“ಉಮಂಗ್ 2022” ಅಂತರ್‌ಕಾಲೇಜು ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸ್ಪರ್ಧೆ



ಮೂಡುಬಿದಿರೆ: ಆಳ್ವಾಸ್  ಪದವಿ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ “ಉಮಂಗ್ 2022”  ಅಂತರ್‌ಕಾಲೇಜು ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸ್ಪರ್ಧೆಗಳ  ಉದ್ಘಾಟನಾ ಕಾರ್ಯಕ್ರಮ ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ನಡೆಯಿತು.



ಕಾರ್ಯಕ್ರಮದ  ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಜಗತ್ತಿನಲ್ಲಿರುವ ಪ್ರತಿಯೊಂದು ಭಾಷೆಗೂ ಕೂಡ ಅದರದ್ದೆ ಆದ ಇತಿಹಾಸ ಹಾಗೂ ಸ್ಥಾನಮಾನವಿದೆ, ಆದ್ದರಿಂದ ಎಲ್ಲಾ ಭಾಷೆಗಳಿಗೂ ಒತ್ತು ನೀಡಬೇಕು. ಪ್ರಸ್ತುತ ಆಂಗ್ಲ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ಇದ್ದರೂ ದ್ರಾವಿಡ ಭಾಷೆಗಳನ್ನು ನಿರ್ಲಕ್ಷಿಸದೆ ಅದನ್ನು ಪ್ರೋತ್ಸಾಹಿಸಲು ಉತ್ತೇಜನ ನೀಡಬೇಕು. ಭಾಷೆಯ ನೆಲೆಯಲ್ಲಿ ಬೇದಭಾವ ಮಾಡಬಾರದು ಎಂದರು.




ಆಳ್ವಾಸ್ ಕಾಲೇಜಿನ ಹಿಂದಿ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ  ಜಾನ್ಸನ್ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಮಂಗ್ 2022 ಸಮಾರೋಪ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳಾದ ನವ್ಯಾ, ರೇವತಿ, ಜಾನ್ಸನ್, ಅಭಯ್ ಹಾಗೂ ಪದವಿ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ ರಾಜೀವ್ ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳಾದ  ನಿಖಿಲ್ ಹಾಗೂ ಮುಸ್ತಾಫ ತಂಡದವರಿಂದ ‘ಪಪೆಟ್ ಶೋ’ ನಡೆಯಿತು. ಹಿಂದಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕ್ರಿಯೇಟಿವ್ ಸ್ಟೋರಿ ಟೆಲ್ಲಿಂಗ್ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು. ಸ್ಕಿಟ್,  ಎಕ್ಸ್ಕ್ಲೂಸಿವ್ ನ್ಯೂಸ್ ರಿಪೋರ್ಟಿಂಗ್, ಫೇಸ್ ಪೈಂಟಿAಗ್, ಗ್ರೂಪ್ ಡ್ಯಾನ್ಸ್ ಸ್ಪರ್ಧೆಗಳು ನಡೆದವು.  ವಿವಿಧ  ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಉಡುಪಿಯ ಪೂರ್ಣಪ್ರಜ್ಞಾ ಸಂಜೆ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದೊಕೊಂಡರೆ, ಪುತ್ತೂರಿನ ವಿವೇಕಾನಂದ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು. ವಿದ್ಯಾರ್ಥಿನಿ ಅಂಕಿತ &  ಕೃತಿ ಭಟ್ ಕಾರ್ಯಕ್ರಮ ನಿರೂಪಿಸಿ, ಶಿಶಿರ್ ಹಾಗೂ ಸೌರಭ್ ಶೆಟ್ಟಿ ವಂದಿಸಿದರು.