MANGALORE; ಮನೆಗೆ ಬಂದಿತ್ತು ಮತ್ತೊಂದು ಯುವತಿಯ ದಿಬ್ಬಣ- ಮದುವೆ ನಿಶ್ಚಿತಾರ್ಥ ಕ್ಕೆ ಬಂದಿದ್ದ ಯುವಕ ಆತ್ಮಹತ್ಯೆ

ಮಂಗಳೂರು; ವಿವಾಹ ನಿಶ್ಚಿತಾರ್ಥ ಕ್ಕೆಂದು   ಬೆಂಗಳೂರಿನಿಂದ ಊರಿಗೆ ಬಂದಿದ್ದ ಯುವಕ  ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಸುಳ್ಯಪದವಿನಲ್ಲಿ ನಡೆದಿದ್ದು, ಪ್ರೇಮ ಪ್ರಕರಣವೆ ಸಾವಿಗೆ ಕಾರಣವೆಂದು ಅಂದಾಜಿಸಲಾಗಿದೆ.

ಪುತ್ತೂರು ತಾಲೂಕಿನ ಪಡವನ್ನೂರು ಗ್ರಾಮದ ರವಿರಾಜ್ (31) ಆತ್ಮಹತ್ಯೆ ಮಾಡಿಕೊಂಡವರು.  ರವಿರಾಜ್ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ರವಿರಾಜ್ ಗೆ ಇತ್ತೀಚಿಗೆ ಬಂಟ್ವಾಳ ದ ವಿಟ್ಲದ ಯುವತಿಯೊಂದಿಗೆ ಮದುವೆ ಮಾತುಕತೆ ನಡೆದಿತ್ತು. ನವೆಂಬರ್ 25 ರಂದು ಇವರಿಗೆ ಮದುವೆ ನಿಶ್ಚಿತಾರ್ಥ ಮಾಡಲು ದಿನವು ನಿಗದಿಯಾಗಿತ್ತು.

ಮದುವೆ ನಿಶ್ಚಿತಾರ್ಥ ಕ್ಕೆಂದು ರವಿರಾಜ್ ನವೆಂಬರ್ 19 ರಂದು ಊರಿಗೆ ಬಂದಿದ್ದರು. ಶನಿವಾರ ಸಂಜೆ ಗೆಳೆಯನ ಮನೆಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಗೆ ಹೋಗಿದ್ದ ರವಿರಾಜ್ ನೆಟ್ಟಣಿಗೆ ಮುಡ್ನೂರು ಗ್ರಾಮದ  ಕರೆಂಚಡ್ಕ ಎಂಬಲ್ಲಿರುವ ಹೊಸ ಮನೆಯಲ್ಲಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಗೆ ಬಂದಿತ್ತು ಕುಂದಾಪುರ ಹುಡುಗಿ ದಿಬ್ಬಣ!

ಗೆಳೆಯನ ಮನೆಗೆ ಹೋಗುತ್ತೇನೆ ಎಂದು ರವಿರಾಜ್ ಮನೆ ಬಿಟ್ಟು ಹೋದ ಮರುದಿನ  ( ಆದಿತ್ಯವಾರ) ಇವರ ಮನೆಗೆ ಕುಂದಾಪುರದ ಹುಡುಗಿ ಮನೆಯವರೆಂದು ಮೂರು ವಾಹನದಲ್ಲಿ ದಿಬ್ಬಣ ಬಂದಿತ್ತು. ಮನೆಗೆ ದಿಬ್ಬಣ ಬಂದದ್ದು ಕಂಡು ಎಲ್ಲರೂ ಶಾಕ್ ಆಗಿದ್ದರು. ಮನೆಯಿಂದ ಹೊರಗೆ ಹೋಗಿದ್ದ ರವಿರಾಜ್ ಗೆ ಪೋನ್ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹುಡುಕಾಡಿದಾಗ ರವಿರಾಜ್ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಮದುವೆ ನಿಶ್ಚಿತಾರ್ಥ ಕ್ಕೆಂದು ಬಂದಿದ್ದ ರವಿರಾಜ್ ಗೆ ಕುಂದಾಪುರದ ಹುಡುಗಿ ಕಡೆಯವರು ದಿಬ್ಬಣ ಬರುತ್ತಿರುವ ಮಾಹಿತಿ ತಿಳಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




BREAKING NEWS
Loading latest news...
Join our WhatsApp Channel Powered By : Online Pudu