ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಇಬ್ಬರಲ್ಲಿ ಶ್ರೀಮಂತರು ಯಾರು ಗೊತ್ತಾ? ಇವರಿಬ್ಬರ ಆಸ್ತಿ ಎಷ್ಟು ತಿಳಿದೆಯಾ?




ಭಾರತೀಯ ಪ್ಯಾನ್ ಇಂಡಿಯಾ ಸಿನಿಮಾದ ಬಹುಬೇಡಿಕೆಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ. ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿ ಕುಟುಂಬಸ್ಥರು, ಆತ್ಮೀಯರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಫೆಬ್ರವರಿ 26ರಂದು ವಿವಾಹವಾಗಿದ್ದಾರೆ. ಈಗಾಗಲೇ ರಾಜಸ್ಥಾನದ ಉದಯಪುರ ಮದುವೆ ಸಂಭ್ರಮದಲ್ಲಿ ಮುಳುಗಿ ಹೋಗಿದೆ.

ಆದ್ದರಿಂದ ಕಳೆದ ಕೆಲವು ದಿನಗಳಿಂದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಬಗ್ಗೆಯೇ ಸುದ್ದಿ ಕೇಳಿ ಬರುತ್ತಿದೆ. ಈ ನಡುವೆ ಇಬ್ಬರಲ್ಲಿರುವ ಆಸ್ತಿ ಎಷ್ಟು? ಯಾರ ಬಳಿ ಹೆಚ್ಚು ಹಣವಿದೆ? ಒಬ್ಬರ ಆಸ್ತಿಯನ್ನು ಸೇರಿಸಿದರೆ ಎಷ್ಟಾಗುತ್ತದೆ ಎಂಬಂತಹ ಚರ್ಚೆಯೂ ನಡೆಯುತ್ತಿದೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಹೆಚ್ಚು ಕಡಿಮೆ ಒಂದೇ ಸಂದರ್ಭ ಸಿನಿಮಾದಲ್ಲಿ ಯಶಸ್ಸು ಕಂಡವರು. ಇಬ್ಬರಿಗೂ ನೇಮ್-ಫೇಮ್ ದೊರಕಿದ್ದೂ ಹೆಚ್ಚು ಕಡಿಮೆ ಒಂದೇ ಸಮಯಕ್ಕೆ. ಜೊತೆಗೆ ಈ ಜೋಡಿ ನಟಿಸಿದ ಮೊದಲ ಸಿನಿಮಾವೇ ಮೆಗಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 'ಗೀತಾ ಗೋವಿಂದಂ' ಸಿನಿಮಾ ಬ್ಲಾಕ್ಸ್ ಆಫೀಸ್‌ನಲ್ಲಿ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅಲ್ಲಿಂದ ಇವರ ಕರಿಯ‌ರ್ ಬದಲಾಯ್ತು. ರಶ್ಮಿಕಾ ತೆಲುಗು, ತಮಿಳು ಅಷ್ಟೇ ಅಲ್ಲದೆ, ಬಾಲಿವುಡ್ ಕಡೆಗೂ ಪಯಣ ಬೆಳೆಸಿದ್ಮಲೆ ಒಟ್ಟು ಆಸ್ತಿಯಲ್ಲಿ ಮತ್ತಷ್ಟು ಹೆಚ್ಚಾಯ್ತು.

ರಶ್ಮಿಕಾ ಮಂದಣ್ಣ ಅತೀ ಹೆಚ್ಚು ಬ್ಯುಸಿಯಾಗಿರುವ ಭಾರತದ ನಟಿ. ಕನ್ನಡದಿಂದ ಶುರುವಾಗಿದ್ದ ನಟಿಯ ಸಿನಿಮಾ ಜರ್ನಿ ಬಾಲಿವುಡ್‌ವರೆಗೂ ಬಂದು ನಿಂತಿದೆ. ಫೋರ್ಟ್ಸ್ ವರದಿ ಮಾಡಿರುವಂತೆ 2026ರ ಆರಂಭದ ಹೊತ್ತಿಗೆ ರಶ್ಮಿಕಾ ಮಂದಣ್ಣ ಅವರ ಒಟ್ಟು ಆಸ್ತಿಯ ಮೌಲ್ಯ ₹66 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಬಹುಪಾಲು ಸಿನಿಮಾದ ಸಂಭಾವನೆಯಿಂದಲೇ ಬಂದಿದೆ.

ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಸಂಭಾವನೆಯಲ್ಲಿ ಏರಿಕೆಯಾಗಿದೆ. ಒಂದು ಸಿನಿಮಾಗೆ ₹4 ಕೋಟಿಯಿಂದ ₹8 ಕೋಟಿವರೆಗೂ ಸಂಭಾವನೆ ಪಡೆಯುತ್ತಾರೆಂದು ವರದಿಯಾಗಿದೆ. ಅಲ್ಲು ಅರ್ಜುನ್ ಜೊತೆ ನಟಿಸಿದ 'ಪುಷ್ಟ 2' ಸಿನಿಮಾಗೆ ರಶ್ಮಿಕಾ ಮಂದಣ್ಣ ₹10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸಿನಿಮಾದ ಜೊತೆ ಜಾಹೀರಾತುಗಳಿಂದಲೂ ಹಣ ಗಳಿಸುತ್ತಿದ್ದಾರೆ. ಇವರ ಬಳಿ ಕಲ್ಯಾಣ ಜ್ಯುವೆಲರ್ಸ್, 7ಅಪ್, ಮೀಶೋ ಸೇರಿದಂತೆ ಹಲವು ಬ್ರಾಂಡ್‌ಗಳು ಇವರ ಕೈಯಲ್ಲಿವೆ. ಹೈದರಾಬಾದ್‌, ಬೆಂಗಳೂರು ಹಾಗೂ ಕೊಡಗಿನಲ್ಲಿ ಪ್ರಾಪರ್ಟಿಯಿದೆ. ಹಾಗೇ ಔಡಿ 3, ರೇಂಜ್ ರೋವರ್ ಸ್ಪೋರ್ಟ್, ಮರ್ಸಿಡೀಸ್ ಬೆಂಜ್ ಸಿ-ಕ್ಲಾಸ್ ಅಂತಹ ದುಬಾರಿ ಕಾರುಗಳಿವೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.

ಇನ್ನು ವಿಜಯ್ ದೇವರಕೊಂಡ ಏನೂ ಕಮ್ಮಿಯಿಲ್ಲ. ಲೈಫ್ ಸ್ಟೈಲ್ ಏಷ್ಯಾ ವರದಿ ಮಾಡಿದಂತೆ ವಿಜಯ್ ದೇವರಕೊಂಡ ಬಳಿಕ ₹66 ಕೋಟಿಯಿಂದ ₹70 ಕೋಟಿ ಆಸ್ತಿಯಿದೆ ಎಂದು ಹೇಳಲಾಗುತ್ತಿದೆ. ವಿಜಯ್ ದೇವರಕೊಂಡ ಒಂದು ಸಿನಿಮಾಗೆ ₹12 ಕೋಟಿಯಿಂದ ₹15 ಕೋಟಿ ಚಾರ್ಜ್ ಮಾಡುತ್ತಾರೆಂದು ಹೇಳಲಾಗಿದೆ. ಇನ್ನು ವಿಜಯ್ 'ರೌಡಿ' ಅನ್ನೋ ತನ್ನದೇ ಸ್ವಂತ ಬ್ರಾಂಡ್ ಹೊಂದಿದ್ದಾರೆ. ಇದರಿಂದ ವರ್ಷಕ್ಕೆ ₹8 ಕೋಟಿ ಗಳಿಸುತ್ತಾರೆ. ಬ್ರಾಂಡ್ ಪ್ರಚಾರಕ್ಕೆ ₹1 ರಿಂದ ₹2 ಕೋಟಿ, ಹಾಗೇ ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ₹40 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ. ಹೀಗಾಗಿ ಇಬ್ಬರೂ ಸಮನಾದ ಆಸ್ತಿ ಹೊಂದಿದ್ದು, ಒಟ್ಟು ಸೇರಿಸಿದರೆ ₹132 ಕೋಟಿಯಿಂದ ₹136 ಕೋಟಿ ಆಗಬಹುದೆಂದು ಲೈವ್ ಮಿಂಟ್ ವರದಿ ಮಾಡಿದೆ.
BREAKING NEWS
Loading latest news...
Join our WhatsApp Channel Powered By : Online Pudu