ಸಿ.ಎ. ಇಂಟರ್ ಮೀಡಿಯೆಟ್ ಫಲಿತಾಂಶ
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ
2026 ಜನವರಿಯಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿಗಳಾದ ತನ್ವಿ ಬಿ ಪೂಜಾರಿ, ರೆಹೆನಾಜ್, ಮೇಘನಾ ಪಿ ದೇವಾಡಿಗ ಹಾಗೂ ವೈಶ್ಣವಿ ಯು.ಕೆ. ಇವರು ಗ್ರೂಪ್-01 ಮತ್ತು ಗ್ರೂಪ್-02 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊAದಿಗೆ ಉತ್ತೀರ್ಣರಾಗಿದ್ದಾರೆ.
ಇಂಟರ್ ಮೀಡಿಯಟ್ ಗ್ರೂಪ್-02 ವಿಭಾಗದಲ್ಲಿ ತನುಶ್ರೀ ಯು, ಪ್ರಜ್ಞಾ ಪೂಜಾರಿ, ಸ್ವಾತಿ, ಪನ್ನಗ ಜೈನ್, ಧನ್ಯಾ ಜಿ ಶೆಟ್ಟಿ ಹಾಗೂ ಗಿರೀಶ್ ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಇಂಟರ್ ಮೀಡಿಯಟ್ ಗ್ರೂಪ್-01 ವಿಭಾಗದಲ್ಲಿ ಶ್ರೀನಿಧಿ, ಅಚಿಂತ್ಯ ಭಾರಧ್ವಜ್, ಅಮೃತಾ ಪ್ರವೀಣ್ ಕಟ್ವಾ, ವೃಂದಾ ವಿ. ವಿ. ರೈ, ಅನಿಶಾ, ದಿನೇಶ್ ಎನ್., ಝಾನ್ಸಿ ಎಂ. ಹಾಗೂ ಪೂರ್ಣ ಪೂಜಾರಿ ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್, ಡೀನ್ ಪ್ರಶಾಂತ್ ಎಮ್‌ಡಿ ಹಾಗೂ ಸಂಯೋಜಕಿ ಅಪರ್ಣಾ ಅಭಿನಂದಿಸಿದ್ದಾರೆ.