ವೈರಲ್ ವಿಡಿಯೋದ ಹಿನ್ನೆಲೆ:
ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ ಮುಖ್ಯಾಂಶಗಳು:
ಬಲವಂತವಾಗಿ ವಾಹನಕ್ಕೆ ತಳ್ಳಿ ಕರೆದೊಯ್ದ ಆರೋಪ: ಯುವತಿಯು ಹಿಂದೂ ಯುವಕನೊಂದಿಗೆ ಪ್ರೀತಿಯಲ್ಲಿದ್ದಳು ಎಂಬುದು ವೈರಲ್ ಪೋಸ್ಟ್‌ನಿಂದ ಮೇಲ್ನೋಟಕ್ಕೆ ತಿಳಿದುಬಂದಿದೆ
. ಯುವತಿಯ ಕುಟುಂಬಸ್ಥರು ಕಳುಹಿಸಿದ ವ್ಯಕ್ತಿಗಳು ಆಕೆಯನ್ನು ಎಳೆದಾಡಿ, ಬಲವಂತವಾಗಿ ವಾಹನದೊಳಗೆ ತಳ್ಳಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಕರೆದೊಯ್ದಿದ್ದಾರೆ. ವಯಸ್ಕರ ಮೇಲೆ ಬಲಪ್ರಯೋಗ ಕಾನೂನುಬಾಹಿರ: ಯುವತಿಯು ವಯಸ್ಕರಾಗಿದ್ದು (Major), ತಾನು ಎಲ್ಲಿ ವಾಸಿಸಬೇಕು ಎಂಬುದನ್ನು ಸ್ವತಂತ್ರವಾಗಿ ನಿರ್ಧರಿಸುವ ಸಂಪೂರ್ಣ ಕಾನೂನುಬದ್ಧ ಹಕ್ಕು ಆಕೆಗಿದೆ. ವಯಸ್ಕರ ಇಚ್ಛೆಗೆ ವಿರುದ್ಧವಾಗಿ ಅವರ ಮೇಲೆ ಬಲಪ್ರಯೋಗ ಮಾಡುವುದು, ಎಳೆದಾಡುವುದು, ಕೂಡಿಹಾಕುವುದು ಅಥವಾ ಅಪಹರಿಸುವುದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ.
ತಕ್ಷಣ ಮಾಹಿತಿ ನೀಡಿದ್ದರೆ ವಾಹನ ತಡೆಯಬಹುದಿತ್ತು: ಘಟನೆ ನಡೆದ ತಕ್ಷಣವೇ ಪೊಲೀಸರಿಗೆ ದೂರು ಅಥವಾ ಮಾಹಿತಿ ನೀಡಿದ್ದರೆ, ವಾಹನವು ದೂರ ಸಾಗುವ ಮೊದಲೇ ಅದನ್ನು ತಡೆದು ನಿಲ್ಲಿಸಲು ಸಾಧ್ಯವಾಗುತ್ತಿತ್ತು.
ಮನೆಗೆ ಬೀಗ ಹಾಕಿರುವುದು ಪತ್ತೆ: ಪೊಲೀಸರು ಯುವತಿಯ ಮನೆಗೆ ತೆರಳಿ ಪರಿಶೀಲಿಸಿದಾಗ ಮನೆಗೆ ಬೀಗ ಹಾಕಿರುವುದು ಕಂಡುಬಂದಿದೆ. ಪ್ರಕರಣದ ತನಿಖೆ ಹಾಗೂ ಯುವತಿಯ ಪತ್ತೆಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ.
ಯುವತಿ ಪತ್ತೆಯಾದ ಬಳಿಕ ಸತ್ಯಾಂಶ ಬಯಲಿಗೆ: ಯುವತಿಯನ್ನು ಪತ್ತೆಹಚ್ಚಿದ ಬಳಿಕ ಆಕೆಯಿಂದಲೇ ಘಟನೆಯ ಸಂಪೂರ್ಣ ಸತ್ಯಾಂಶ ತಿಳಿದುಬರಲಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
