ಬಿಗ್ ಬಾಸ್ ಒಟಿಟಿ ಸೀಸನ್​ 1- ಮಾಜಿ ಪತ್ನಿ ನೆನೆದು ಕಣ್ಣೀರು ಹಾಕಿದ ಸೋಮಣ್ಣ ಮಾಚಿಮಾಡ...


ಮಾಜಿ ಪತ್ನಿ ನೆನೆದು ಸೋಮಣ್ಣ ಮಾಚಿಮಾಡ ಕಣ್ಣೀರು ಹಾಕಿದ್ದಾರೆ.ಬಿಗ್ ಬಾಸ್ ಒಟಿಟಿ ಕನ್ನಡ ಸೀಸನ್​ 1’ಕ್ಕೆ ಕಾಲಿಟ್ಟಿದ್ದಾರೆ. 


ಈ ಸಂದರ್ಭದಲ್ಲಿ ತಮ್ಮ ಮನದ ಮಾತುಗಳನ್ನು ಬಿಚ್ಚಿಟ್ಟ ಅವರು ವಿಚ್ಛೇದನದ ಸಂದರ್ಭದಲ್ಲಿ ನಾನು ಬೆಳಗ್ಗೆ ಕೋರ್ಟ್​​ಗೆ ಹೋಗುತ್ತಿದ್ದೆ, ಮಧ್ಯಾಹ್ನ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಿದ್ದೆ. ನಾವಿಬ್ಬರೂ ಮ್ಯೂಚುವಲ್​ ಆಗಿ ವಿಚ್ಛೇದನ ಪಡೆದೆವು. ಇವತ್ತಿಗೂ ಮರೆತು ಬದುಕಲು ಸಾಧ್ಯವಾಗುತ್ತಿಲ್ಲ. ಆಕೆಯೇ ಫಸ್ಟ್, ಆಕೆಯೇ ಲಾಸ್ಟ್​’ ಎಂದು ಭಾವುಕರಾದರು.


ಜೀವನದಲ್ಲಿ ಅವಳನ್ನು ನಾನು ಸ್ವಲ್ಪ ನೋಯಿಸಿದೆ ಅನಿಸುತ್ತದೆ. ನನ್ನ ಕೆಲಸದಲ್ಲಿ ನಾನು ಬ್ಯುಸಿ ಆಗಿಬಿಟ್ಟೆ. ನನಗೆ ಕೆಲಸ ಇಂಪಾರ್ಟೆಂಟ್ ಎನ್ನುತ್ತಿದೆ. ನನ್ನ ತಂದೆ ಸೇನೆಯಲ್ಲಿ ಇದ್ದರು. ನಾನೂ ಸೇನೆ ಸೇರಿದ್ದರೆ ನೀನು ಮನೆಯಲ್ಲಿ ಒಬ್ಬಳೇ ಇರಬೇಕಾಗುತ್ತಿತ್ತು ಎನ್ನುತ್ತಿದೆ. ಬಿಗ್ ಬಾಸ್​ಗೆ ಬರುವಾಗ ಅವಳಿಗೆ ಕರೆ ಮಾಡಿದೆ. ಆಗ ಸಮಾಧಾನ ಆಯಿತು’ ಎಂದರು ಸೋಮಣ್ಣ.



ವಿಚ್ಛೇದನದ ನಂತರ ಗೆಳೆಯರು ದೂರ ಮಾಡಿದರು. ಕುಟುಂಬದವರು ನನ್ನ ಅವಾಯ್ಡ್ ಮಾಡಿದರು. ನನಗೆ ಕೊನೆಯಲ್ಲಿ ಉಳಿದುಕೊಂಡಿದ್ದು ಕೆಲಸ ಮಾತ್ರ. ಹೀಗಾಗಿ, ಜನರ ಜತೆ ಬೆರೆಯುವ ಉದ್ದೇಶದಿಂದ ಇಲ್ಲಿಗೆ ಬಂದೆ.  ಎಂದು ಕಣ್ಣೀರು ಹಾಕಿದ್ದಾರೆ.