-->

ಕುಳಿತ ಸ್ಥಳದಿಂದಲೇ ಎಲ್ಲೋ ಇದ್ದವರ ಲೊಕೇಷನ್ ಹೀಗೆ ಪತ್ತೆ ಹಚ್ಚಬಹುದು

ಕುಳಿತ ಸ್ಥಳದಿಂದಲೇ ಎಲ್ಲೋ ಇದ್ದವರ ಲೊಕೇಷನ್ ಹೀಗೆ ಪತ್ತೆ ಹಚ್ಚಬಹುದು



ನವದೆಹಲಿ: ಕೆಲವೊಂದು ಸಲ ನಮ್ಮ ಗೆಳೆಯರು, ಸಂಬಂಧಿಕರು ಸೇರಿದಂತೆ ಆಪ್ತರೆಸಿದವರು ಸುಳ್ಳು ಹೇಳಿ ಎಲ್ಲೋ ಹೋಗಿರುತ್ತಾರೆ. ಫೋನ್ ಮಾಡಿದ್ರೆ ತಾವು ಎಲ್ಲಿದ್ದೇವೆ ಎಂಬುದನ್ನು ತಿಳಿಸುವುದಿಲ್ಲ. ಆದರೆ ನೀವು ಕುಳಿತ ಸ್ಥಳದಿಂದಲೇ ಅವರು ಎಲ್ಲಿದ್ದಾರೆಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಅದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ. 

ಇಂದು ತಂತ್ರಜ್ಞಾನ ಊಹಿಸದ ರೀತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಲಭ್ಯವಿರುವ ತಂತ್ರಜ್ಞಾನದಿಂದಲೇ ಎಲ್ಲವನ್ನು ಕಂಡು ಹಿಡಿಯಬಹುದು. ಮೊಬೈಲ್ ನೆಟ್‌ವರ್ಕ್ ಬಳಸಿ ಲೊಕೇಷನ್ ಟ್ರ್ಯಾಕ್ ಪತ್ತೆ ಮಾಡಬಹುದು. ಈ ಮೂಲಕ ನಿಮ್ಮ ಗೆಳೆಯ ಅಥವಾ ಆಪ್ತರು ಎಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಲೊಕೇಶನ್ ಟ್ರ್ಯಾಕ್ ಮಾಡೋದು ಹೇಗೆ ಎಂಬುದರ ಕುರಿತಾದ ರೀಲ್ಸ್ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. @therajivmakhni ಇನ್‌ಸ್ಟಾಗ್ರಾ ಖಾತೆಯಲ್ಲಿ ಈ ರೀಲ್ಸ್ ಅಪ್ಲೋಡ್ ಮಾಡಲಾಗಿದೆ.

ನೀವು ಮಾಡಬೇಕಾದದ್ದು ಇಷ್ಟೇ, 'ಮೊದಲಿಗೆ ಗೂಗಲ್‌ಗೆ ಹೋಗಿ ಯಾವುದಾದರೂ ಸುಂದರವಾದ ಫೋಟೋ ಯುಆರ್‌ಎಲ್ ಕಾಪಿ ಮಾಡಿಕೊಳ್ಳಿ. ನಂತರ ಗೂಗಲ್‌ನಲ್ಲಿ   https://iplogger.org/ ಎಂದು ಟೈಪ್ ಮಾಡಿ. ಈ ಲಿಂಕ್ ಓಪನ್ ಆದಾಗ ಅಲ್ಲಿ ಕಾಣುವ ಶಾರ್ಟ್ ಲಿಂಕ್ ಬಾಕ್ಸ್‌ನಲ್ಲಿ ಕಾಪಿ ಮಾಡಿಕೊಂಡಿರುವ ಯುಆರ್‌ಎಲ್ ಪೇಸ್ಟ್ ಮಾಡಿ. ನಂತರ ಕೆಳಗೆ ನಿಮಗೆ ಶಾರ್ಟ್‌ ಲಿಂಕ್ ಸಿಗುತ್ತದೆ. ಈ ಲಿಂಕ್ ಕಾಪಿ ಮಾಡಿಕೊಂಡು ನಿಮ್ಮ ಆಪ್ತರಿಗೆ ವಾಟ್ಸಪ್ ಮಾಡಿ. ಈ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ ನಿಮ್ಮ ಆಪ್ತ ಈ ಸಮಯದಲ್ಲಿ ಎಲ್ಲಿದ್ದಾರೆ ಎಂಬುವುದು https://iplogger.org/ ಕಾಣಿಸುತ್ತದೆ. ಹೀಗೆ ಬೇರೆಯವರ ಲೊಕೇಷನ್ ಸುಲಭವಾಗಿ ಟ್ರ್ಯಾಕ್ ಮಾಡಬಹುದು'.

ಇಂದು ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಪೊಲೀಸರು ಅನಾಮಧೇಯ ಕರೆ ಮತ್ತು ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ. ನಿಮಗೆ ಲಾಟರಿಯಲ್ಲಿ ಹಣ ಸಿಕ್ಕಿದ್ದು, ಬಹುಮಾನ ನಿಮ್ಮದಾಗಿಸಿಕೊಳ್ಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಂಬ ರೀತಿಯಲ್ಲಿ ಮೆಸೇಜ್ ಬರುತ್ತಿರುತ್ತವೆ. ಇಂತಹ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದ್ರೆ ಮೋಸಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಯಾರೊಂದಿಗೆ ನಿಮ್ಮ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಬಾರದು. ಯಾವುದೇ ಬ್ಯಾಂಕ್‌ಗಳು ಕರೆ ಮಾಡಿ ಒಟಿಪಿ ಕೇಳಲ್ಲ ಎಂಬುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಲಹೆ ಸಹ ನೀಡಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article