-->

ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಸವಾದ್ ಸುಳ್ಯ ನೇಮಕ

ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಸವಾದ್ ಸುಳ್ಯ ನೇಮಕ

 

ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಸವಾದ್ ಸುಳ್ಯ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಸರ್ಕಾರದ  ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ, ಉಪಮುಖ್ಯಮಂತ್ರಿ  ಡಿ.ಕೆ ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವರಾದ  ಎಂ. ಸಿ ಸುಧಕಾರ್ ಅವರ ಸೂಚನೆಯಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ

ಸವಾದ್ ಸುಳ್ಯ ಮೂಲತ ಸುಳ್ಯ ನಗರದ ಗಾಂಧಿನಗರದವರು, ಇವರು ತನ್ನ ಪ್ರಾಥಮಿಕ  ಶಿಕ್ಷಣವನ್ನು ಸೈಂಟ್ ಬ್ರಿಜಿಸ್ಟ್ನಲ್ಲಿ  ಮುಗಿಸಿ 14 ನೇ ವಯಸ್ಸಿನಲ್ಲಿ  ಸರಕಾರಿ ಪ್ರೌಢ ಶಾಲೆ  ಗಾಂಧೀನಗರ ಸುಳ್ಯ ಇದರ ಚುನಾಯಿತ  ಉಪನಾಯಕನಾಗಿ ಆಯ್ಕೆಗೊಂಡಿದ್ದು, 10 ನೇ ತರಗತಿಯಲ್ಲಿ ಚುನಾಯಿತ ನಾಯಕನಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿರುತ್ತಾರೆ, ಇವರು ತಮ್ಮ ಶಾಲಾ ದಿನಗಳಲ್ಲೇ ಕಾಂಗ್ರೆಸ್ ಬಾಲ ಸೇವಾದಳದಲ್ಲಿ ಸಕ್ರಿಯರಾಗಿದ್ದವರು, 2009 ರಲ್ಲಿ ತಾನು ಹೈಸ್ಕೂಲ್ ನಲ್ಲೇ ಓದುತ್ತಿರುವಾಗ NSUI ವಿದ್ಯಾರ್ಥಿ ಸಂಘಟನೆಗೆ ಕಾಲಿಟ್ಟವರು ಸವಾದ್ ಸುಳ್ಯ.

ಸುಳ್ಯದ ಗಾಂಧಿನಗರದಲ್ಲಿ ತನ್ನ ಪಿಯುಸಿ ಶಿಕ್ಷಣದ ಸಂದರ್ಭದಲ್ಲಿ NSUI ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ, ಸುಳ್ಯ ನಗರ ಅಧ್ಯಕ್ಷರಾಗಿ, ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ, ಸರ್ವ ಕಾಲೇಜು ಸಂಘದ ಕಾರ್ಯದರ್ಶಿಯಾಗಿ ಕೂಡ ಸೇವೆ ಸಲ್ಲಿಸಿದ್ದಾರೆ, ಅದೇ ರೀತಿ NSUI ಕರ್ನಾಟಕದ ಚುನಾಯಿತ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸಂಚಾಲಕರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ

ತದನಂತರ  2017 ರ ಸಂದರ್ಭದಲ್ಲಿ NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗೆ ನಡೆದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಿಂತು ಗೆದ್ದು ಬೀಗಿದ್ದು, ಅದೇ ವರ್ಷ NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ  ಮಂಗಳೂರಿನ ಸಂತ ಆಗ್ನೇಸ್ (ಸ್ವಾಯತ್ತ) ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ "ಇಂದಿರಾ" ಎಂಬ ಕಾರ್ಯಾಗಾರವು ನಡೆಸಲಾಗಿತ್ತು, ಈ ಕಾರ್ಯಕ್ರಮದ ಪ್ರಮುಖ ನಿರ್ವಹಣೆ ಮಾಡಿದವರು ಸವಾದ್ ಸುಳ್ಯ ಅವರು, ಅದೇ ರೀತಿ 2020 ರಲ್ಲಿ ಕೋವಿಡ್ ಸಂದರ್ಭದಲ್ಲಿ  ವಿದ್ಯಾರ್ಥಿಗಳು ಹೊರರಾಜ್ಯಕ್ಕೆ ತೆರಳೂವ ಹಾಗೂ ಊಟದ ವ್ಯವಸ್ಥೆಯನ್ನು ಕೂಡ NSUI ಜಿಲ್ಲಾ ಸಮಿತಿ ವತಿಯಿಂದ ಸವಾದ್ ಸುಳ್ಯ ಹಾಗೂ ಶೌನಕ್ ರೈ ಅವರ ನೇತೃತ್ವದಲ್ಲಿ ನಡೆಯಿತು, 2020ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ನಡೆಯುತ್ತಿದ್ದ NEP ಶಿಕ್ಷಣ ನೀತಿಯ ಬಗ್ಗೆ ವಿರೋಧಿಸಿ ಪ್ರತಿಭಟಿಸಿದ್ದು ಇವರ ನೇತೃತ್ವದಲ್ಲಿ, ತದನಂತರ 2020 ರಲ್ಲೇ NSUI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ತದನಂತರ ಪುತ್ತೂರಿನಲ್ಲಿ "ಪ್ರೇರಣಾ" ಕಾರ್ಯಾಗಾರ , 8 ವಿಧಾನಸಭಾ ಕ್ಷೇತ್ರದಲ್ಲಿ "ಸಂವಿಧಾನ ಕಡೆ, ನಮ್ಮ ಕಡೆ" ಕಾರ್ಯಕ್ರಮ "ಚಿಂತನ-ಮಂಥನ" ಕಾರ್ಯಾಗಾರ NEP ಶಿಕ್ಷಣ ನೀತಿ ವಿರೋಧಿಸಿ "Reject NEP" ಅಭಿಯಾನ ಹಾಗೂ ಜಿಲ್ಲೆಯಲ್ಲಿ ವಿನೂತನವಾಗಿ "ಕ್ಯಾಂಪಸ್ ಗೇಟ್ ಮೀಟ್" ಅಭಿಯಾನ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಖನ್ನು ನಡೆಸಿದ್ದಾರೆ.  ಇವರ ಸಂಘಟನಾತ್ಮಕ ಚತುರತೆಯಿಂದ ವಿಧ್ಯಾರ್ಥಿ ದೆಸೆಯಿಂದಲೆ ನಾಯಕತ್ವ ಗುಣ ಅಳವಡಿಸಿಕೊಂಡಿದ್ದ ಸವಾದ್ ವಿಧ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾಹ ದೊರಕಿಸಿ ಕೊಡುವಲ್ಲಿ ಯಶ್ವಸ್ಸಿಯಾಗಿದ್ದಾರೆ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹೋರಾಟ, ಉಚಿತ ಲ್ಯಾಪ್ ಟಾಪ್ ಮತ್ತು ಅರಿವು ಲೋನ್ ವಿತರಣೆ ವಿಳಂಬವಾದಾಗ   ಅದರ ವಿರುಧ್ದ ಮುಖ್ಯಮಂತ್ರಿ ಸಹಿತ ಅದಕ್ಕೆ ಸಂಬಂದಪಟ್ಟವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದು  ಅವರ ನಾಯಕತ್ವ ಹಿಡಿದ ಕೈಗನ್ನಡಿಯಾಗಿದೆ, ಇದೀಗ ಉನ್ನತ ಮಟ್ಟದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ

Ads on article

Advertise in articles 1

advertising articles 2

Advertise under the article