Vitla- ವಿಟ್ಲ ದಲಿತ ಯುವತಿಯ ಅತ್ಯಾಚಾರ ಪ್ರಕರಣ: ಪ್ರಕರಣ ದಾಖಲಿಸಲು ಒತ್ತಾಯ




ಬಂಟ್ವಾಳ ತಾಲೂಕಿನ ಕಾಡುಮಠ ಕಡ್ಪಿಕೇರಿ ದಲಿತ ಯುವತಿಯ ಅನ್ಯ ಜನಾಂಗದ ಯುವಕನೊರ್ವ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯುವತಿಯ ಮನೆಗೆ ತೆರಳಿ ಬಲವಂತವಾಗಿ ಅತ್ಯಾಚಾರಕ್ಕೆ ಯತ್ನಿಸಿದ್ದು ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನೊಂದ ಯುವತಿಯ ಮನೆಗೆ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗು ಕೊಳ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಬೇಟಿ ನೀಡಿ ಮಾಹಿತಿಯನ್ನು ಪಡೆಕೊಂಡು ವಿಟ್ಲ ಪೋಲಿಸ್ ಠಾಣೆಗೆ ದೂರು ನೀಡಿ ಪೋಸ್ಕೊ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾದರು ಸಹ ದಲಿತ ದೌರ್ಜನ್ಯ ಕಾಯ್ಧೆಯಡಿಯಲ್ಲಿ ಪ್ರಕರಣ ದಾಖಲಾಗದಿರುವ ಬಗ್ಗೆ ವಿಷಯ ತಿಳಿದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಮಿತಿ ಸದಸ್ಯ ‌ನಾಗರಾಜ್ ಎಸ್‌ ಲೃಾಲ ಬೆಳ್ತಂಗಡಿ ಇವರು ನೊಂದ ಯುವತಿಯ ಮನೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದು ತೆರಳಿ ನಂತರ ಸಂತ್ರಸ್ಥೆಯ ಮನೆಯವರೊಂದಿಗೆ ವಿಟ್ಲ ಪೋಲಿಸ್ ಠಾಣೆಗೆ ತೆರಳಿ‌ ಇಲಾಖಾಧಿಕಾರಿಗಳನ್ನು ಮತ್ತು ಠಾಣೆಗೆ ದೂರು ನೀಡಿದ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ತಾರತಮ್ಯವನ್ನು ಎಸಗಲಾಗಿದೆ ಎಂದು ತರಾಟೆಗೆ ತೆಗೆದುಕೊಂಡ ಪ್ರಸಾಂಗ ನಡೆಯಿತು. ಒಂದು ರೀತಿಯಲ್ಲಿ ನೊಂದ ಯುವತಿಗೆ ನ್ಯಾಯ ಒದಗಿಸುವ ಬದಲಾಗಿ ಅನ್ಯಾಯದ ಎಸಗಲಾಗಿದೆ ಎಂದು ಜಿಲ್ಲಾವರಿಷ್ಠಧಿಕಾರಿ ಹಾಗು ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿಯವರನ್ನು ಮೌಖಿಕವಾಗಿ ಸಂಪರ್ಕಿಸಿ ಎದ್ರಿಯವರಯ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ‌ತಪ್ಪಿದ್ದಲ್ಲಿ ಕೊರಾನ ಲಾಕ್ ಡೌನ್ ನನ್ನು‌ ಲೆಕ್ಕಿಸದೆ ನ್ಯಾಯದ ಪರ ‌ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಸಿದರು. ಸದ್ರಿ ಪ್ರಕರಣ ಗಂಭೀರವಾಗಿ ಪರಿಗಣಿಸಿ ಎದ್ರಿಯವರ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸುವುದಾಗಿ ವಿಟ್ಲ ಉಪ ನೀರಿಕ್ಷಕರು ಭರವಸೆ ನೀಡಿರುತ್ತಾರೆ.

BREAKING NEWS
Loading latest news...
Join our WhatsApp Channel Powered By : Online Pudu