ್ಯಾಯಾಲಯವು ಹಲವು ಬಾರಿ ವಾರೆಂಟ್ ಹೊರಡಿಸಿದ್ದರೂ ಹಾಜರಾಗಿರಲಿಲ್ಲ.

ಬೆರಳು ಮುದ್ರೆ (Fingerprint) ತಜ್ಞರ ವರದಿಯಲ್ಲಿ ಹಳೆಯ ಮತ್ತು ಹೊಸ ಬೆರಳಚ್ಚು ಹೋಲಿಕೆಯಾಗಿರುವುದು ದೃಢಪಟ್ಟಿದೆ. ಆಗಸ್ಟ್ 18ರಂದು ಮಹಿಳಾ ಪೊಲೀಸ್ ಠಾಣಾ ಸಿಬ್ಬಂದಿ ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

---

**