-->

ಭಿಕ್ಷೆ ಬೇಡುವ ನಟನ ಬಗ್ಗೆ ನಿಮಗೆ ಗೊತ್ತಾ? ಈತ ತಿಂಗಳಿಗೆ ಗಳಿಸುವ ಆದಾಯ ಎಷ್ಟು ಗೊತ್ತಾ?

ಭಿಕ್ಷೆ ಬೇಡುವ ನಟನ ಬಗ್ಗೆ ನಿಮಗೆ ಗೊತ್ತಾ? ಈತ ತಿಂಗಳಿಗೆ ಗಳಿಸುವ ಆದಾಯ ಎಷ್ಟು ಗೊತ್ತಾ?


 ಪ್ರತಿಯೊಬ್ಬ ವ್ಯಕ್ತಿಯೂ ತಾನು ಶ್ರೀಮಂತನಾಗಬೇಕೆಂಬ ಆಸೆಯನ್ನು ಇಟ್ಟುಕೊಂಡು ದಿನನಿತ್ಯ ಕಷ್ಟಪಟ್ಟು ದುಡಿಯುತ್ತಾನೆ. 
ಕಷ್ಟಪಟ್ಟು ದುಡ್ಡಿದ ಹಣವನ್ನು ಪೋಲು ಮಾಡದೆ ಅದನ್ನು ಕೂಡಿಟ್ಟು ಮುಂದಿನ ದಿನಗಳಲ್ಲಿ ಒಂದೊಳ್ಳೆ ವಸ್ತು ಖರೀದಿಸಲು ಇಷ್ಟಪಡುತ್ತಾರೆ. 

 ಭಿಕ್ಷೆ ಬೇಡಿ ಶ್ರೀಮಂತರಾದವರ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ.
ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಖ್ಯಾತ ನಟನೊಬ್ಬ ಬರಿ ಭಿಕ್ಷೆ ಬೇಡಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ ಎಂದರೆ ನೀವು ಶಾಕ್ ಆಗುವುದಂತೂ ಖಂಡಿತಾ ಕಳೆದ 12 ವರ್ಷಗಳಿಂದ ಭಿಕ್ಷೆ ಬೇಡುತ್ತಾ ಜೀವನ ನಡೆಸುವ ಮೂಲಕ ಈ ನಟ ಶ್ರೀಮಂತ ಭಿಕ್ಷುಕ ಎನ್ನಿಸಿಕೊಂಡಿದ್ದಾರೆ
 
ಚೀನಾದ ಖ್ಯಾತ ನಟ ಲು ಜಿಂಗಾಂಗ್ ಕಳೆದ 12 ವರ್ಷಗಳಿಂದ ಚೀನಾದ ಜನಪ್ರಿಯ ಪ್ರವಾಸಿ ತಾಣಗಳಿಗೆ ಹೋಗಿ ಅಲ್ಲಿ ಹರಕಳು ಬಟ್ಟೆ ತೊಟ್ಟು, ಸಪ್ಪೆ ಮೋರೆ ಹಾಕಿ ಕುಳಿತು ಬಡ ಭಿಕ್ಷುಕನಂತೆ ನಾಟಕವನ್ನಾಡುತ್ತಾ ಅಲ್ಲಿಗೆ ಬರುವಂತಹ ಪ್ರವಾಸಿಗರ ಬಳಿ ಭಿಕ್ಷೆ ಬೇಡುವಂತಹ ಕೆಲಸವನ್ನು ಮಾಡುತ್ತಿದ್ದಾನೆ. 

ಈತನ ಮುಗ್ಧ ನೋಟವನ್ನು ಕಂಡು ಪಾಪ ಈತ ಊಟ ಮಾಡಿ ಅದೆಷ್ಟು ದಿನಗಳಾಗಿರಬಹುದೋ ಎಂದು ಪ್ರವಾಸಿಗರು ಈತನ ಮೇಲಿನ ಅನುಕಂಪದಿಂದ ಈತನಿಗೆ ಹಣ ಮಾತ್ರವಲ್ಲದೆ ಆಹಾರ ಮತ್ತು ಪಾನೀಯಗಳನ್ನು ಸಹ ನೀಡುತ್ತಾರೆ.

ಹೀಗೆ ತನ್ನ ನಟನಾ ಕೌಶಲ್ಯದಿಂದಲೇ ಚೀನಾದ ಹೆನಾನ್ ಪ್ರಾಂತ್ಯದ ಕ್ವಿನ್ನಿಂಗ್ ಶಾಂಘ ಗಾರ್ಡನ್ ನ ರಮಣೀಯ ಸ್ಥಳಗಳಲ್ಲಿ ಭಿಕ್ಷುಕನ ಪಾತ್ರವನ್ನು ನಿರ್ವಹಿಸುತ್ತಾ ಲು ಜಿಂಗಾಂಗ್ ತಿಂಗಳಿಗೆ 70,000 ಯುವಾನ್ ಅಂದರೆ ಸುಮಾರು 8 ಲಕ್ಷ ರೂ ವರೆಗೆ ಹಣ ಸಂಪಾದನೆ ಮಾಡುತ್ತಾನೆ. ಜೊತೆಗೆ ಪ್ರತಿನಿತ್ಯ ಉಚಿತ ಆಹಾರ ಮತ್ತು ಪಾನೀಯವನ್ನು ಸಹ ಗಳಿಸುತ್ತಿದ್ದಾನೆ.

ಚೀನಾದ ಜನರ ಗರಿಷ್ಠ ಮಾಸಿಕ ವೇತನವು ಸುಮಾರು 29,000 ಯುವಾನ್ ಅಂದರೆ ಅಂದಾಜು ಮೂರು ಲಕ್ಷ ರೂ. ಗಳು. ಆದರೆ ಈತ ಭಿಕ್ಷಾಟನೆಯಿಂದಲೇ ತಿಂಗಳಿಗೆ 8 ಲಕ್ಷ ರೂಪಾಯಿಗಳಷ್ಟು ಹಣ ಸಂಪಾದನೆ ಮಾಡುತ್ತಾನೆ. ಕೆಲವು ವರದಿಯ ಪ್ರಕಾರ ಲು ಜಿಂಗಾಂಗ್ ಚೀನಾದ ಅತ್ಯಂತ ಶ್ರೀಮಂತ ಭಿಕ್ಷುಕ ಎನ್ನಿಸಿಕೊಂಡಿದ್ದಾನೆ. 
ಈ ಕುರಿತು ಪ್ರತಿಕ್ರಿಯಿಸಿರುವ ನಟ ಲು ಜಿಂಗಾಂಗ್, ನನ್ನ ನಿರ್ಧಾರಕ್ಕೆ ಮೊದಲಿಗೆ ಕುಟುಂಬವು ಒಪ್ಪಿಗೆ ನೀಡಿರಲಿಲ್ಲ. ನಂತರದ ದಿನಗಳಲ್ಲಿ ಇದರಿಂದ ಬರುವ ಗಳಿಕೆಯನ್ನು ಕಂಡು ಕುಟುಂಬ ಸದಸ್ಯರು ಮನಸ್ಸು ಬದಲಾಯಿಸಿದರು ಎಂದು ಲು ಜಿಂಗಾಂಗ್ ಹೇಳಿದ್ದಾನೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article