-->
1000938341
2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ - ದಕ್ಷಿಣ ಕನ್ನಡ ಫಸ್ಟ್, ಉಡುಪಿ ದ್ವಿತೀಯ

2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ - ದಕ್ಷಿಣ ಕನ್ನಡ ಫಸ್ಟ್, ಉಡುಪಿ ದ್ವಿತೀಯ


 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಬುಧವಾರ ಬಿಡುಗಡೆಯಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದೆ.
https://karesults.nic.in ವೆಬ್ ಸೈಟ್ ನಲ್ಲಿ 11 ಗಂಟೆ ನಂತರ ಫಲಿತಾಂಶ ವೀಕ್ಷಿಸಬಹುದು.
ಮಂಡಳಿಯ ಅಧ್ಯಕ್ಷೆ ಎನ್. ಮಂಜುಶ್ರೀ, ಪರೀಕ್ಷಾ ವಿಭಾಗದ ನಿರ್ದೇಶಕ ಗೋಪಾಲಕೃಷ್ಣ ಸೇರಿ ಹಿರಿಯ ಅಧಿಕಾರಿಗಳು ಫಲಿತಾಂಶವನ್ನು ಘೋಷಣೆ ಮಾಡಿದ್ದಾರೆ. ಈ ಬಾರಿ ದ್ವಿತೀಯ ಪಿಯುಸಿ 81.15% ಫಲಿತಾಂಶ ಬಂದಿದೆ. ಪ್ರತೀ ವರ್ಷದಂತೆ ಈ ಬಾರಿ ಕೂಡ ಬಾಲಕಿಯರೇ (80.25%) ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ. ಗದಗ (72.86%) ಕೊನೆಯ ಸ್ಥಾನ ಪಡೆದಿದೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ ಗಳು - 6,98,378
ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 5,52690
ಶೇಕಾಡ 85% ಹಾಗೂ ಅದಕ್ಕಿಂತ ಹೆಚ್ಚಿನ ಅಂಕ - 1,53,370
ಶೇಕಡಾ 60% - 2,89733
ದ್ವಿತೀಯ ದರ್ಜೆ- 72,098 
ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದವರು - 37,489
ಮಾರ್ಚ್‌ 1ರಿಂದ 22ರವರೆಗೆ ರಾಜ್ಯದ 1120ಕ್ಕೂ ಹೆಚ್ಚು ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸಿದ್ದು, ಸುಮಾರು 7 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು.

Ads on article

Advertise in articles 1

advertising articles 2

Advertise under the article