39 ದಿನಗಳಲ್ಲಿ ಶಬರಿಮಲೆಗೆ 204 ಕೋ.ರೂ. ಆದಾಯ



ತಿರುವನಂತಪುರ : ಕೇರಳದ ಶಬರಿಮಲೆ ದೇಗುಲದಲ್ಲಿ ಡಿ. 25ರ ವರೆಗೆ 39 ದಿನಗಳಲ್ಲಿ 204.30 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ತಿರುವಾಂಕೂರು ದೇವಸ್ವಮ್ ಮಂಡಳಿ (ಟಿಡಿಬಿ) ಹೇಳಿದೆ


39 ದಿನಗಳಲ್ಲಿ ದೇಗುಲದ ವಿವಿಧ ಮೂಲ ಗಳಿಂದ ಒಟ್ಟು 204.30 ಕೋಟಿ ರೂ. ಆದಾಯ  ಸಂಗ್ರಹವಾಗಿದೆ. ಹುಂಡಿ ಕಾಣಿಕೆ ಲೆಕ್ಕ ಹಾಕಿದ ಅನಂತರ ಆದಾಯ ಇನ್ನಷ್ಟು ಏರಿಕೆಯಾಗಲಿದೆ ಎಂದು ಹೇಳಿದೆ.


ಭಕ್ತರು ಸಲ್ಲಿಸಿರುವ ಕಾಣಿಕೆಯಿಂದ 63.89 ಕೋಟಿ ರೂ. ಸಂಗ್ರಹವಾಗಿದೆ. ಅರವಣ ಪ್ರಸಾದ ಮಾರಾಟದಿಂದ 96.32 ಕೋಟಿ ರೂ., ಅಪ್ಪಂ ಪ್ರಸಾದ ಮಾರಾಟದಿಂದ 12.38 ಕೋಟಿ ರೂ. ಆದಾಯ ಬಂದಿದೆ ಎಂದು ಟಿಡಿಬಿ ಅಧ್ಯಕ್ಷಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ. 


ಈ ವರ್ಷದ ಮಂಡಲ ಋತುವಿನಲ್ಲಿ ಡಿ. 25ರ ವರೆಗೆ 31,43,163 ಭಕ್ತರು ಸ್ವಾಮಿಯ ದರ್ಶನ ಪಡೆದಿದ್ದಾರೆ ಎಂದು ತಿಳಿಸಿದರು.