ಬೆಳ್ತಂಗಡಿ: ವಿವಾಹಿತೆಗೆ ಹಿಗ್ಗಾಮುಗ್ಗಾ ಥಳಿಸಿದ ಬಿಜೆಪಿ ಕಾರ್ಯಕರ್ತ - ಸಿಸಿಕ್ಯಾಮರಾದಲ್ಲಿ ಕೃತ್ಯ ಸೆರೆ


ಬೆಳ್ತಂಗಡಿ: ಟೈಲರಿಂಗ್ ಶಾಪ್‌ಗೆ ನುಗ್ಗಿದ ಬಿಜೆಪಿ ಕಾರ್ಯಕರ್ತನೋರ್ವನು ವಿವಾಹಿತೆಗೆ ಹಿಗ್ಗಾಮುಗ್ಗಾ ಥಳಿಸಿರುವ ಕೃತ್ಯವೊಂದು ಉಜಿರೆಯಲ್ಲಿ ಬೆಳಕಿಗೆ ಬಂದಿದೆ. ಕೃತ್ಯ ಎಸಗಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. 




ಬಿಜೆಪಿ ಕಾರ್ಯಕರ್ತ, ಹೂವಿನ ವ್ಯಾಪಾರಿ ನವೀನ್ ಕನ್ಯಾಡಿನಿಂದ ಕೃತ್ಯ ಎಸಗಿರುವ ಆರೋಪಿ. ಧರ್ಮಸ್ಥಳ ನಿವಾಸಿ ರೂಪಾ ಎಂಬವರು ಹಲ್ಲೆಗೊಳಗಾದ ಮಹಿಳೆ. 

ನವೀನ್‌ಗೆ 7 ಲಕ್ಷ ರೂ. ಸಾಲ ನೀಡಿದ್ದ ರೂಪಾ, ಅದನ್ನು ವಾಪಸ್ ಕೇಳಿದ್ದಕ್ಕೆ ಹಲ್ಲೆ ಎಸಗಲಾಗಿದೆ ಎಂದು ದೂರಲಾಗಿದೆ. ರೂಪಾ ಉಜಿರೆಯಲ್ಲಿ ಬಟ್ಟೆಶಾಪ್ ಹೊಂದಿದ್ದರು‌. ಎರಡು ದಿನಗಳ ಹಿಂದೆ ಏಕಾಏಕಿ ಅವರ ಬಟ್ಟೆಶಾಪ್‌ಗೆ ನುಗ್ಗಿ ನವೀನ್ ಕನ್ಯಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಲ್ಲದೆ ಅವರ ಮೊಬೈಲ್ ಅನ್ನು ಕಿತ್ತುಕೊಳ್ಳುವುದು ದೃಶ್ಯದಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಮಹಿಳೆ ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌. 

ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu