-->

ಬೇಸಿಗೆಯಲ್ಲಿ ಕೂದಲಿನ  ಆರೈಕೆ ಹೇಗೆ

ಬೇಸಿಗೆಯಲ್ಲಿ ಕೂದಲಿನ ಆರೈಕೆ ಹೇಗೆ


ಈಗಿನ ಬೇಸಿಗೆಗೆ ಅರೋಗ್ಯದ ಆರೈಕೆ ಅಗತ್ಯ ಅತಿಯಾದ ಬಿಸಿಲಿನ ಪರಿಣಾಮ ಕೂದಲು ಉದುರುವುದು ಹೆಚ್ಚಾಗುತ್ತದೆ . ಹೀಗಾಗಿ ಬೇಸಿಗೆಯಲ್ಲಿ ನೆತ್ತಿಯ ಭಾಗವನ್ನು ತಂಪಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮನೆಯಲ್ಲಿ  ಬಳಸುವ ಸುಲಭ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ
ತೆಂಗಿನ ಎಣ್ಣೆ ಬಳಸುವುದು ಉತ್ತಮ
ಕೂದಲಿನ ಸರ್ವಸಮಸ್ಯೆಗೂ ತೆಂಗಿನೆಣ್ಣೆ ಮದ್ದು . ಇದು ಕೂದಲಿನ ಹಾನಿಯನ್ನು ತಪ್ಪಿಸುತ್ತದೆ. ಇದು ಹಾನಿಯಾದ ಹಾನಿ ಹಾನಿಯಾಗದ ಕೂದಲಿನಲ್ಲಿ ಪ್ರೊಟೀನ್ ನಷ್ಟವನ್ನು ತಪ್ಪಿಸುತ್ತದೆ. ತೆಂಗಿನೆಣ್ಣೆ ಬಿಸಿ ಮಾಡಿ ಉಗುರು ಬೆಚ್ಚಗೆ ಇರುವಾಗ ನೆತ್ತಿಗೆ ಭಾಗಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳುವುದರಿಂದ ರಕ್ತದ ಹರಿವು ಹೆಚ್ಚುತ್ತದೆ. ಇಲ್ಲದೆ ಇದು ಹೊಸ ಕೂದಲಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ. ವಾರದಲ್ಲಿ ಮೂರು ಬಾರಿ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಲಭಿಸುತ್ತದೆ. ಎಣ್ಣೆ ಹಚ್ಚಿ ರಾತ್ರಿಯಿಡಿ ಹಾಗೇ ಇರಿಸಿ. ಮರುದಿನ ರಾಸಾಯನಿಕ ಯುಕ್ತ ಶಾಂಪೂ ಬಳಸಿ ತಲೆಸ್ನಾನ ಮಾಡಿ.
ಡಯೆಟ್ ಮತ್ತು ಹೈಡೇಷನ್ :
ಕೂದಲ ಕಾಳಜಿಯ ವಿಚಾರಕ್ಕೆ ಬಂದಾಗ ಡಯೆಟ್ ಪ್ರಮುಖ ಪಾತ್ರ  . ನಿಮ್ಮ ಆಹಾರಕ್ರಮದಲ್ಲಿ ಕಬ್ಬಿಣಾಂಶ, ಝಿಂಕ್, ಬಯೋಟಿನ್, ನಿಯಾಸಿನ್, ವಿಟಮಿನ್ ಸಿ, ವಿಟಮಿನ್ ಡಿ, ಒಮೆಗಾ 3ಎಸ್ ಹಾಗೂ ಒಮೆಗಾ 6ಎಸ್ ಈ ಎಲ್ಲವೂ ಒಳಗೊಂಡಿರಬೇಕು. ಬಾದಾಮಿ ಹಾಗೂ ವಾಲ್‌ನಟ್ ಕೂಡ ನಿಮ್ಮ ಪಟ್ಟಿಯಲ್ಲಿ ಸೇರಿರಬೇಕು. ಜೊತೆಗೆ ನಿರ್ಲಜೀಕರಣವು ಕೂದಲು ಉದುರಲು ಕಾರಣವಾಗಬಹುದು. ಹಾಗಾಗಿ ದೇಹವು ಹೈಡ್ರೆಟ್ ಆಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಪ್ರತಿದಿನ 2 ರಿಂದ 3 ಲೀಟರ್ ನೀರು ಕುಡಿಯಿರಿ. ಇದರೊಂದಿಗೆ ನೀರಿನಾಂಶ ಅಧಿಕವಾಗಿರುವ ಸೌತೆಕಾಯಿ, ಟೊಮೆಟೊ, ಕಲ್ಲಂಗಡಿಯಂತಹ ಹಣ್ಣುಗಳನ್ನು  :
ಲೋಳೆಸರದ ತಿರುಳು 
ತಾಜಾ ಲೋಳೆಸರದ ತಿರುಳನ್ನು ನೆತ್ತಿಯ ಬುಡಕ್ಕೆ ಹಚ್ಚುವುದರಿಂದ ಕೂದಲು ಉದುರುವುದನ್ನು ನಿಯಂತ್ರಿಸಬಹುದು. ಇದರಿಂದ ಕೂದಲು ಉದುರುವುದು ನಿಲ್ಲುವುದರ ಜೊತೆಗೆ ಕೂದಲಿನ ತುದಿ ಸೀಳುವುದು ನಿಲ್ಲುತ್ತದೆ. ನೆತ್ತಿಯ ಭಾಗವನ್ನು ತೇವಗೊಳಿಸುವ ಮೂಲಕ ತಲೆಹೊಟ್ಟನ್ನು ನಿಯಂತ್ರಿಸುತ್ತದೆ.
ಪರಿಹಾರ ಒದಗಿಸುತ್ತದೆ. ಅದಕ್ಕಾಗಿ ನೀವು ಈ ಮಾಸ್ಕ್ ಬಳಸಬಹುದು. ಎರಡು ಮೊಟ್ಟೆಯನ್ನು ಒಡೆದ ಬೌಲ್‌ಗೆ ಹಾಕಿ ಚೆನ್ನಾಗಿ ತಿರುಗಿಸಿ. ಅದಕ್ಕೆ 2 ಚಮಚ ಆಪಲ್ ಸೀಡರ್ ವಿನೇಗರ್ ಸೇರಿಸಿ ನಂತರ ಆಲಿವ್ ಎಣ್ಣೆ ಹಾಗೂ ಒಂದು ಚಮಚ ಜೇನುತುಪ್ಪ ಬೆರೆಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನೆತ್ತಿಯ ಬುಡಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.
ಹೀಟ್ ಸ್ಟೈಲಿಂಗ್ ಉಪಕರಣಗಳ ಬಳಕೆ ಕಡಿಮೆ ಮಾಡಿ :
ಕೂದಲನ್ನು ಕರ್ಲಿ ಮಾಡುವ, ಸ್ಟೇಟ್ ಮಾಡುವ ಅಥವಾ ಕೂದಲು ಒಣಗಿಸುವ ಎಲೆಕ್ಟ್ರಾನಿಕ್ ಪರಿಕರಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಮಖ್ಯವಾಗುತ್ತದೆ. ಇದರಿಂದ ಬೇಸಿಗೆಯಲ್ಲಿ ಕೂದಲಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಕೂದಲನ್ನು ಗಾಳಿಗೆ ಹರಡಲು ಬಿಟ್ಟು ಹಾಗೇ ಒಣಗಿಸುವುದು ಉತ್ತಮ ವಿಧಾನ.


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article