-->
ಸುಳ್ಯ: ಅಯ್ಯಪ್ಪ ಸ್ವಾಮಿ ಮಾಲಾಧಾರಿ ಪುಟ್ಟ ಬಾಲಕ ಕೈಹಿಡಿದು ರಸ್ತೆ ದಾಟಿಸುತ್ತಿರುವ ಮುಸ್ಲಿಂ ವೃದ್ಧ; ಕೋಮುಸಾಮರಸ್ಯ ಸಾರಿದ ಫೋಟೋ

ಸುಳ್ಯ: ಅಯ್ಯಪ್ಪ ಸ್ವಾಮಿ ಮಾಲಾಧಾರಿ ಪುಟ್ಟ ಬಾಲಕ ಕೈಹಿಡಿದು ರಸ್ತೆ ದಾಟಿಸುತ್ತಿರುವ ಮುಸ್ಲಿಂ ವೃದ್ಧ; ಕೋಮುಸಾಮರಸ್ಯ ಸಾರಿದ ಫೋಟೋ


ಸುಳ್ಯ: ಕೋಮುಸೂಕ್ಷ್ಮ ಪ್ರದೇಶವೆಂದು ಹಣೆಪಟ್ಟಿ ಹೊತ್ತಿರುವ ದ.ಕ.ಜಿಲ್ಲೆಯು ಕೋಮುಸೌಹಾರ್ದತೆಗೂ ಆಗಾಗ ಸಾಕ್ಷಿಯಾಗುತ್ತಲೇ ಇರುತ್ತದೆ. ಇದೀಗ ವೈರಲ್ ಆಗುತ್ತಿರುವ ಫೋಟೊವೊಂದು ಇಲ್ಲಿ ಸೌಹಾರ್ದತೆ ಮರೆಯಾಗಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ.

ಸುಳ್ಯದ ಕಲ್ಲುಗುಂಡಿಯಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿ ಪುಟಾಣಿ ಮಗುವನ್ನು ಮುಸ್ಲಿಂ ವೃದ್ಧರೋರ್ವರು ಕೈ ಹಿಡಿದು ರಸ್ತೆ ದಾಟಿಸಿ ಹಣ್ಣು ತೆಗೆದುಕೊಟ್ಟು ಉಪಚರಿಸಿರುವ ಫೋಟೋವೊಂದು ಜನರ ಗಮನ ಸೆಳೆಯುತ್ತಿದೆ. ಇಬ್ರಾಹಿಂ ಮೈಲಿಕಲ್ಲು ಎಂಬ ಹಿರಿಯ ನಾಗರಿಕರೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಆಗ ಅಯ್ಯಪ್ಪ ಮಾಲಾಧಾರಿ ಪುಟ್ಟ ಹುಡುಗ  ರಸ್ತೆ ದಾಟುವುದಕ್ಕೆ ಪ್ರಯತ್ನಿಸುತ್ತಿದ್ದನು. ಆದರೆ ವಾಹನಗಳ ಓಡಾಟದಿಂದ ಆತನಿಗೆ ರಸ್ತೆ ದಾಟಲು ಸಾಧ್ಯವಾಗುತ್ತಿರಲಿಲ್ಲ. 

ಇದನ್ನು ಗಮನಿಸಿದ ಇಬ್ರಾಹಿಂ ಸಾಹೀಬರು ಆತನ ಕೈ ಹಿಡಿದು ರಸ್ತೆ ದಾಟಿಸಿದ್ದಾರೆ. ಅಲ್ಲದೆ ಆತನನ್ನು ಹಣ್ಣಿನಂಗಡಿಗೆ ಕರೆದೊಯ್ದು ಹಣ್ಣು ನೀಡಿ ಕಳುಹಿಸಿಕೊಟ್ಟಿದ್ದಾರೆ. ಇಬ್ರಾಹಿಂ ಅವರು ಪುಟ್ಟ ಹುಡುಗನ ಕೈಹಿಡಿದು ರಸ್ತೆ ದಾಟಿಸುತ್ತಿರುವ ಫೋಟೋವನ್ನು ಯಾರೋ ಕ್ಲಿಕ್ಕಿಸಿದ್ದು ಈ ಫೋಟೋ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article