ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಛತ್ತೀಸ್‌ಗಢ ಪೊಲೀಸ್ ನೇಮಕ ಪಟ್ಟಿಯಲ್ಲಿ‘ನ್ಯೂಸ್’, ‘ಭಕ್ತ ಪ್ರಹ್ಲಾದ’, ‘ಹೇ ರಾಮ್’!


ಛತ್ತೀಸ್‌ಗಢ ಪೊಲೀಸ್ ನೇಮಕಾತಿ ಮೆರಿಟ್ ಪಟ್ಟಿಯಲ್ಲಿ ವಿಚಿತ್ರ ಹೆಸರುಗಳು ಕಂಡುಬಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಪಟ್ಟಿಯಲ್ಲಿರುವ ವಿಶಿಷ್ಟ ಹೆಸರುಗಳು:

ನ್ಯೂಸ್ (News)

ಸ್ಪೇಸ್ ರಾಣಿ (Space Rani)

ಹೇ ರಾಮ್

ಭಕ್ತ ಪ್ರಹ್ಲಾದ

ಈ ಹೆಸರುಗಳು ವೈರಲ್ ಆದ ನಂತರ ನೇಮಕಾತಿ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಸೇರಿದಂತೆ ಹಲವರು ಅವ್ಯವಹಾರದ ಆರೋಪ ಮಾಡಿದ್ದಾರೆ.

ಛತ್ತೀಸ್‌ಗಢ ಲೋಕಸೇವಾ ಆಯೋಗದ ಸ್ಪಷ್ಟನೆ:

“ಪಟ್ಟಿಯಲ್ಲಿರುವ ಎಲ್ಲಾ ಹೆಸರುಗಳು ಅಭ್ಯರ್ಥಿಗಳ ಅಧಿಕೃತ ದಾಖಲೆಗಳಿಗೆ (ಆಧಾರ್, ಶೈಕ್ಷಣಿಕ ಪ್ರಮಾಣಪತ್ರ) ಅನುಗುಣವಾಗಿವೆ. ಪ್ರವೇಶ ಪತ್ರಗಳೊಂದಿಗೆ ಹೊಂದಾಣಿಕೆಯಾಗುತ್ತವೆ. ಇವು ನೈಜ ಹೆಸರುಗಳು.”

ಅಭ್ಯರ್ಥಿಗಳು ಕೂಡ ತಮ್ಮ ಹೆಸರುಗಳು ಅಧಿಕೃತ ದಾಖಲೆಗಳಲ್ಲಿರುವಂತೆಯೇ ಇವೆ ಎಂದು ಸಮರ್ಥಿಸಿಕೊಂಡಿದ್ದಾರೆ.