-->
ಓಪನ್ ಏರಿಯಾದಲ್ಲಿ ನಟಿಯ ಅರೆಬೆತ್ತಲೆ ಸ್ನಾನದ ವೀಡಿಯೋ ವೈರಲ್: ಸಾನಿಯಾ ಅಯ್ಯಪ್ಪನ್ ವಿರುದ್ಧ ಗರಂ ಆದ ನೆಟ್ಟಿಗರು

ಓಪನ್ ಏರಿಯಾದಲ್ಲಿ ನಟಿಯ ಅರೆಬೆತ್ತಲೆ ಸ್ನಾನದ ವೀಡಿಯೋ ವೈರಲ್: ಸಾನಿಯಾ ಅಯ್ಯಪ್ಪನ್ ವಿರುದ್ಧ ಗರಂ ಆದ ನೆಟ್ಟಿಗರು

ತಿರುವನಂತಪುರಂ: ಸಿನಿಮಾ ನಟಿಯರ ಪ್ರತಿಯೊಂದು ಚಲನವಲನಗಳ ಮೇಲೆ ನೆಟ್ಟಿಗರು ದೃಷ್ಟಿ ನೆಟ್ಟಿರುತ್ತಾರೆ. ಒಂದು ವೇಖೆ ಸಂಸ್ಕೃತಿಗೆ ವಿರುದ್ಧವಾಗಿ ನಟಿಯರು ನಡೆದುಕೊಂಡರೆ ಆಗ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಾರೆ. ಸಿನಿಮಾದಲ್ಲಾದರೆ ಓಕೆ. ಆದರೆ, ಇತ್ತೀಚೆಗೆ ಸಿನಿಮಾದಿಂದಾಚೆಗೂ ಕೆಲ ನಟಿಯರು ಬಹಳ ಬೋಲ್ಡ್​ ಆಗಿ ಕಾಣಿಕೊಳ್ಳುತ್ತಿದ್ದಾರೆ. ಹೀಗೆ ಮಾಡುವ ಸಂದರ್ಭ ಕೆಲವೊಮ್ಮೆ ಎಡವಟ್ಟು ಮಾಡಿಕೊಳ್ಳುವುದು ಇದೆ. 

ಇದೀಗ ಅದೇ ರೀತಿಯ ಎಡವಟ್ಟೊಂದನ್ನು ಮಲಯಾಳಂ ಬೆಡಗಿ ಸಾನಿಯಾ ಅಯ್ಯಪ್ಪನ್​ ಮಾಡಿಕೊಂಡಿದ್ದಾರೆ. ಓಪನ್ ಏರಿಯಾದ ಹಸಿರು ಹಾಸಿನ ಮಧ್ಯೆ ಬಿಕಿನಿಯಲ್ಲಿ ನಿಂತು ಸ್ನಾನ ಸ್ನಾನ ಮಾಡಿದ್ದಾರೆ. ಅದರ ವೀಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನೆಟ್ಟಿಗರು ಈ ವೀಡಿಯೋ ನೋಡಿ ಈ ರೀತಿಯ ವೀಡಿಯೋಗಳನ್ನು ಹರಿಯಬಿಟ್ಟರೆ ಕೀಟಲೆ ಪ್ರಕರಣಗಳು ಹೆಚ್ಚಾಗುತ್ತವೆ ಎಂದಿದ್ದಾರೆ. ನೆಟ್ಟಿಗರ ಕಾಮೆಂಟ್​ಗೆ ಪ್ರತಿಕ್ರಿಯೆ ನೀಡಿರುವ ಸಾನಿಯಾ ಅಯ್ಯಪ್ಪನ್, ನಿಜವಾದ ನಾಚಿಕೆಯ ಬಗ್ಗೆ ನೀವು ಏನಾದರೂ ಹೇಳಬಹುದೇ? ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ಈ ಹೇಳಿಕೆಯಿಂದ ಮತ್ತಷ್ಟು ಆಕ್ರೋಶಿತರಾಗಿರುವ ನೆಟ್ಟಿಗರು ಇಂತಹ ಅರೆಬೆತ್ತಲೆ ವೀಡಿಯೊಗಳನ್ನು ಹಂಚಿಕೊಳ್ಳಲು ಯಾಕೆ ನಿಮಗೆ ನಾಚಿಕೆಯಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ. 

ಇನ್ನು ಸಾನಿಯಾ ಅಯ್ಯಪ್ಪನ್ ಸಿನಿಮಾ ವಿಚಾರಕ್ಕೆ ಬಂದರೆ, ಕ್ವೀನ್ ಮತ್ತು ಲೂಸಿಫರ್ ಚಿತ್ರಗಳು ವಿಶೇಷ ಮನ್ನಣೆ ತಂದುಕೊಟ್ಟಿದೆ. ದುಲ್ಕರ್ ಸಲ್ಮಾನ್​ ಜೊತೆ ‘ಸೆಲ್ಯೂಟ್’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article