ಇಂದು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಲಿದೆ ಸ್ವಿಗ್ಗಿ : ಕ್ಯೋಟ್ಯಾಧಿಪತಿಗಳಾಗಲಿದ್ದಾರೆ 500 ಮಂದಿ ಉದ್ಯೋಗಿಗಳು



ಬೆಂಗಳೂರು: ಭಾರತದ ಪ್ರಖ್ಯಾತ ಆನ್‌ಲೈನ್‌ ಫುಡ್‌ ಡೆಲಿವರಿ ಸಂಸ್ಥೆ ಸ್ವಿಗ್ಗಿಯು ಈ ತಿಂಗಳ ಆರಂಭದಲ್ಲಿ ತನ್ನ ಐಪಿಒ ಬಿಡುಗಡೆ ಮಾಡಿದೆ. ಈ ಮೂಲಕ ನವೆಂಬರ್‌ 13 ರಂದು ಅಂದರೆ ಇಂದು ಸ್ವಿಗ್ಗಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್‌ ಆಗಲಿದೆ. ಲಿಸ್ಟಿಂಗ್‌ ಆದ ಬೆನ್ನಲ್ಲಿಯೇ ಸುಮಾರು 500 ಮಂದಿ ಸ್ವಿಗ್ಗಿ ಉದ್ಯೋಗಿಗಳು ಕನಿಷ್ಠ 1 ಕೋಟಿ ರೂಪಾಯಿ ಸಂಪಾದನೆ ಮಾಡುವ ಮೂಲಕ ಕೋಟ್ಯಧಿಪತಿಗಳು ಆಗಲಿದ್ದಾರೆ ಎಂದು ವರದಿಯಾಗಿದೆ.  ಇತ್ತೀಚಿನ ವರ್ಷಗಳಲ್ಲಿ ಸ್ವಿಗ್ಗಿ ಐಪಿಒ ಭಾರತದ ಅತೀದೊಡ್ಡ ಐಪಿಒಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಹಲವಾರು ವರ್ಷಗಳಿಂದ ಕಂಪೆನಿಯ ಏಳುಬೀಳುಗಳಲ್ಲಿ ಜೊತಡಯಾಗಿರುವ 5 ಸಾವಿರ ಉದ್ಯೋಗಿಗಳ ಪಾಲಿಗೆ 9 ಸಾವಿರ ಕೋಟಿ ರೂಪಾಯಿಯನ್ನು ಈ ಐಪಿಒ ಹಸ್ತಾಂತರ ಮಾಡಲಿದೆ.

ಸ್ವಿಗ್ಗಿ ಐಪಿಒ ವೇಳೆ ಉದ್ಯೋಗಿ ಸ್ಟಾಕ್‌ ಆಪ್ಶನ್‌ (ಇಎಸ್‌ಓಪಿ) ಪೇಔಟ್‌ ಅನ್ನು ನೀಡಿತ್ತು. ಭಾರತದ ಸ್ಟಾರ್ಟ್‌ಅಪ್‌ ವಲಯಗಳಲ್ಲಿ ಇಂಥಹವು ಅತ್ಯಂತ ಅಪರೂಪ. ಈ ಮೊದಲು, ಫ್ಲಿಪ್‌ಕಾರ್ಟ್ ಇದೇ ರೀತಿಯಲ್ಲಿ ಪೇಔಟ್‌ ನಡೆಸಿತ್ತು. ಭಾರತದ ಸ್ಟಾರ್ಟ್ಅಪ್ ವಲಯದಲ್ಲಿ ಅತಿದೊಡ್ಡ ಸಂಪತ್ತು ಸೃಷ್ಟಿ ಡ್ರೈವ್‌ಗಳಲ್ಲಿ ಒಂದಾಗಿರುವ ತನ್ನ ಪ್ರಸ್ತುತ ಮತ್ತು ಮಾಜಿ ಉದ್ಯೋಗಿಗಳಿಗೆ $1.4-1.5 ಶತಕೋಟಿ (ರೂ. 11,600-12,500 ಕೋಟಿ) ಪಾವತಿಸಿತ್ತು. ಫ್ಲಿಪ್‌ಕಾರ್ಟ್‌ನ ಪಾವತಿಗಳಲ್ಲಿ ಕಂಪನಿಯು ಜುಲೈ 2023 ರಲ್ಲಿ 17,000 ಪ್ರಸ್ತುತ ಮತ್ತು ಮಾಜಿ ಉದ್ಯೋಗಿಗಳಿಗೆ 5,800 ಕೋಟಿ ರೂಪಾಯಿ ($700 ಮಿಲಿಯನ್) ಪಾವತಿಸಿದೆ.

ವಾಲ್‌ಮಾರ್ಟ್-ಮಾಲೀಕತ್ವದ ದೈತ್ಯಕ್ಕೆ ಇದು ಏಕೈಕ ಅತಿದೊಡ್ಡ ESOP ಪಾವತಿಗಳಲ್ಲಿ ಒಂದಾಗಿದ್ದರೂ, ಕಂಪನಿಯು ಕಳೆದ ವರ್ಷಗಳಲ್ಲಿ ಒಟ್ಟಾರೆಯಾಗಿ $1.4-1.5 ಶತಕೋಟಿ (Rs 12,000 ಕೋಟಿ) ಮೌಲ್ಯದ ಐದು ಷೇರುಗಳ ಮರು ಖರೀದಿ ಮಾಡಿದೆ. ಇತರ ಸ್ಟಾರ್ಟ್‌ಅಪ್‌ಗಳು ಸಹ ಉದ್ಯೋಗಿಗಳ ಕೈಯಲ್ಲಿ ಹಣವನ್ನು ಹಾಕಿದರೆ, ಕೆಲವೇ ಕೆಲವರು ಫ್ಲಿಪ್‌ಕಾರ್ಟ್ ಮತ್ತು ಸ್ವಿಗ್ಗಿ ರೀತಿ ಉದ್ಯೋಗಿಗಳಿಗೆ ಸಂಪತ್ತು ಸೃಷ್ಟಿ ಮಾಡಿದ್ದಾರೆ.


ಕಳೆದ ತಿಂಗಳು, ಸ್ವಿಗ್ಗಿ ಸಹ ಸಂಸ್ಥಾಪಕರಾದ ಶ್ರೀಹರ್ಷ ಮೆಜೆಟಿ, ನಂದನ್ ರೆಡ್ಡಿ ಮತ್ತು ಫಣಿ ಕಿಶನ್, ಆಹಾರ ಮಾರುಕಟ್ಟೆಯ ಸಿಇಒ ರೋಹಿತ್ ಕಪೂರ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮುಖ್ಯಸ್ಥ ಅಮಿತೇಶ್ ಝಾ, ಸಿಎಫ್‌ಒ ರಾಹುಲ್ ಬೋತ್ರಾ, ಎಚ್‌ಆರ್‌ ಚಫ್‌ ಗಿರೀಶ್ ಮೆನನ್ ಮತ್ತು ಸಿಟಿಒ ಮಧುಸೂಧನ್ ರಾವ್ ಮತ್ತು ಹಲವರು IPO ಗಿಂತ ಮುಂಚಿತವಾಗಿ ESOP ಗಳಲ್ಲಿ 200 ಮಿಲಿಯನ್‌ ಯುಎಸ್‌ ಡಲರ್‌  (1600 ಕೋಟಿ ರೂಪಾಯಿ) ಪಡೆದಿದ್ದಾರೆ ಎಂದು ವರದಿಯಾಗಿತ್ತು.