ವಿವಾಹಿತೆ ಅನುಮಾನಾಸ್ಪದ ರೀತಿ ಸಾವು: ಪತಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪುತ್ರಿಯ ಕೊಲೆಗೈದ ಎಂದ ಪೋಷಕರು
Friday, February 23, 2024
ಹಾಸನ: ನವವಿವಾಹಿತೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಹುಣಸೂರು ನಿವಾಸಿ ಸುರಭಿ(24) ಮೃತಪಟ್ಟ ದುರ್ದೈವಿ. ಸುರಭಿ ಪತಿಯೇ ಆಕೆಯನ್ನು ಕೊಲೆ ಮಾಡಿದ್ದಾನೆಂದು ಮೃತಪಟ್ಟಾಕೆಯ ಪೋಷಕರು ಆರೋಪ ಮಾಡಿದ್ದಾರೆ.
ಮೃತ ಸುರಭಿಗೆ ಮೂರು ವರ್ಷಗಳ ಹಿಂದೆ ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ನೊಂದಿಗೆ ವಿವಾಹವಾಗಿತ್ತು. ಆದರೆ ನಿನ್ನೆ ಆಕೆ ಪತಿ ಮನೆಯಲ್ಲಿ ಏಕಾಏಕಿ ಸಾವನ್ನಪ್ಪಿದ್ದಾಳೆ. "ಸುರಭಿ ಲೋ ಬಿಪಿಯಾಗಿ ಮೃತಪಟ್ಟಿದ್ದಾಳೆ" ಎಂದು ಪತಿ ದರ್ಶನ್, ಸುರಭಿ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.
ಸದ್ಯ ಸುರಭಿ ಪೋಷಕರ ಪ್ರಕಾರ ಅಳಿಯನೇ ಪುತ್ರಿಯನ್ನು ಕೊಲೆ ಮಾಡಿದ್ದಾನೆ. ದರ್ಶನ್ ಗೆ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧವಿತ್ತು. ಇದನ್ನು ಪ್ರಶ್ನಿಸುತ್ತಿದ್ದ ಸುರಭಿಯನ್ನು ನೇಣು ಬಿಗಿದು ಕೊಲೆ ಮಾಡಿ ನಾಟವಾಡುತ್ತಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶ್ರವಣಬೆಳಗೊಳ ಆಸ್ಪತ್ರೆಗೆ ಸುರಭಿ ಮೃತದೇಹವನ್ನು ಪೊಲೀಸರು ಶಿಫ್ಟ್ ಮಾಡಿದ್ದಾರೆ.
ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.