ಮಂಗಳೂರು: ಕೊನೆಯ ಕ್ಷಣದಲ್ಲಿ ಎ.14ರ ಮೋದಿ ಸಮಾವೇಶ ರದ್ದು - ರೋಡ್ ಶೋ ಮಾತ್ರ


ಮಂಗಳೂರು: ಎಪ್ರಿಲ್14ರಂದು‌ ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ  ನಡೆಯಬೇಕಿದ್ದ ಪ್ರಧಾನಿ ಮೋದಿಯವರ ಸಮಾವೇಶ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದೆ. ಸಮಾವೇಶದ ಬದಲು ಬರೀ ರೋಡ್ ಶೋ ನಡೆಸಲಾಗುತ್ತದೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಸಮಾವೇಶಕ್ಕೆ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಇಂದು ಚಪ್ಪರ ಮುಹೂರ್ತವೂ ನಡೆದಿತ್ತು. ಜರ್ಮನ್ ಪೆಂಡಾಲ್ ಹಾಕಲು ಸಿದ್ಧತೆಯೂ ನಡೆದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕೆಲವೊಂದು ಕಾರಣಗಳಿಂದ ಸಮಾವೇಶ ರದ್ದುಗೊಂಡಿದೆ. 

ಇದೀಗ ಸಮಾವೇಶದ ಬದಲು ರೋಡ್ ಶೋ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಎಪ್ರಿಲ್ 14ರಂದು ಸಂಜೆ ವೇಳೆಗೆ ಮೋದಿ ರೋಡ್ ಶೋ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇನ್ನಷ್ಟೇ ರೋಡ್ ಶೋ ರೂಟ್ ಮ್ಯಾಪ್ ಸಿದ್ಧಪಡಿಸಬೇಕಿದೆ.