ಸೈಬರ್ ಜಾಗೃತಿ ಆಧಾರಿತ ಟೆಕ್ ಯುವ ಉತ್ಸವ: ವಿದ್ಯಾರ್ಥಿಗಳಿಂದ ಹ್ಯಾಕಿಂಗ್, ಫಿಷಿಂಗ್, ವೆಬ್ ಡಿಸೈನಿಂಗ್ ಪ್ರದರ್ಶನ



ಮಂಗಳೂರು: ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ವತಿಯಿಂದ ಆಯೋಜಿಸಲಾದ “ಟೆಕ್ ಯುವ 2026” ತಾಂತ್ರಿಕ ಉತ್ಸವದಲ್ಲಿ ಸೈಬರ್ ಜಾಗೃತಿ ಪರಿಕಲ್ಪನೆಯನ್ನು ಕೇಂದ್ರವಾಗಿಟ್ಟುಕೊಂಡು ಹಲವು ತಾಂತ್ರಿಕ ಸ್ಪರ್ಧೆಗಳು ನಡೆಯುತ್ತಿವೆ. ಹ್ಯಾಕಿಂಗ್, ಫಿಷಿಂಗ್, ವೆಬ್ ಡಿಸೈನಿಂಗ್, ರೋಬೋಟಿಕ್ಸ್ ಸೇರಿದಂತೆ ವಿವಿಧ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಕೌಶಲ್ಯವನ್ನು ಪ್ರದರ್ಶಿಸಿದರು.


ಎರಡು ದಿನಗಳ ಕಾಲ ನಡೆಯುತ್ತಿರುವ ಈ ಉತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳ ಇಂಜಿನಿಯರಿಂಗ್ ಹಾಗೂ ಡಿಪ್ಲೋಮಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಪರ್ಫೆಕ್ಟ್ ಕೋಡ್, ಬ್ಲೈಂಡ್ ಕೋಡಿಂಗ್, ವೆಬ್ ಡಿಸೈನ್, ಪ್ರಾಂಪ್ಟ್ ಇಂಜಿನಿಯರಿಂಗ್, ಐಡಿಯಥಾನ್, ಸ್ಟಾರ್ಟ್‌ಅಪ್ ಪಿಚ್, ಪ್ರಾಜೆಕ್ಟ್ ಎಕ್ಸ್ಪೋ ಮುಂತಾದ ಹಲವು ಸ್ಪರ್ಧೆಗಳು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ನವೀನ ಆಲೋಚನೆ ಮತ್ತು ತಾಂತ್ರಿಕ ಜ್ಞಾನವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.


ಕಾರ್ಯಕ್ರಮದಲ್ಲಿ ಮಾತನಾಡಿದ ಯುನಿಫೈ ಸಿಎಕ್ಸ್ ಸಂಸ್ಥೆಯ ಚೀಫ್ ಪೀಪಲ್ ಸರ್ವಿಸ್ ಆಫೀಸರ್ ಶ್ಯಾಮ್ ಪ್ರಸಾದ್ ಹೆಬ್ಬಾರ್ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಭದ್ರತೆ ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಹೇಳಿದರು. ಆನ್‌ಲೈನ್ ವ್ಯವಹಾರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಅಪಾಯಗಳ ಬಗ್ಗೆ ಜಾಗೃತಿ ಮತ್ತು ಸುರಕ್ಷಿತ ಡಿಜಿಟಲ್ ಬಳಕೆ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಡೀನ್ ಡಾ. ರಾಮಕೃಷ್ಣ ಎನ್. ಹೆಗಡೆ, ಸಂಚಾಲಕ ಪ್ರೊ. ಕೆ. ಶ್ರೀನಾಥ್ ರಾವ್ ಹಾಗೂ ವಿದ್ಯಾರ್ಥಿಗಳು ಸೈಬರ್ ಭದ್ರತೆ ಮತ್ತು ತಂತ್ರಜ್ಞಾನ ಕ್ಷೇತ್ರದ ಮಹತ್ವದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.



--

BREAKING NEWS
Loading latest news...
Join our WhatsApp Channel Powered By : Online Pudu