ಬೆಂಗಳೂರು: ಸ್ಕೂಟರ್ ಫುಟ್ ರೆಸ್ಟ್ ನಲ್ಲಿ ನಿಲ್ಲಿಸಿಕೊಂಡು ಸಂಚಾರ - ವೀಡಿಯೋ ವೈರಲ್
Wednesday, April 17, 2024
ಬೆಂಗಳೂರು: ಪುಟ್ಟಮಗುವನ್ನು ಸ್ಕೂಟರ್ ಸೈಡ್ ಸ್ಟ್ಯಾಂಡ್ ಬಳಿಯ ಫುಟ್ ರೆಸ್ಟಲ್ಲಿ ನಿಲ್ಲಿಸಿಕೊಂಡು ಸಂಚಾರ ಮಾಡುತ್ತಿರುವ ವೀಡಿಯೋವೊಂದು ಎಕ್ಸ್(ಟ್ವಿಟರ್) ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ನಿರ್ಲಕ್ಷ್ಯದ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್ ಏರಿಯಾದಲ್ಲಿ ಸಂಚಾರ ಮಾಡುತ್ತಿದ್ದ ಸ್ಕೂಟರ್ ಹಿಂಭಾಗದಲ್ಲಿದ್ದ ವಾಹನ ಸವಾರರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಸ್ಕೂಟರಿನಲ್ಲಿ ಹಿಂಬದಿ ಸವಾರೆ ಮಹಿಳೆ ಹೆಲೈಟ್ ಧರಿಸದೆ ಸಂಚಾರ ಮಾಡುತ್ತಿದ್ದಾರೆ. ಅಲ್ಲದೆ ಮಗುವನ್ನು ಸ್ಕೂಟರಿನ ಸೈಡ್ ಸ್ಟಾಂಡ್ ಹತ್ತಿರ ಫುಟ್ ರೆಸ್ಟ್ ನಲ್ಲಿ ನಿಲ್ಲಿಸಿಕೊಂಡು ನಿರ್ಲಕ್ಷ್ಯದಿಂದ ಸವಾರಿ ಮಾಡಿದ್ದಾರೆ. ಇದನ್ನು ಹಿಂದಿನಿಂದ ಕಾರಿನಲ್ಲಿ ತೆರಳುತ್ತಿದ್ದವರು ವಿಡಿಯೋ ಮಾಡಿದ್ದಾರೆ.
ರಸ್ತೆ ನಿಯಮ ಪಾಲಿಸದೆ ಮಗುವಿನ ಜೀವದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಸಿಟಿ ಪೊಲೀಸ್ ಗೆ ಟ್ಯಾಗ್ ಮಾಡಲಾಗಿದೆ. ಈಡಿಯಟ್ಸ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹ ಮಾಡಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್ ವಿಭಾಗದಿಂದ ವೈಟ್ ಫೀಲ್ಡ್ ಪೊಲೀಸ್ ವೃತ್ತಕ್ಕೆ ಸೂಚನೆ ನೀಡಲಾಗಿದ್ದು, ಸವಾರರ ವಿರುದ್ಧ ಕ್ರಮ ಜರುಗುವ ಸಾಧ್ಯತೆಯಿದೆ.