-->

ಬೋಲ್ಡ್ ಡ್ರೆಸಿಂಗ್ ಪ್ರಶ್ನೆಗೆ ರಾಕುಲ್ ಪ್ರೀತ್ ನೀಡಿರುವ ಖಡಕ್ ಉತ್ತರ ಇದು

ಬೋಲ್ಡ್ ಡ್ರೆಸಿಂಗ್ ಪ್ರಶ್ನೆಗೆ ರಾಕುಲ್ ಪ್ರೀತ್ ನೀಡಿರುವ ಖಡಕ್ ಉತ್ತರ ಇದು


ಮುಂಬೈ: ಬ್ಲಾಕ್‌ಬಾಸ್ಟ‌ರ್ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಇತ್ತೀಚೆಗಷ್ಟೇ ನಟ- ನಿರ್ಮಾಪಕ ಜಾಕಿ ಭಗ್ನಾನಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲ ವಾರಗಳ ಹಿಂದಷ್ಟೇ ಗೋವಾದಲ್ಲಿ ನಡೆದ ಅತ್ಯಂತ ಆತ್ಮೀಯ ಕೂಟದಲ್ಲಿ ಈ ಜೋಡಿಯ ಅದ್ದೂರಿ ವಿವಾಹ ನಡೆದಿತ್ರು. ಸುದ್ದಿಗಾರರೊಬ್ಬರು ಇತ್ತೀಚಿನ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ನಟಿ ಕೊಟ್ಟ ಉತ್ತರ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನೀವು ಇನ್ನುಮುಂದೆ ನಿಮ್ಮ ಬೋಲ್ಡ್ ಡ್ರೆಸ್ಸಿಂಗ್ ಸ್ಟೈಲ್ ಅನ್ನು ಅಡ್ಜಸ್ಟ್ ಮಾಡಿಕೊಳ್ಳುತ್ತೀರಾ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ರಾಕುಲ್ ಪ್ರೀತ್ ಸಿಂಗ್, "ಡ್ರೆಸ್ಸಿಂಗ್ ಬಗ್ಗೆ ನನ್ನ ಪತಿ ಬಹಳ ಕೂಲ್ ಇದ್ದಾರೆ. ಪತಿಯ ಮನೆಯವರೂ ಕೂಡ ಕೂಲ್ ಆಗಿದ್ದಾರೆ. ಹಾಗಾಗಿ ಯಾವುದೇ ತೊಂದರೆಯಿಲ್ಲ” ಎಂದಿದ್ದಾರೆ.


"ಆದರೆ ನಟಿಯರ ಬೋಲ್ಡ್ ಡ್ರೆಸ್ಸಿಂಗ್ ಬಗ್ಗೆ ಪ್ರಶ್ನಿಸುವ ನೀವು, ಯಾಕೆ ನಟರನ್ನು ಇದೇ ರೀತಿಯಲ್ಲಿ ಪ್ರಶ್ನಿಸುವುದಿಲ್ಲ? ಮದುವೆಯಾದ ಬಳಿಕ ನಟರು ತಮ್ಮ ಡ್ರೆಸ್ಸಿಂಗ್ ಸ್ಟೈಲ್‌ನ ಬದಲಾಯಿಸುತ್ತಾರಾ? ಇಲ್ಲ ಅಲ್ವೇ” ಎಂದು ಹೇಳುವ ಮೂಲಕ ಖಡಕ್ ಉತ್ತರ ಕೊಟ್ಟಿದ್ದಾರೆ. ಸದ್ಯ ನಟಿಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Ads on article

Advertise in articles 1

advertising articles 2

Advertise under the article