-->

ಮಂಗಳೂರು: ಪಾಠ ಮಾಡುವಾಗ ಶಿಕ್ಷಕಿಯಿಂದ ರಾಮನಿಂದನೆ ಆರೋಪ - ಅಮಾನತಿಗೆ ಹೆತ್ತವರ ಪಟ್ಟು

ಮಂಗಳೂರು: ಪಾಠ ಮಾಡುವಾಗ ಶಿಕ್ಷಕಿಯಿಂದ ರಾಮನಿಂದನೆ ಆರೋಪ - ಅಮಾನತಿಗೆ ಹೆತ್ತವರ ಪಟ್ಟು


ಮಂಗಳೂರು: ಪಾಠ ಮಾಡುತ್ತಿದ್ದಾಗಲೇ ಶಿಕ್ಷಕಿಯೊಬ್ಬರು ಶ್ರೀರಾಮನನ್ನು ನಿಂದಿಸಿದ್ದಾರೆಂದು ಆರೋಪಿಸಿ ಶಾಲೆಗೆ ಮುತ್ತಿಗೆ ಹಾಕಿ ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಮಧ್ಯಾಹ್ನ ಮಂಗಳೂರಿನಲ್ಲಿ ನಡೆದಿದೆ.

ನಗರದ ಜಪ್ಪು ಸೈಂಟ್ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿನ ಶಿಕ್ಷಕಿ ಸಿಸ್ಟರ್ ಪ್ರಭಾ ಮೇಲೆ ಈ ಆರೋಪ ಕೇಳಿ ಬಂದಿದೆ. ಶುಕ್ರವಾರ ಏಳನೇ ತರಗತಿಗೆ ಶಿಕ್ಷಕಿ ಸಿಸ್ಟರ್ 'Work is Worship' ಪಾಠ ಮಾಡುತ್ತಿದ್ದರು‌. ಈ ವೇಳೆ ಅವರು ಶ್ರೀರಾಮನನ್ನು ಅವಹೇಳನವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳು ಶಿಕ್ಷಕಿಯ ನಿಂದನೆಯ ಮಾತಿನ ಬಗ್ಗೆ ಮನೆಯಲ್ಲಿ ಹೇಳಿದ್ದಾರೆ. ವಿಚಾರ ತಿಳಿದು ಪೋಷಕಿಯೊಬ್ಬರು ಈ ಶಿಕ್ಷಕಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆಡಿಯೋ ವೈರಲ್ ಆಗಿದೆ‌. ಆದ್ದರಿಂದ ಹಿಂದೂ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಶನಿವಾರ ಮಧ್ಯಾಹ್ನ ವೇಳೆ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಮಧ್ಯಾಹ್ನ ಸೇರಬೇಕೆಂಬ ಆಡಿಯೋ ಕೂಡಾ ವೈರಲ್ ಆಗಿದೆ. ಮಧ್ಯಾಹ್ನ 2 ಘಂಟೆಗೆ ಶಾಲಾ ಆವರಣದಲ್ಲಿ ಸೇರಬೇಕಾಗಿ ಸಂದೇಶ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಮಧ್ಯಾಹ್ನವಾಗುತ್ತಲೇ ಶಾಲಾ ಆವರಣದಲ್ಲಿ ಜಮಾವಣೆಯಾದ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಿಕ್ಷಕಿಯ ಅಮಾನತಿಗೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಶಿಕ್ಷಕಿಯ ಅಮಾನತು ಮಾಡಬೇಕೆಂದು ಮುಖ್ಯ ಶಿಕ್ಷಕರಿಗೆ ಮೂರು ದಿನಗಳ ಗಡುವು ನೀಡಿದ್ದಾರೆ. ಈ ಬಗ್ಗೆ ಬಿಇಒಗೂ ದೂರು ನೀಡಲಾಗಿದ್ದು, ಬಿಇಒ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article