EMUNGARU @ SINCE 2017
BREAKING
[ಹೋಮ್] ಕರಾವಳಿ
[ಹೋಮ್] ರಾಜ್ಯ
[ಹೋಮ್] ಗ್ಲಾಮರ್
[ಹೋಮ್] ಕ್ರೈಂ
[ಹೋಮ್] ವಿಶೇಷ
[ಹೋಮ್] ದೇಶ ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ತಂತ್ರಜ್ಞಾನ
COASTAL

ಪರಿವರ್ತನಾ ಕೋ-ಅಪರೇಟಿವ್ ಸೊಸೈಟಿ (ಅ.) ಬಜಪೆ ಇದರ ನೂತನ ಕಿನ್ನಿಗೋಳಿ ಶಾಖೆ ನ. 27 ರಂದು ಉದ್ಘಾಟನೆ; ಗ್ರಾಹಕರಿಗೆ 10% ವಿಶೇಷ ಬಡ್ಡಿ ದರದ ಕೊಡುಗೆ

 


ಕಿನ್ನಿಗೋಳಿ: ಬಜಪೆಯನ್ನು ಕೇಂದ್ರ ಕಛೇರಿಯನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಪರಿವರ್ತನಾ ಕೋ-ಅಪರೇಟಿವ್ ಸೊಸೈಟಿ (ಅ.) ಇದರ ನೂತನ ಕಿನ್ನಿಗೋಳಿ ಶಾಖೆಯ ಉದ್ಘಾಟನಾ ಸಮಾರಂಭವು ನವೆಂಬರ್ 27, 2026ರ ಶುಕ್ರವಾರ ಬೆಳಿಗ್ಗೆ 10:00 ಗಂಟೆಗೆ ಕಿನ್ನಿಗೋಳಿಯ ಉಲ್ಲಂಜೆ-ರಾಮಮಂದಿರ ರಸ್ತೆಯಲ್ಲಿರುವ 'ಉಟೋಪಿಯಾ' ಕಟ್ಟಡದ ಮೊದಲನೇ ಮಹಡಿಯಲ್ಲಿ ನಡೆಯಲಿದೆ.

ಉದ್ಘಾಟನಾ ಸಮಾರಂಭದ ವಿವರ:

  • ಉದ್ಘಾಟನೆ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಶ್ರೀ ಗುರುರಾಜ್ ಮಲ್ಲಿಗೆಯಂಗಡಿ
  • ಅಧ್ಯಕ್ಷತೆ: ಪರಿವರ್ತನಾ ಕೋ-ಅಪರೇಟಿವ್ ಸೊಸೈಟಿ (ಲಿ.), ಬಜಪೆ ಇದರ ಅಧ್ಯಕ್ಷ ಶ್ರೀ ಕೃಷ್ಣಾನಂದ ಡಿ.
  • ಮುಖ್ಯ ಅತಿಥಿಗಳು: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀ ಜೋಸೆಫ್ ಕ್ವಾಡ್ರಸ್, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕೌನ್ಸಿಲರ್ ಶ್ರೀ ದಾಮೋದರ್ ಶೆಟ್ಟಿ ಕೊಡೆತ್ತೂರು, ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ ಶ್ರೀ ಸೋಮಪ್ಪ ಅಲಂಗಾರ್, ಕಿನ್ನಿಗೋಳಿ ನಮನ ಎಂಟರ್‌ಪ್ರೈಸಸ್‌ನ ಯುವ ಉದ್ಯಮಿ ಶ್ರೀ ಶರತ್ ಕುಮಾರ್ ಹೆಚ್.ಆರ್., ಕ.ದ.ಸಂ.ಸ. (ಸ್ವಾಭಿಮಾನಿ ಬಿ. ಕೃಷ್ಣಪ್ಪ ಬಣ) ಜಿಲ್ಲಾ ಮಹಿಳಾ ಸಂಚಾಲಕಿ ಶ್ರೀಮತಿ ಸರೋಜಿನಿ, ಕಟೀಲು ನಂದಿನಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಶಶಿಧರ್ ಶೆಟ್ಟಿ ಕಟೀಲು, ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಶ್ರೀ ಬಿ.ಕೆ. ಇಮ್ತಿಯಾಝ್, ಬಜಪೆ ಸಿದ್ಧಾರ್ಥ ನಗರದ ಮಂಗಳೂರು ವಿಮಾನ ನಿಲ್ದಾಣ ನಿರ್ವಸಿತರ ಅಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀ ವೆಂಕಪ್ಪ, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜಪೆ, ಕಟ್ಟಡ ಮಾಲಕ ಶ್ರೀ ಕೆ. ವೇದವ್ಯಾಸ ಉಡುಪ, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಸಚಿವ (ಆಡಳಿತ) ಶ್ರೀ ಪದ್ಮನಾಭ ಬಿ., ಮಂಗಳೂರು ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀ ಎಂ. ಶಿವಲಿಂಗಯ್ಯ, ಕಟೀಲು ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಉಷಾ ಹಾಗೂ ಐಕಳ ಗ್ರಾಮೀಣ ಅಂಚೆ ನೌಕರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶ್ರೀ ಹರೀಶ್ವರ್ ರಾವ್ ಉಪಸ್ಥಿತರಿರುವರು.

ಉದ್ಘಾಟನಾ ಸಂಭ್ರಮದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ:

ನೂತನ ಕಿನ್ನಿಗೋಳಿ ಶಾಖೆಯ ಉದ್ಘಾಟನೆಯ ಪ್ರಯುಕ್ತ ಸೀಮಿತ ಅವಧಿಯವರೆಗೆ ಒಂದು ವರ್ಷದ ಅವಧಿಯ ಹೊಸ ನಿರಖು ಠೇವಣಿ (FD) ಗಳಿಗೆ ವಾರ್ಷಿಕ 10% ಅತ್ಯಾಕರ್ಷಕ ಬಡ್ಡಿ ದರ ನೀಡಲಾಗುತ್ತಿದೆ. ಅಲ್ಲದೆ, ಹಿರಿಯ ನಾಗರಿಕರು, ಸಂಘ-ಸಂಸ್ಥೆಗಳು, ವಿಧವೆಯರು, ಮಾಜಿ ಸೈನಿಕರು ಹಾಗೂ ವಿಶೇಷ ಚೇತನರಿಗೆ 0.5% ಹೆಚ್ಚುವರಿ ಬಡ್ಡಿ ಸೌಲಭ್ಯವನ್ನು ಸಂಸ್ಥೆ ಪ್ರಕಟಿಸಿದೆ.

ಸಂಸ್ಥೆಯ ಪ್ರಮುಖ ಸೇವೆಗಳು:

  • ಪರಿವರ್ತನಾ ನಗದು ಪತ್ರ (84 ತಿಂಗಳಲ್ಲಿ ದ್ವಿಗುಣವಾಗುವ ಯೋಜನೆ)
  • ಗಣಕೀಕೃತ ಬ್ಯಾಂಕಿಂಗ್ ಸೇವೆ, NEFT/RTGS ಹಾಗೂ ಇ-ಸ್ಟ್ಯಾಂಪ್ (E-Stamp) ಸೌಲಭ್ಯ
  • ವಿವಿಧ ಸಾಲ ಸೌಲಭ್ಯಗಳು, ಮಾಸಿಕ ಠೇವಣಿ (RD), ನಿತ್ಯನಿಧಿ ಠೇವಣಿ (ಪಿಗ್ಗಿ) ಹಾಗೂ ಸ್ವ-ಸಹಾಯ ಸಂಘಗಳ ಪ್ರವರ್ತನೆ

ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ವೈಶಾಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರೀಶಾ, ಮಂಗಳೂರು ಶಾಖಾ ವ್ಯವಸ್ಥಾಪಕಿ ಶ್ರೀಮತಿ ಲಾವಣ್ಯ, ಕಿನ್ನಿಗೋಳಿ ಶಾಖಾ ವ್ಯವಸ್ಥಾಪಕಿ ಕು. ಶ್ರೇಯಾ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

📢 ಇ ಮುಂಗಾರು WhatsApp ಚಾನೆಲ್ — ತಕ್ಷಣದ ಬ್ರೇಕಿಂಗ್ ನ್ಯೂಸ್!