ಲೋಕ ಸಭೆ ಸಂಸದರಲ್ಲಿ ಯಾರು ಯಾರು ಶ್ರೀಮಂತರು
ದೇಶದಲ್ಲಿ ಲೋಕಸಭೆ ಚುನಾವಣೆ ಪೂರ್ಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಿದೆ. ಈ ಬಾರಿ ಲೋಕಸಭೆಗೆ ಆಯ್ಕೆಯಾಗಿರುವ 543 ಸಂಸದರ ಪೈಕಿ 503 ಮಂದಿ ಕೋಟ್ಯಾಧಿಪತಿಗಳು. ಇವರೆಲ್ಲರ ಆಸ್ತಿ ಕನಿಷ್ಠ ಒಂದು ಕೋಟಿ ರೂಪಾಯಿಗೂ ಹೆಚ್ಚು. ದೇಶದ ಅತ್ಯಂತ ಶ್ರೀಮಂತ ಸಂಸದರ ಆಸ್ತಿ ಸಾವಿರಾರು ಕೋಟಿ ರೂಪಾಯಿ ಇದೆ. ಹೀಗಾಗಿ ದೇಶದಲ್ಲಿ ಅತೀ ಹೆಚ್ಚು ಆಸ್ತಿ ಹೊಂದಿರುವ 10 ಶ್ರೀಮಂತ ಸಂಸದರ ಪಟ್ಟಿ ಇಲ್ಲಿದೆ.
ಡಾ ಚಂದ್ರಶೇಖರ್ ಪೆಮ್ಮಸಾನಿ :
ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರು ಆಂಧ್ರಪ್ರದೇಶದ ಗುಂಟೂರಿನಿಂದ ತೆಲುಗು ದೇಶಂ ಪಕ್ಷದ ಟಿಕೆಟ್‌ನಲ್ಲಿ ಗೆದ್ದಿದ್ದಾರೆ. ಮೋದಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಸಚಿವಾರದ ಚಿವರೂ ಆಗಿದ್ದಾರೆ. ಅವರ ಅಸ್ತಿಯ ನಿವ್ವಳ ಮೌಲ್ಯ 5705 ಕೋಟಿ ಎಂದು ತಿಳಿದು ಬಂದಿದೆ. ಇವರು ಶ್ರೀಮಂತ ಸಂಸದರಾಗಿದ್ದಾರೆ
ಕೊಂಡಾ ವಿಶ್ವೇಶ್ವರ ರೆಡ್ಡಿ: ಕೊಂಡಾ ವಿಶ್ವೇಶ್ವರ್ ರೆಡ್ಡಿ ಅವರು ತೆಲಂಗಾಣದ ಚೆಲ್ಲೆವಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ಸಂಸದರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲೂ ಇದೇ ಕ್ಷೇತ್ರದಿಂದ ಭಾರತ್ ರಾಷ್ಟ್ರ ಸಮಿತಿ ಟಿಕೆಟ್‌ನಲ್ಲಿ ಗೆದ್ದಿದ್ದರು. ಅವರು ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಮೌಲ್ಯ 4,568 ಕೋಟಿ ರೂಪಾಯಿ ಎಂದು ಘೋಷಿಸುವ ಮೂಲಕ ದೇಶದ ಎರಡನೇ ಶ್ರೀಮಂತ ಸಂಸದರಾಗಿದ್ದಾರೆ.
ನವೀನ್ ಜಿಂದಾಲ್:
ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರ ಪುತ್ರ ನವೀನ್ ಜಿಂದಾಲ್ ಅವರು ಕುರುಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದಿದ್ದಾರೆ. ಜಿಂದಾಲ್ ಸ್ಟೀಲ್ ಮತ್ತು ಪವರ್ ಅಧ್ಯಕ್ಷ ನವೀನ್ ಜಿಂದಾಲ್ ಅವರ ನಿವ್ವಳ ಮೌಲ್ಯ 1241 ಕೋಟಿ ರೂಪಾಯಿ. ಅವರು ಈ ಲೋಕಸಭೆಯಮೂರನೇ ಶ್ರೀಮಂತ ಸಂಸದರಾಗಿದ್ದಾರೆ. ಈ ಹಿಂದೆಯೂ ಎರಡು ಬಾರಿ ಸಂಸದರಾಗಿದ್ದರು.
ವೇಮಿರೆಡ್ಡಿ ಪ್ರಭಾಕರ ರೆಡ್ಡಿ:
ವೇಮಿರೆಡ್ಡಿ ಪ್ರಭಾಕರ ರೆಡ್ಡಿ ವಿಪಿಆರ್ ಮೈನಿಂಗ್ ಇನ್ನಾ ಸಂಸ್ಥಾಪಕರು, ಅವರ ಒಟ್ಟು ಆಸ್ತಿ 716 ಕೋಟಿ ರೂಪಾಯಿ. ಅವರು ಆಂಧ್ರಪ್ರದೇಶದ ನೆಲ್ಲೂರು ಕ್ಷೇತ್ರದಿಂದ ತೆಲುಗು ದೇಶಂ ಪಕ್ಷದ ಟಿಕೆಟ್‌ನಲ್ಲಿ ಗೆದ್ದಿದ್ದಾರೆ. ಎನ್‌ಡಿಎ ಸರ್ಕಾರದ ಭಾಗವಾಗಿರುವ ಅವರು 18 ನೇ ಲೋಕಸಭೆಯಲ್ಲಿ ನಾಲ್ಕನೇ ಶ್ರೀಮಂತ ಸಂಸದರಾಗಿದ್ದಾರೆ.
ಸಿಎಂ ರಮೇಶ್:
ಬಿಜೆಪಿ ನಾಯಕ ಸಿಎಂ ರಮೇಶ್ ಈ ಹಿಂದೆ ಆಂಧ್ರಪ್ರದೇಶದಿಂದ ರಾಜ್ಯಸಭಾ ಸಂಸದರಾಗಿದ್ದರು. ಈ ಬಾರಿ ಅವರು ಆಂಧ್ರಪ್ರದೇಶದ ಅನಕಪಲ್ಲಿ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರು ಮೊದಲು ತೆಲುಗು ದೇಶಂ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. ಅವರ ಆಸ್ತಿ 497 ಕೋಟಿ ರೂಪಾಯಿ.
ಜ್ಯೋತಿರಾದಿತ್ಯ ಸಿಂಧಿಯಾ:
ಜ್ಯೋತಿರಾದಿತ್ಯ ಸಿಂಧಿಯಾ ಭಾರತದ ರಾಜಕೀಯದಲ್ಲಿ ಚಿರಪರಿಚಿತ ಹೆಸರು. ಅವರ ತಂದೆ ಮತ್ತು ಅವರೇ ಬಹಳ ಕಾಲ ಕಾಂಗ್ರೆಸ್‌ನಲ್ಲಿದ್ದರು. ಅವರ ಆಸ್ತಿ 424 ಕೋಟಿ ರೂಪಾಯಿ. ಅವರು ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹಿಂದಿನ ಮೋದಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಈ ಬಾರಿ ಟೆಲಿಕಾಂ ಸಚಿವರನ್ನಾಗಿ ಮಾಡಲಾಗಿದೆ.
ಛತ್ರಪತಿ ಶಾಹು ಮಹಾರಾಜ್:
ಛತ್ರಪತಿ ಶಾಹುಜಿ ಮಹಾರಾಜರು ಕೊಲ್ಲಾಪುರದ ರಾಜಮನೆತನದ ಸದಸ್ಯರಾಗಿದ್ದಾರೆ. ಅವರ ಸಂಪತ್ತು 342 ಕೋಟಿ ರೂಪಾಯಿ, ಲೋಕಸಭೆ ಚುನಾವಣೆಯಲ್ಲಿ ಅವರು ಮಹಾರಾಷ್ಟ್ರದ ಕೊಲ್ಲಾಪುರ ಕ್ಷೇತ್ರದಿಂದ ಗೆದ್ದಿದ್ದರು.
ಶ್ರೀಭರತ್ ಮಾತುಕುಮಿಲ್ಲಿ:
ವಿಶಾಖಪಟ್ಟಣಂ ಕ್ಷೇತ್ರದಿಂದ ತೆಲುಗು ದೇಶಂ ಪಕ್ಷದ ಟಿಕೆಟ್‌ನಿಂದ ಶ್ರೀಭರತ್ ಮತುಕುಮಿಲಿ ಗೆದ್ದಿದ್ದಾರೆ. ಅವರ ಆಸ್ತಿ 298 ಕೋಟಿ ರೂಪಾಯಿ. ಅವರು ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷರಾಗಿದ್ದಾರೆ.
ಹೇಮಾ ಮಾಲಿನಿ:
ಖ್ಯಾತ ಬಾಲಿವುಡ್ ನಟಿ ಹೇಮಾ ಮಾಲಿನಿ ಅವರು ಉತ್ತರ ಪ್ರದೇಶದ ಮಥುರಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸತತ ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಸಂಪತ್ತು 278 ಕೋಟಿ ರೂಪಾಯಿಗೆ ಹೆಚ್ಚಳ ಆಗಿದೆ.