ಎಸ್ ಡಿಪಿಐ ಸಮಾವೇಶಕ್ಕೆ ಹೋಗುತ್ತಿದ್ದ ಕಾರ್ಯಕರ್ತರಿಬ್ಬರಿಂದ ಪೊಲೀಸರ ನಿಂದನೆ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಮಂಗಳೂರು: ಎಸ್ ಡಿಪಿಐ ಫ್ಲ್ಯಾಗ್ ಹಿಡಿದುಕೊಂಡು ಬೈಕ್ ನಲ್ಲಿ‌ ಸಂಚರಿಸುತ್ತಿದ್ದ ಕಾರ್ಯಕರ್ತರಿಬ್ಬರು ಪೊಲೀಸ್ ನಿಂದನೆ ಮಾಡಿರುವ ವೀಡಿಯೊವೊಂದು ಭಾರೀ ವೈರಲ್ ಆಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.




ನಿನ್ನೆ ನಗರದ ಹೊರವಲಯದಲ್ಲಿರುವ ಕಣ್ಣೂರಿನಲ್ಲಿ ಎಸ್ ಡಿಪಿಐ ನೇತೃತ್ವದಲ್ಲಿ ಬೃಹತ್ ಜನಾಧಿಕಾರ ಸಮಾವೇಶಕ್ಕೆ ತೆರಳುತ್ತಿದ್ದ ಸಂದರ್ಭ ಪೊಲೀಸ್ ನಿಂದನೆಯನ್ನು ಮಾಡಿದ್ದಾರೆ ಎನ್ನಲಾಗಿದೆ. ಇದಿಗ ಅದರ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.




ಮೊದಲಿಗೆ ಆರ್ ಎಸ್ಎಸ್ ಅನ್ನು ನಿಂದನೆ ಮಾಡಿರುವ ಇವರು ಆ ಬಳಿಕ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರ ವೀಡಿಯೋ ವೈರಲ್ ಆಗುತ್ತಿದ್ದು, ಕಾನೂನು ರಕ್ಷಣೆ ಮಾಡುವ ಪೊಲೀಸರನ್ನು ನಿಂದನೆ ಮಾಡಿರುವ ಯುವಕರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu