-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ತುಳುವಿನಲ್ಲೊಂದು ಡಿಫರೆಂಟ್ ಮೂವಿ; ಮಹಿಳಾ ಪ್ರಧಾನ "ಮೀರಾ" ತುಳು ಸಿನಿಮಾ ಬಿಡುಗಡೆ

ತುಳುವಿನಲ್ಲೊಂದು ಡಿಫರೆಂಟ್ ಮೂವಿ; ಮಹಿಳಾ ಪ್ರಧಾನ "ಮೀರಾ" ತುಳು ಸಿನಿಮಾ ಬಿಡುಗಡೆ


ಮಂಗಳೂರು: ಅಸ್ತ್ರ ಪ್ರೊಡಕ್ಷನ್  ಬ್ಯಾನರ್ ನಲ್ಲಿ ಲಂಚು ಲಾಲ್ ಕೆ.ಎಸ್. ನಿರ್ಮಿಸಿರುವ, ಅಶ್ವಥ್ ನಿರ್ದೇಶನದ 'ಮೀರಾ' ತುಳು ಚಲನಚಿತ್ರ ಮಂಗಳೂರಿನ ಭಾರತ್ ಮಾಲ್ ನ‌ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.


ಮಾಜಿ ಮೇಯರ್ ಮನೋಜ್ ಕುಮಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ  ಬಿಡುಗಡೆ ಗೊಳಿಸಿದರು. ತುಳುವಿನಲ್ಲಿ ಬಿಡುಗಡೆ ಗೊಂಡಿರುವ ಮೀರಾ ಸಿನಿಮಾದಲ್ಲಿ ನಮ್ಮ ಮನೆಯ ಸುತ್ತಮುತ್ತಲಿನ ಕತೆ ಇದೆ. ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸ ಬೇಕು ಎಂದರು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ತುಳುವಿನಲ್ಲಿ ಈಗ ಉತ್ತಮ ಸದಭಿರುಚಿಯ ಸಿನಿಮಾಗಳು ಬರುತ್ತಿದೆ. ಅದರಲ್ಲೂ ಮೀರಾ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮನೆಮಂದಿ ಎಲ್ಲರೂ ಇಂತಹ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸ ಬೇಕೆಂದರು,.
*ಫ್ಲೆಕ್ಸ್ ನಿಷೇಧ ಸಿನಿಮಾರಂಗದ ಮೇಲೆ ನೇರ ಪರಿಣಾಮ*
 ನಟ, ನಿರ್ದೇಶಕ ರಾಹುಲ್ ಮಾತನಾಡಿ ನಗರದಲ್ಲೀಗ ಫ್ಲೆಕ್ಸ್ ಗಳನ್ನು ಅಳವಡಿಸಲು ಮಹಾನಗರ ಪಾಲಿಕೆ ನಿಷೇಧ ಏರಿರುವುದರಿಂದು ಇದು ತುಳು ಸಿನಿಮಾರಂಗದ ಮೇಲೆ ನೇರ ಪರಿಣಾಮ ಬೀರಿದೆ. ಹೀಗಾಗಿ ತುಳುಸಿನಿಮಾ ರಂಗದ ನಿರ್ಮಾಪಕರು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ ಎಂದರು.

ಪ್ರೀಮಿಯರ್ ಶೋ ಮೂಲಕ ಒಂದು ಕೋಟಿ ರೂ ಗಳಿಕೆ

ನಿರ್ಮಾಪಕ ಲಂಚುಲಾಲ್ ಕೆ ಎಸ್ ಮಾತನಾಡಿ "ಮೀರಾ" ತುಳು  ಸಿನಿಮಾ ಬಿಡುಗಡೆಯ ಮೊದಲು ಪ್ರೀಮಿಯರ್ ಶೋ ಮೂಲಕ ಒಂದು ಕೋಟಿ ರೂಪಾಯಿ ಗಳಿಸಿದೆ ಎಂದರು. ನನ್ನ ನೂರು ಮಂದಿ ಹಿತೈಷಿಗಳು ತಲಾ ಒಂದು ಲಕ್ಷ ರೂಪಾಯಿಯಂತೆ ನೂರು ಟಿಕೇಟುಗಳನ್ನು ಖರೀದಿಸಿದ್ದಾರೆ. ಪ್ರೀಮಿಯರ್ ಶೋ ವೀಕ್ಷಿಸಿದ ಅವರೆಲ್ಲರೂ ಸಿನಿಮಾದ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.


ಸಮಾರಂಭದಲ್ಲಿ ನಟ ವಿಜೆ ವಿನೀತ್ ಕುಮಾರ್, ರಾಹುಲ್ ಅಮೀನ್, ತ್ರಿಶೂಲ್ ಶೆಟ್ಟಿ, ಲಕ್ಷ್ಮೀಶ ಶೆಟ್ಟಿ ಬೈಕಂಪಾಡಿ, ಮೋಹನ್ ಕೆ ಬೋಳಾರ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಹರ್ಷಿತ್ ಸೊಮೇಶ್ವರ, ಪ್ರಕಾಶ್ ಶೆಟ್ಟಿ ಧರ್ಮನಗರ, ಯತೀಶ್ ಪೂಜಾರಿ, ಅನೀಶ್ ಪೂಜಾರಿ, ಅನಿಲ್ ದಾಸ್, ಶರಣ್ ಚಿಲಿಂಬಿ, ಜೆಪಿ ತುಮಿನಾಡ್, ಪುಷ್ಪರಾಜ್ ಬೊಳ್ಳೂರು, "ಮೀರಾ" ಸಿನಿಮಾದ ನಿರ್ದೇಶಕ ಅಶ್ವಥ್, ನಟಿಯರಾದ ಇತಿಶಾ ಶೆಟ್ಟಿ, ಲಕ್ಷ್ಯ ಎಲ್ ಮೊದಲಾದವರು ಉಪಸ್ಥಿತರಿದ್ದರು. ಯತೀಶ್ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ‌ ನಿರ್ವಹಿಸಿದರು. 


ಕರಾವಳಿಯಾದ್ಯಂತೆ ತೆರೆಗೆ
"ಮೀರಾ" ತುಳು ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲಿಸ್,  ಪಿವಿಆರ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಷಿ, ನಟರಾಜ್,  ಬೆಳ್ತಂಗಡಿಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಐನಾಕ್ಸ್,  ದೇರಳಕಟ್ಟೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. 

ಈ ಚಿತ್ರವನ್ನು ಲಂಚುಲಾಲ್ ಕೆ.ಎಸ್.ನಿರ್ಮಿಸಿದ್ದು, ಅಶ್ವಥ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರ ತುಳು ಚಿತ್ರರಂಗದಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ, ಈ ಚಿತ್ರ ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ ಎಂದು ನಿರ್ದೇಶಕ ಅಶ್ವಥ್ ತಿಳಿಸಿದರು.
ಚಿತ್ರದಲ್ಲಿ ಇಶಿತಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ.ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವರ್ಕಾಡಿ, ಯತೀಶ್ ಪೂಜಾರಿ, ಅಶ್ವಥ್, ಬೇಬಿ ಲಕ್ಷ್ಯ ಎಲ್. ರಕ್ಷಿತಾ ಶೆಟ್ಟಿ ಮುಂಬೈ ಅಭಿನಯಿಸಿದ್ದಾರೆ. 
ತನ್ನ ಕನಸುಗಳನ್ನು ನನಸಾಗಿಸುವ ಪಯಣದಲ್ಲಿ ಸಮಾಜದಿಂದ ಸವಾಲುಗಳನ್ನು ಎದುರಿಸುವ ಯುವತಿಯ ಕಥೆಯನ್ನು ಈ ಚಿತ್ರ ಹೇಳುತ್ತದೆ. ಈ ಚಲನಚಿತ್ರವು ಮಹಿಳೆಯರಿಗೆ ಅವರ ಕನಸನ್ನು ಜಯಿಸಲು ಮತ್ತು ಸಾಧಿಸಲು ಸ್ಫೂರ್ತಿ ನೀಡುತ್ತದೆ ಎಂದರು.
ಇದು ತುಳುವಿನ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ. ಹೆಣ್ಣಿನ ಕನಸು, ನೋವು ನಲಿವನ್ನು ಕೇಂದ್ರೀಕರಿಸಿರುವ  ಗಟ್ಟಿ ಕತೆಯನ್ನು ಒಳಗೊಂಡಿದೆ. ಮಹಿಳೆಯರು ತಮ್ಮ ಕನಸುಗಳನ್ನು ನನಸಾಗಿಸಲು ಸವಾಲುಗಳನ್ನು ಎದುರಿಸಿ ಸಾಧಿಸಲು ಸ್ಪೂರ್ತಿ ನೀಡಲಿದೆ ಎಂದು ನಿರ್ಮಾಪಕ ಲಂಚುಲಾಲ್ ಕೆಎಸ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ