ಮಂಗಳೂರಿನಲ್ಲಿ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‌ನಿಂದ ಹೊಸ ಘಟಕ ಉದ್ಘಾಟನೆ
ಮಂಗಳೂರು: ಮಂಗಳೂರಿನ ಕಂಕನಾಡಿಯಲ್ಲಿ ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಯನ್ನು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಉದ್ಘಾಟಿಸಿದರು.
15,000 ಚದರಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಹೊಸ ಆಸ್ಪತ್ರೆಯು ಹೊಸ ತಲೆಮಾರಿನ ಡಯಾಗ್ನಾಸ್ಟಿಕ್ ಮತ್ತು ಸರ್ಜಿಕಲ್ ಟೆಕ್ನಾಲಜಿಯನ್ನು ಒಳಗೊಂಡಿದ್ದು, ವಿವಿಧ ಸೂಪರ್ ಸ್ಪೆಷಾಲಿಟಿ ಸೇವೆಯು ಒಂದೇ ಕಡೆ ಸಿಗುತ್ತಿದೆ. ಬೆಂಗಳೂರು ಅಥವಾ ಚೆನ್ನೈನಂತಹ ನಗರಗಳಿಗೆ ಚಿಕಿತ್ಸೆಗಾಗಿ ರೋಗಿಗಳು ಪ್ರಯಾಣ ಮಾಡುವ ಅಗತ್ಯವನ್ನು ಕಡಿಮೆಗೊಳಿಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಯು ಟಿ ಖಾದರ್ 'ಮಂಗಳೂರು ಎಂದಿಗೂ ಗುಣಮಟ್ಟದ ಆರೋಗ್ಯಸೇವೆ ಮತ್ತು ಶಿಕ್ಷಣಕ್ಕೆ ಹೆಸರಾಗಿದೆ. ಡಾ. ಆಗರ್ವಾಲ್ ಐ ಹಾಸ್ಪಿಟಲ್ ಈಗ ಇಲ್ಲಿ ಆರಂಭವಾಗಿದ್ದು, ನಮ್ಮ ಜನರಿಗೆ ವಿಶ್ವದರ್ಜೆಯ ಕಣ್ಣಿನ ಆರೈಕೆ ಸಿಗುವಂತಾಗಿದೆ. ಕಣ್ಣಿನ ಸಮಸ್ಯೆಯನ್ನು ತಡೆಯುವ ಮತ್ತು ಸಮಯಕ್ಕೆ ಸರಿಯಾಗಿ ಸಂಕೀರ್ಣ ಕಣ್ಣಿನ ಅನಾರೋಗ್ಯವನ್ನು ತಡೆಯುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ' ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕ ಡಾ. ವೇದವ್ಯಾಸ ಕಾಮತ್ , ಮಂಗಳೂರಿನ ಐಎಂಎ ಅಧ್ಯಕ್ಷ ಡಾ. ಜಿಸ್ಸಿ ಮರಿಯಾ ಗೊವೆಯಸ್ ಡಿಸೋಝಾ, ಆರೋಗ್ಯ ಸೇವೆಗಳ ವಿಭಾಗದ ಹಿರಿಯ ಮ್ಯಾನೇಜರ್ ಮತ್ತು ಎಂಆರ್‌ಪಿಎಲ್ ಸಿಎಂಒ ಲೆ. ಕರ್ನಲ್ ಡಾ. ಝಹೀವ್ ಆಲಿ ಖಾನ್ ಅವರು ಹಾಜರಿದ್ದರು.
ಆಸ್ಪತ್ರೆಯಲ್ಲಿ ಆತ್ಯಾಧುನಿಕ ಡಯಾಗ್ನಾಸ್ಟಿಕ್ ಮತ್ತು ಸರ್ಜಿಕಲ್ ಸಲಕರಣೆಗಳು ಇವೆ. ಒಸಿಟಿ, ರೆಟಿನಾ ಲೇಸರ್ ಸಿಸ್ಟಮ್. ಕಾರ್ನಿಯಲ್ ಟೋಪೋಗ್ರಫಿ, ಆಪ್ಟಿಕಲ್ ಬಯೋ ನೋಟರ್ ಝೀಸ್ ಮೈಕ್ರೋಸ್ಕೋಪ್ ಆಧರಿತ ಸರ್ಜಿಕಲ್ ಪ್ಲಾಟ್‌ಫಾರಂಗಳು ಇದರಲ್ಲಿವೆ. ದಿನಕ್ಕೆ 500 ರೋಗಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಆಪರೇಷನ್ ಥಿಯೇಟರ್, ಇನ್ ಹೌಸ್ ಆಪ್ಟಿಕಲ್ಸ್, ಲ್ಯಾಬ್, ಫಾರ್ಮಸಿ (ಬೆಳಗ್ಗೆ 9 ರಿಂದ ಸಂಜೆ 8), ಜಿಎ ಬ್ಯಾಕಪ್, ಅಂಪಲ್ ಪಾರ್ಕಿಂಗ್ ಇದು ಹೊಂದಿದೆ.
ಡಾ. ಆಗರ್ವಾಲ್ ಐ ಹಾಸ್ಪಿಟಲ್‌ನ ಚಿಕಿತ್ಸಾ ಸೇವೆಗಳ ಪ್ರಾದೇಶಿಕ ಮುಖ್ಯಸ್ಥ ಡಾ. ಶ್ರೀನಿವಾಸ ರಾವ್ ಮಾತನಾಡಿ 'ಈ ಸೌಲಭ್ಯವು, ಕೇವಲ ಕಣ್ಣಿನ ರೋಗಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ. ಸಮಸ್ಯೆಯನ್ನು ಮೊದಲೇ ಪತ್ತೆ ಮಾಡುವುದು. ತಡೆಯುವುದು ಮತ್ತು ಜಾಗೃತಿಯನ್ನು ಮೂಡಿಸುವ ಕೆಲಸವನ್ನೂ ಮಾಡುತ್ತದೆ. ಜೀವನಶೈಲಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ, ವಯಸ್ಕರು ಮತ್ತು ಮಕ್ಕಳ ಕಣ್ಣಿನ ಆರೋಗ್ಯವನ್ನು ರಕ್ಷಿಸುವಲ್ಲಿ ನಮ್ಮ ಆಸ್ಪತ್ರೆಯು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಮೂವರು ಸ್ಪೆಷಲಿಸ್ಟ್ ವೈದ್ಯರ ತಂಡವಿದೆ."
ಡಾ. ಅಗರ್ವಾಲ್ಸ್ ಹೆಲ್ತ್ ಕೇರ್ ಲಿಮಿಟೆಡ್ ಬಗ್ಗೆ:
ಡಾ. ಅಗರ್ವಾಲ್ಸ್ ಹೆಲ್ತ್ ಕೇರ್ ಕಣ್ಣಿನ ಆರೈಕೆ ಉದ್ಯಮದಲ್ಲಿ ಪ್ರಸಿದ್ಧ ಮತ್ತು ವಿಶ್ವಾಸಾರ್ಹ ಹೆಸರು. ಆರೈಕೆ, ವ್ಯಾಪಕವಾದ ಆಸ್ಪತ್ರೆಯೊಂದಿಗೆ ಅವರ ಕಣ್ಣಿನ ಚಿಕಿತ್ಸಾ ಪ್ರಯಾಣದ ಉದ್ದಕ್ಕೂ ಅದರ ರೋಗಿಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಸಮರ್ಪಿಸಲಾಗಿದೆ. ಡಾ. ಅಗರ್ವಾಲ್ಸ್ ಹೆಲ್ತ್ ಕೇರ್ ಭಾರತದ 14 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ 250+ ಕ್ಕೂ ಹೆಚ್ಚು ಸೌಲಭ್ಯಗಳ ಜಾಲವನ್ನು ನಿರ್ವಹಿಸುತ್ತದೆ, ಜೊತೆಗೆ ಆಫ್ರಿಕಾದ ಒಂಬತ್ತು ದೇಶಗಳಲ್ಲಿ 16 ಸೌಲಭ್ಯಗಳು ಹೊಂದಿದೆ. ಈ ಸಂಸ್ಥೆಯು ಕಣ್ಣಿನ ಪೊರೆ ಮತ್ತು ಶಸ್ತ್ರಚಿಕಿತ್ಸೆಗಳು, ಸಮಾಲೋಚನೆಗಳು, ರೋಗನಿರ್ಣಯಗಳು ಮತ್ತು ಶಸ್ತ್ರಚಿಕಿತ್ಸೆಯಲ್ಲದ ಚಿಕಿತ್ಸೆಗಳು ಸೇರಿದಂತೆ ಸಮಗ್ರ ಶ್ರೇಣಿಯ ಕಣ್ಣಿನ ಆರೈಕೆ ಸೇವೆಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಡಾ. ಅಗರ್ವಾಲ್ಸ್ ಹೆಲ್ತ್ ಕೇರ್ ಕಣ್ಣಿನ ಆರೈಕೆಗೆ ಸಂಬಂಧಿಸಿದ ಆಪ್ಟಿಕಲ್ ಉತ್ಪನ್ನಗಳು, ಕಾಂಟ್ಯಾಕ್ಟ್ ಲೆನ್ಸ್‌ಗಳು, ಪರಿಕರಗಳು ಮತ್ತು ಔಷಧೀಯ ಉತ್ಪನ್ನಗಳನ್ನು ಒದಗಿಸುತ್ತದೆ.