ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಆರ್.ವಿ.ಆರ್ ಹೆಲ್ತ್‌ಕೇರ್‌ನಿಂದ ಕಾಸರಗೋಡಿನಲ್ಲಿ ನ್ಯೂರೋ-ಆಂಕಾಲಜಿ ಕೇಂದ್ರ: ‘ಆರೋಗ್ಯ ಬೈ ಆರ್.ವಿ.ಆರ್’ ದೇಶಾದ್ಯಂತ ವಿಸ್ತರಣೆ!


ಮಂಗಳೂರು
:
ಪ್ರಸಿದ್ಧ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಸ್ಥೆಯಾದ ಆರ್.ವಿ.ಆರ್ ಹೆಲ್ತ್ಕೇರ್ ತನ್ನ ವೈದ್ಯಕೀಯ ಸೇವೆಯನ್ನು ವಿಸ್ತರಿಸುವ ಮಹತ್ವದ ಯೋಜನೆಯ ಭಾಗವಾಗಿ ಕೇರಳದ ಕಾಸರಗೋಡಿನಲ್ಲಿ ನೂತನ 'ನ್ಯೂರೋ-ಆಂಕಾಲಜಿ ಕೇಂದ್ರ' (Neuro-Oncology Centre) ಪ್ರಾರಂಭಿಸಲು ನಿರ್ಧರಿಸಿದೆ. ಇದರೊಂದಿಗೆ ತನ್ನ ಸಮಾಜಮುಖಿ ಸೇವೆಯಾದ 'ಆರೋಗ್ಯ ಬೈ ಆರ್.ವಿ.ಆರ್' (Arogya by RVR) ಉಚಿತ ಆರೋಗ್ಯ ತಪಾಸಣೆ ಮತ್ತು ಆಪ್ತಸಮಾಲೋಚನೆ ಕಾರ್ಯಕ್ರಮವನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಘೋಷಿಸಿದೆ.

ಸಾಮಾನ್ಯ ಜನರಿಗೂ ರಿಯಾಯಿತಿ ದರದಲ್ಲಿ ಅತ್ಯಾಧುನಿಕ ಹಾಗೂ ಉನ್ನತ ಮಟ್ಟದ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಒದಗಿಸುವ ಆಶಯದೊಂದಿಗೆ ವಿಸ್ತರಣಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಏಪ್ರಿಲ್ನಲ್ಲಷ್ಟೇ ಶುರುವಾಗಿದ್ದ ಆಸ್ಪತ್ರೆ:

ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆರ್.ವಿ.ಆರ್ ಹೆಲ್ತ್ಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಇತ್ತೀಚೆಗಷ್ಟೇ ಅಂದರೆ 2026 ಏಪ್ರಿಲ್ 24 ರಂದು ಸ್ಥಾಪನೆಯಾಗಿತ್ತು. ವಿಶ್ವದರ್ಜೆಯ ವೈದ್ಯಕೀಯ ಚಿಕಿತ್ಸೆಯನ್ನು ಕರುಣಾಪೂರ್ವಕ ಆರೈಕೆಯೊಂದಿಗೆ ಕೈಗೆಟುಕುವ ವೆಚ್ಚದಲ್ಲಿ ಸಾರ್ವಜನಿಕರಿಗೆ ತಲುಪಿಸುವ ಧೈಯೋದ್ದೇಶದೊಂದಿಗೆ ಆಸ್ಪತ್ರೆ ಕಾರ್ಯಾರಂಭ ಮಾಡಿತ್ತು.

ಆಸ್ಪತ್ರೆಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಉದ್ಯಮಿ ವಿಜಯ್ ಎಂ.ಎನ್. ಶೆಟ್ಟಿ ಅವರು, ಪ್ರತಿಯೊಬ್ಬರಿಗೂ ಅವರ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎಂಬ ಸಾಮಾಜಿಕ ಕಾಳಜಿಯಿಂದ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. "ಅತ್ಯಾಧುನಿಕ ವೈದ್ಯಕೀಯ ಸೇವೆ ಒದಗಿಸುವ ವಿಚಾರದಲ್ಲಿ ನಾವು ವೆಚ್ಚದ ಕಾರಣಕ್ಕೆ ಎಂದಿಗೂ ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ" ಎಂದು ವಿಜಯ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಅನುಭವಿ ವೈದ್ಯರ ತಂಡ:

ಸಂಸ್ಥೆಯ ನಿರ್ದೇಶಕರಲ್ಲೊಬ್ಬರಾದ ಹಿರಿಯ ನರರೋಗ ಶಸ್ತ್ರಚಿಕಿತ್ಸಕ (Senior Neurosurgeon) ಡಾ. (ಪ್ರೊ.) ರಾಘವೇಂದ್ರ ಬಿ.ಎಸ್. ಅವರು ಆಸ್ಪತ್ರೆಯ ಚಿಕಿತ್ಸಾ ವಿಭಾಗದ ಮಾರ್ಗದರ್ಶನ ವಹಿಸಿಕೊಂಡಿದ್ದಾರೆ. ಜೊತೆಗೆ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಮನೀಶ್ ರೈ ಸೇರಿದಂತೆ ನರರೋಗ, ನ್ಯೂರೋ ಸರ್ಜರಿ, ಆಂಕಾಲಜಿ (ಅರ್ಬುದ ರೋಗ) ಹಾಗೂ ವಿವಿಧ ವಿಭಾಗಗಳ ಹಿರಿಯ ತಜ್ಞ ವೈದ್ಯರ ಬಳಗ ಆಸ್ಪತ್ರೆಯಲ್ಲಿದೆ.

ಕಾಸರಗೋಡಿನಲ್ಲಿ ಮೊದಲ ಹೊರರಾಜ್ಯ ಕೇಂದ್ರ:

ಕರ್ನಾಟಕದ ಹೊರಗೆ ಆರ್.ವಿ.ಆರ್ ಹೆಲ್ತ್ಕೇರ್ ಮೊದಲ ಪ್ರಮುಖ ವಿಸ್ತರಣೆಯಾಗಿ ಜುಲೈ 26 ರಂದು ಕಾಸರಗೋಡಿನಲ್ಲಿ ನ್ಯೂರೋ-ಆಂಕಾಲಜಿ ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಲಾಗುತ್ತಿದೆ. ಕೇಂದ್ರವು ನರಮಂಡಲಕ್ಕೆ ಸಂಬಂಧಿಸಿದ ಕ್ಯಾನ್ಸರ್ ಹಾಗೂ ನರರೋಗಗಳಿಗೆ ಅತ್ಯಾಧುನಿಕ ಉಪಕರಣಗಳು ಮತ್ತು ನರಿಣಿತ ವೈದ್ಯರ ತಂಡದ ಮೂಲಕ ನಿಖರ ರೋಗನಿರ್ಣಯ ಹಾಗೂ ವಿಶೇಷ ಚಿಕಿತ್ಸೆಯನ್ನು ಒದಗಿಸಲಿದೆ.

ಆರೋಗ್ಯ ಬೈ ಆರ್.ವಿ.ಆರ್ದೇಶಾದ್ಯಂತ ವಿಸ್ತರಣೆ:

ಬಡ ಮತ್ತು ಗ್ರಾಮೀಣ ಭಾಗದ ಜನರಿಗೆ ನೆರವಾಗಲು ಆಸ್ಪತ್ರೆಯು 'ಆರೋಗ್ಯ ಬೈ ಆರ್.ವಿ.ಆರ್' ಎಂಬ ಉಚಿತ ಆರೋಗ್ಯ ತಪಾಸಣೆ, ಉಚಿತ ವೈದ್ಯಕೀಯ ಸಲಹೆ ಹಾಗೂ ಸಾರ್ವಜನಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ.

ಚಿಕ್ಕಮಗಳೂರಿನಲ್ಲಿ ಯಶಸ್ವಿ ಉಚಿತ ವೈದ್ಯಕೀಯ ಶಿಬಿರ ನಡೆಸಿದ ನಂತರ, ಯೋಜನೆಯನ್ನು ಈಗ ಕರ್ನಾಟಕ, ಕೇರಳ ಮಾತ್ರವಲ್ಲದೆ ಭಾರತದ ಇತರ ರಾಜ್ಯಗಳಿಗೂ ವಿಸ್ತರಿಸಲು ಆಸ್ಪತ್ರೆ ಆಡಳಿತ ಮಂಡಳಿ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ತನ್ನ ಸೂಪರ್ ಸ್ಪೆಷಾಲಿಟಿ ನೆಟ್ವರ್ಕ್ ಅನ್ನು ಇನ್ನಷ್ಟು ಬಲಪಡಿಸುವುದಾಗಿ ಸಂಸ್ಥೆ ತಿಳಿಸಿದೆ.