-->

ಪೊಲೀಸರಿಗೆ ಬ್ಯಾರಿ ಭಾಷೆಯಲ್ಲಿ ಸಾರ್ವಜನಿಕವಾಗಿ ಅವಾಚ್ಯ ನಿಂದನೆ: ಕ್ರಿಮಿನಲ್ ಕೇಸ್ ದಾಖಲು

ಪೊಲೀಸರಿಗೆ ಬ್ಯಾರಿ ಭಾಷೆಯಲ್ಲಿ ಸಾರ್ವಜನಿಕವಾಗಿ ಅವಾಚ್ಯ ನಿಂದನೆ: ಕ್ರಿಮಿನಲ್ ಕೇಸ್ ದಾಖಲು

ಪೊಲೀಸರಿಗೆ ಬ್ಯಾರಿ ಭಾಷೆಯಲ್ಲಿ ಸಾರ್ವಜನಿಕವಾಗಿ ಅವಾಚ್ಯ ನಿಂದನೆ: ಕ್ರಿಮಿನಲ್ ಕೇಸ್ ದಾಖಲು





ಮಂಗಳೂರಿನ ಪಡೀಲ್ ಕಣ್ಣೂರು ರಾಷ್ಟ್ರೀಯ ಹೆದ್ದಾರಿಯ ಕೊಡಕ್ಕಲ್ ಎಂಬಲ್ಲಿ ಸಾರ್ವಜನಿಕವಾಗಿ ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿದ ಬೈಕ್‌ ಸವಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ.



ದಿನಾಂಕ 27-05-2022 ರಂದು ಈ ಘಟನೆ ನಡೆದಿದ್ದು, ಎಸ್.ಡಿ.ಪಿ.ಐ ಪಕ್ಷ ಆಯೋಜಿಸಿದ್ದ ಜನಾಧಿಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಚಂದ್ರಶೇಖರ್ ಬಿ ಅವರು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ಧಾರೆ.



ಈ ದೂರಿನ ಆಧಾರದಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ IPC ಕಲಂ: 143, 353, 504,149ರಡಿ ಕೇಸ್ಉ ದಾಖಲಿಸಲಾಗಿದೆ.

ಪಡೀಲ್ ಕಡೆಯಿಂದ ಬಂದ ಕೆ.ಟಿ.ಎಂ ಬೈಕ್ ನ ಸವಾರ ಹಾಗೂ ಸಹ ಸವಾರ, ಸ್ಕೂಟರ್ ನ ಸವಾರ ಹಾಗೂ ಸಹಸವಾರ ಮತ್ತು ಕಾರ್ ನಲ್ಲಿದ್ದ ಸವಾರ ಹಾಗೂ ಇತರರು, ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಪೊಲೀಸ್ ಇಲಾಖೆಯನ್ನು ಉದ್ದೇಶಿಸಿ ಬ್ಯಾರಿ ಭಾಷೆಯಲ್ಲಿ, ''ಪೋಡಾ ಪುಲ್ಲೆ ಪೊಲೀಸೆ". "ನಾಯಿಂಡೆ ಮೋನೆ ಪೊಲೀಸೆ" ಎಂದು ನಿಂದಿಸಿದರು. 


ಅಲ್ಲದೆ, ಅತೀ ವೇಗವಾಗಿ ವಾಹನಗಳನ್ನು ಚಲಾಯಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ದೂರುದಾರರು ಮತ್ತು ಪೊಲೀಸ್ ಸಿಬ್ಬಂದಿಯವರ ಮೈಮೇಲೆ ವಾಹನ ಹಾಯಿಸುವಂತೆ ಬಂದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.



ಕರ್ತವ್ಯನಿರತ ಪಿರ್ಯಾದುದಾರಿಗೆ ಮತ್ತು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅಡೆತಡೆಯುಂಟು ಮಾಡಿ ಮೇಲಿನಂತೆ ನಿಂದಿಸುತ್ತಾ ಕರ್ತವ್ಯದಲ್ಲಿರುವ ಪೋಲಿಸರ ಮಾನಸಿಕ ಸ್ಥೈರ್ಯ ಹಾಳು ಮಾಡಿ ಪೊಲೀಸ್‌ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ವಿನಂತಿಸಿಕೊಂಡಿದ್ದಾರೆ. 



Also Read

ಎಸ್‌ಡಿಪಿಐ ಸಮಾವೇಶಕ್ಕೆ ಹೋಗುತ್ತಿದ್ದವರಿಂದ ಪೊಲೀಸ್ ನಿಂದನೆ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article