ಯಾವುದೇ ಭಯವಿಲ್ಲದೆ ಬೈಕ್ ಮೇಲೆ ನಿಂತು ಡೇಂಜರಸ್ ಸ್ಟಂಟ್


ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಲೈಕ್ಸ್ ಗಳು ಸಿಗಬೇಕು, ಜನರು ತಮ್ಮನ್ನು ಗುರುತಿಸಬೇಕೆಂದು ಏನೇನೋ‌ ಮಾಡುತ್ತಿರುತ್ತಾರೆ. ಇದೀಗ ಯುವಕನೊಬ್ಬ ಬೈಕ್‌ನಲ್ಲಿ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವಕನೊಬ್ಬ ಸಂಚಾರದಲ್ಲಿದ್ದ ಬೈಕ್ ನ ಸೀಟ್ ಮೇಲೆ ನಿಂತು ಬೈಕ್ ಚಲಾಯಿಸುತ್ತಿರುವುದು ಕಂಡು ಬಂದಿದೆ. ಈತ ಬೈಕ್ ಓಡಿಸುವ ರಸ್ತೆಯಲ್ಲಿ ಅತ್ತ ಕಡೆಯಿಂದ ಎರಡು ಮೂರು ಘನ ವಾಹನಗಳು ಬರುತ್ತಿರುವುದು ಕಂಡು ಬರುತ್ತಿದೆ. ಆದರೆ ಈ ಯುವಕ ಸ್ವಲ್ಪವೂ ಬ್ಯಾಲೆನ್ಸ್ ತಪ್ಪದೆ ಬೈಕ್ ಸವಾರಿ ಮಾಡುತ್ತಿದ್ದಾನೆ.


ಈ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುವಾಗ, ಖಾತೆಯ ಬಳಕೆದಾರರು, 'ಯಮರಾಜ ಈಗ ನಿದ್ರಿಸುತ್ತಿದ್ದಾನೆ, ಆದ್ದರಿಂದ ಅವರನ್ನು ಉಳಿಸಲಾಗಿದೆ' ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ವೀಡಿಯೊವನ್ನು ವೀಕ್ಷಿಸಿದ ನೆಟ್ಟಿಗರು ಯಮರಾಜ ಪ್ರಸ್ತುತ ಹೋಳಿ ರಜೆಯಲ್ಲಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಕೆಲವು ಜನರು ಅಪಾಯಕಾರಿ ಸಾಹಸಗಳನ್ನು ಮಾಡಿದರೆ ಪ್ರೇಕ್ಷಕರು ಅವರನ್ನು ಕೂಲ್ ಮತ್ತು ಧೈರ್ಯಶಾಲಿ ಎಂದು ಪರಿಗಣಿಸುತ್ತಾರೆ ಎಂದು ಭಾವಿಸಲು ಪ್ರಾರಂಭಿಸಿದ್ದಾರೆ. ಆದ್ದರಿಂದ ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡುವ ವೀಡಿಯೊಗಳನ್ನು ಮಾಡುತ್ತಾರೆ ಮತ್ತು ಅವರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ.