ಪುತ್ರಿಯ ಬರ್ತ್‌ಡೇ ಆಚರಣೆಗೆಂದು ದುಬೈ ಪ್ರವಾಸ ಕೈಗೊಂಡಿದ್ದ ಬೆಂಗಳೂರು ದಂಪತಿ ಅಬುಧಾಬಿಯಲ್ಲಿ ಲಾಕ್

ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಪುತ್ರಿಯ ಹುಟ್ಟುಹಬ್ಬ ಆಚರಣೆಗೆಂದು ದುಬೈ ಪ್ರವಾಸ ಕೈಗೊಂಡಿದ್ದ ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಲಾಕ್ ಆಗಿದ್ದಾರೆ.

ಕಿರಣ್ ಹಾಗೂ ಸುನೀತ ದಂಪತಿ ತಮ್ಮಪುತ್ರಿಯ ಹುಟ್ಟುಹಬ್ಬವನ್ನು ಅವಿಸ್ಮರಣೀಯವಾಗಿ ಆಚರಿಸಲು ಫೆ.23ರಂದು ಬೆಂಗಳೂರಿನಿಂದ ದುಬೈ ಪ್ರವಾಸ ಕೈಗೊಂಡಿದ್ದರು. ಅಂದುಕೊಂಡಂತೆ ಬುರ್ಜ್ ಖಲೀಫಾ ಮುಂದೆ ಪುತ್ರಿಯ ಬರ್ತಡೇ ಆಚರಿಸಿ ಕೇಕ್ ಕಟ್ ಕೂಡಾ ಮಾಡಿದ್ದರು. ಶನಿವಾರ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಬುಕ್ ಆಗಿತ್ತು. ಶನಿವಾರ ಮಧ್ಯಾಹ್ನ ಅಬುಧಾಬಿ ಏರ್‌ಪೋರ್ಟ್‌ಗೆ ಆಗಮಿಸಿ, ಇಮಿಗ್ರೇಷನ್ ಕೂಡ ಮುಗಿಸಿ ಇನ್ನೇನು ವಿಮಾನದಲ್ಲಿ ವಾಪಸ್‌ ಭಾರತಕ್ಕೆ ಬರಬೇಕಾಗಿತ್ತು. ಆದರೆ ಅಷ್ಟರಲ್ಲಿ ಮಿಸೈಲ್ ದಾಳಿ ಆರಂಭವಾಗಿ ಅವರು ವಾಪಸ್ ಬರಲಾಗದೇ ಅಲ್ಲೇ ಸಿಲುಕಿಕೊಂಡಿದ್ದಾರೆ.

ಇದೋಗ ಸೇಫ್ ಆಗಿ ಭಾರತಕ್ಕೆ ಬಂದರೆ ಸಾಕು ಎಂದು ದಂಪತಿ ಪ್ರತಿಕ್ಷಣ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಸುನೀತಾ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ನಮ್ಮನ್ನು ಅದಷ್ಟು ಬೇಗ ಸೇಫ್ ಆಗಿ ರಾಜ್ಯಕ್ಕೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. 

ನಮಗೆ ತುಂಬಾ ಭಯ ಆಗುತ್ತಿದೆ. ಶನಿವಾರ ದಿನಪೂರ್ತಿ ಏರ್‌ಪೋರ್ಟ್‌ನಲ್ಲೇ ಇದ್ದೆವು. ಬಳಿಕ ಅಲ್ಲಿನ ಅಧಿಕಾರಿಗಳು ಹೋಟೆಲ್‌ಗೆ ಶಿಫ್ಟ್ ಮಾಡಿಸಿದ್ದಾರೆ. ಆದರೂ ಇಲ್ಲಿ ಭಯ ಆಗುತ್ತಿದೆ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ನಮ್ಮನ್ನ ಅದಷ್ಟು ಬೇಗ ಸೇಫ್ ಆಗಿ ರಾಜ್ಯಕ್ಕೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಸದ್ಯ ದಂಪತಿ ಯುದ್ದ ಭಯದಲ್ಲೇ ಹೋಟೆಲ್‌ನಲ್ಲಿ ಆಶ್ರಯ ಪಡೆದಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu