-->
ದೀಪಾವಳಿಗೆ ಉದ್ಯೋಗಿಗಳಿಗೆ ಕಾರು, ಬೈಕ್ ಗಳನ್ನು ಉಡುಗೊರೆ ನೀಡಿದ ಜ್ಯುವೆಲ್ಲರಿ ಮಾಲಕ

ದೀಪಾವಳಿಗೆ ಉದ್ಯೋಗಿಗಳಿಗೆ ಕಾರು, ಬೈಕ್ ಗಳನ್ನು ಉಡುಗೊರೆ ನೀಡಿದ ಜ್ಯುವೆಲ್ಲರಿ ಮಾಲಕ

ಚೆನ್ನೈ: ಚೆನ್ನೈನ ಚಿನ್ನಾಭರಣ ಮಳಿಗೆಯ ಮಾಲಕರಾಗಿರುವ ಜಯಂತಿ ಲಾಲ್ ಚಲ್ಲನಿ  ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಭರ್ಜರಿ ಉಡುಗೊರೆ ನೀಡಿದ್ದಾರೆ‌. ಈ ಕಂಪೆನಿಯ 8ಮಂದಿ ಉದ್ಯೋಗಿಗಳಿಗೆ ಕಾರುಗಳು ಮತ್ತು 19 ಮಂದಿಗೆ ಬೈಕ್‌ಗಳನ್ನು ನೀಡಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ವೇಳೆ ತಮ್ಮ ಉದ್ಯಮಕ್ಕೆ ಅವಿರತ ಬೆಂಬಲ ನೀಡಿರುವುದನ್ನು ಗಮನದಲ್ಲಿರಿಸಿಕೊಂಡು ಈ ಕೊಡುಗೆ ನೀಡಿರುವುದಾಗಿ ಚಲ್ಲನಿ ಹೇಳಿದ್ದಾರೆ. ಚಿನ್ನಾಭರಣಗಳ ಮಳಿಗೆಯ ಮಾಲಕರೊಬ್ಬರು ತಮ್ಮ ಉದ್ಯೋಗಿಗಳಿಗೆ ಕಾರು, ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿರುವುದು ಭಾರತದಲ್ಲಿ ಇದೇ ಮೊದಲ ಬಾರಿ ಎಂದು ಸಂಸ್ಥೆಯ ಪ್ರಚಾರ ಮತ್ತು ಮಾರ್ಕೆಟಿಂಗ್ ವಿಭಾಗದ ಸಹಾಯಕ ಜನರಲ್ ಮ್ಯಾನೇಜರ್ ಎಸ್ ಬಾಲಾಜಿ ಹೇಳಿದ್ದಾರೆ . 

ನಗದು ಉಡುಗೊರೆ ನೀಡಿದರೆ ಒಂದೆರಡು ತಿಂಗಳಿನಲ್ಲಿ ಖರ್ಚಾಗಿ ಹೋಗುತ್ತದೆ ಎಂದು ವಾಹನಗಳನ್ನು ಉಡುಗೊರೆಯಾಗಿ ನೀಡಲಾಯಿತು. ಅವರು ಈ ಉಡುಗೊರೆ ವಿಚಾರ ತಮಗೂ, ಯಾರಿಗೂ ಕೊನೇ ಕ್ಷಣದ ತನಕ ತಿಳಿದಿರಲಿಲ್ಲ. ಉಡುಗೊರೆ ಪಡೆದ ಉದ್ಯೋಗಿಗಳು ಸಂತೋಷ ತಾಳಲಾರದೆ ಆನಂದಬಾಷ್ಪ ಸುರಿಸಿದರು ಎಂದು ಅವರು ಹೇಳಿದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article