-->
ದೇಶ ಹಿರಿಮೆಗೆ ಮತ್ತೊಂದು ಗರಿ ಅರ್ಪಣೆ - ನೀರಿನಾಳದ ಮೆಟ್ರೊ ಮಾರ್ಗ ಇಂದು ಉದ್ಘಾಟನೆ ಮಾಡಲಿರುವ ಮೋದಿ

ದೇಶ ಹಿರಿಮೆಗೆ ಮತ್ತೊಂದು ಗರಿ ಅರ್ಪಣೆ - ನೀರಿನಾಳದ ಮೆಟ್ರೊ ಮಾರ್ಗ ಇಂದು ಉದ್ಘಾಟನೆ ಮಾಡಲಿರುವ ಮೋದಿ


ಕೋಲ್ಕತಾ : ದೇಶದ ಮೊದಲ ನೀರಿನಾಳದ ಮೆಟ್ರೊ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ. ದೇಶದ ಸಾರಿಗೆ ಇತಿಹಾಸದಲ್ಲಿ ಮೈಲುಗಲ್ಲು ಎಂದು ಹೇಳಲಾಗಿರುವ ಈ ನೀರಿನಾಳದ ಮೆಟ್ರೊ ಮಾರ್ಗವನ್ನು ಪಶ್ಚಿಮ ಬಂಗಾಲದ ಹೌರಾದಲ್ಲಿ ಹೂಗ್ಲಿ ನದಿ (ಗಂಗಾ)ಯಲ್ಲಿ ನಿರ್ಮಿಸಲಾಗಿದೆ.


 ಇದು ದೇಶದ ಮೊದಲ ನೀರಿನಾಳದ ಮೆಟ್ರೋ ಮಾರ್ಗ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕೋಲ್ಕತಾ ಮೆಟ್ರೊದ 16.6 ಕಿಲೋಮೀಟರ್ ಉದ್ದದ ಪೂರ್ವ-ಪಶ್ಚಿಮ ಮಾರ್ಗದಲ್ಲಿ 10.8 ಕಿ.ಮೀ. ಮಾರ್ಗ ಸುರಂಗದಲ್ಲಿದ್ದರೆ, 5.75 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿದೆ. ಈ ಪೈಕಿ 4.8 ಕಿ.ಮೀ.ಹೌರಾ ಮೈದಾನ- ಎಸ್‌ಪ್ಲಾಂಡೆ ಮಧ್ಯೆ ಇದೆ.

 ಈ ಮಾರ್ಗ 5 ನಿಲ್ದಾಣಗಳನ್ನು ಹೊಂದಿದ್ದು ಈ ಪೈಕಿ ಮೂರು ಸುರಂಗದಲ್ಲಿ ಬರುತ್ತವೆ. ಹೂಗ್ಲಿ ನದಿಯ ಕೆಳಭಾಗದಲ್ಲಿ 520 ಮೀಟರ್ ಕ್ರಮಿಸಲು ಕೇವಲ 45 ಸೆಕೆಂಡ್‌ಗಳು ಸಾಕು . 

ಕಳೆದ ವರ್ಷದ ಎಪ್ರಿಲ್‌ನಲ್ಲೇ ಕೋಲ್ಕತಾ ಮೆಟ್ರೊ ಸುರಂಗ ಮಾರ್ಗದ ಹೂಗ್ಲಿ ನದಿಯ ಕೆಳಗೆ ನೀರಿನಾಳದಲ್ಲಿ ಮೆಟ್ರೊ ರೈಲು ಓಡಿಸುವಲ್ಲಿ ಯಶಸ್ವಿಯಾಗಿತ್ತು. ಇದರಿಂದ ಹೌರಾ- ಕೋಲ್ಕತಾ ಅವಳಿ ಸಿಟಿ ಸಂಪರ್ಕ ಸುಗಮವಾಗಲಿದೆ.

Ads on article

Advertise in articles 1

advertising articles 2

Advertise under the article