ತ್ರಿಷಾಳನ್ನು ರೇಪ್ ಮಾಡುವ ಚಾನ್ಸ್‌ ಸಿಗಲೇಯಿಲ್ಲ!‌ - ನಾಲಿಗೆ ಹರಿಬಿಟ್ಟ ನಟ ಮನ್ಸೂರ್‌ ಅಲಿಖಾನ್



ದಕ್ಷಿಣ ದ ಸ್ಟಾರ್‌ ನಟಿ ತ್ರಿಷಾ ಕೃಷ್ಣನ್‌ ಇತ್ತೀಚೆಗಷ್ಟೇ ದಳಪತಿ ವಿಜಯ್‌ ಅವರ ಲಿಯೋ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಒಳ್ಳೆಯ ವಿಮರ್ಶೆ ಜತೆಗೆ ಕಲೆಕ್ಷನ್‌ ವಿಚಾರದಲ್ಲೂ ಸದ್ದು ಮಾಡಿತ್ತು. ಇದೀಗ ಇದೇ ಚಿತ್ರದಲ್ಲಿ ನಟಿಸಿದ್ದ ಮತ್ತೋರ್ವ ನಟ ಮನ್ಸೂರ್‌ ಅಲಿಖಾನ್‌, ತ್ರಿಷಾ ಕೃಷ್ಣನ್‌ ಬಗ್ಗೆ ತುಚ್ಚವಾಗಿ ನಾಲಿಗೆ ಹರಿಬಿಟ್ಟಿದ್ದಾರೆ.  ಅವರು ನಟಿಯ ಬಗ್ಗೆ ಮಾತನಾಡಿ, ಹೀನಾಯ ಟೀಕೆಗೆ ಗುರಿಯಾಗಿದ್ದಾರೆ.




ಮನ್ಸೂರ್‌ ಅಲಿಖಾನ್‌ ಸಿನಿಮಾಗಳಲ್ಲಿ ಖಳನಟನಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ . ಲಿಯೋ ಸಿನಿಮಾದಲ್ಲೂ ಖಳನ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಖಳನ ಪಾತ್ರದಲ್ಲಿ ನಟಿಸುತ್ತಿದ್ದಾಗ ನಾಯಕಿಯರ ಜತೆಗೆ ರೇಪ್ ಮಾಡುವ ದೃಶ್ಯಗಳಲ್ಲೂ ಇವರು ಹೆಚ್ಚು ನಟಿಸಿದ್ದಾರೆ. ಇದೀಗ ಆ ಬಯಕೆ ಲಿಯೋ ಸಿನಿಮಾದಲ್ಲಿ ಸಿಗಲಿಲ್ಲ ಎಂದು ಹೇಳಿದ್ದಾರೆ. ತ್ರಿಷಾ ಅವರನ್ನೇ ಗುರಿಯಾಗಿಸಿಕೊಂಡು ಮನ್ಸೂರ್‌ ಅಲಿಖಾನ್‌ ಅವರು ಆಡಿದ ಈ  ಮಾತು ವಿವಾದಕ್ಕೆ ಕಾರಣವಾಗಿದೆ.

ತ್ರಿಷಾ ಜತೆ ಅತ್ಯಾಚಾರದ ದೃಶ್ಯ ಮಿಸ್‌ ಆಯ್ತು..
“ಲಿಯೋ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿದಾಗ ತ್ರಿಷಾ ಜೊತೆ ರೇಪ್  ದೃಶ್ಯ ಬರಬಹುದೆಂಬ ನಿರೀಕ್ಷೆಯಲ್ಲಿದ್ದೆ. ತ್ರಿಷಾಳನ್ನು ನನ್ನ ತೋಳುಗಳಲ್ಲಿ ಎತ್ತಿಕೊಂಡು ಬರುವ ದೃಶ್ಯವೊಂದು ಬರಬಹುದೆಂದು ಊಹಿಸಿಕೊಂಡಿದ್ದೆ. ಆಕೆಯ ಜತೆಗೆ ಬೆಡ್‌ರೂಮ್‌ ದೃಶ್ಯಗಳಲ್ಲಿ ನಟಿಸುವೆ ಎಂದುಕೊಂಡಿದ್ದೆ. ಆದರೆ ನಿರ್ದೇಶಕ ಲೋಕೇಶ್ ಕನಕರಾಜ್, ಕನಿಷ್ಠ ಪಕ್ಷ ತ್ರಿಷಾ ಅವರನ್ನೂ ತೋರಿಸಲಿಲ್ಲ. ನಾನು ಈಗಾಗಲೇ ಸಾಕಷ್ಟು ರೇಪ್ ದೃಶ್ಯಗಳನ್ನು ಮಾಡಿದ್ದೇನೆ. ಆದರೆ, ತ್ರಿಷಾ ಜತೆಗೆ ಇದು ನನಗೆ ಹೊಸದು ಎಂದು ನಾನು ಭಾವಿಸಿದ್ದೆ" ಎಂದು ಮನ್ಸೂರ್‌  ಹೇಳಿಕೆ ನೀಡಿದ್ದರು.

ಮನ್ಸೂರ್‌ ಆಲಿಖಾನ್‌ ಆಡಿದ ಮಾತುಗಳು ವೈರಲ್‌ ಆಗುತ್ತಿದ್ದಂತೆ,  ತ್ರಿಷಾ ಆಕ್ರೋಶ ವ್ಯಕ್ತಪಡಿಸಿದರು. ಕೊಂಚ ಖಾರವಾಗಿಯೇ ಮಾತನಾಡಿರುವ ತ್ರಿಷಾ, ಇನ್ನೊಮ್ಮೆ ಆ ವ್ಯಕ್ತಿ ಜತೆಗೆ ಯಾವುದೇ ಸಿನಿಮಾದಲ್ಲಿ ಪಾತ್ರ ಮಾಡುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸುದೀರ್ಘವಾದ ಬರಹವೊಂದನ್ನು ಬರೆದುಕೊಂಡಿದ್ದಾರೆ.


"ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮತ್ತು ಕೆಟ್ಟದಾಗಿ ಮಾತನಾಡಿರುವ ವೀಡಿಯೊವನ್ನು ನಾನು ನೋಡಿದ್ದೇನೆ. ಆ ಮಾತುಗಳನ್ನು ನಾನು ಖಂಡಿಸುತ್ತೇನೆ. ಇದು ಕೆಟ್ಟತನದ ಪರಮಾವಧಿ, ಅಗೌರವ, ಸ್ತ್ರೀದ್ವೇಷ ಮತ್ತು ಅಷ್ಟೇ ಅಸಹ್ಯಕರ. ಇನ್ಮೇಲೆ ನಾನು ಎಂದಿಗೂ ಆ ನೀಚ ವ್ಯಕ್ತಿಯೊಂದಿಗೆ ತೆರೆ ಹಂಚಿಕೊಳ್ಳುವುದಿಲ್ಲ. ಅವರಂಥವರು ಮನುಕುಲಕ್ಕೇ ಕೆಟ್ಟ ಹೆಸರು" ಎಂದು ಕಿಡಿ ಕಾರಿದ್ದಾರೆ. 


"ನಾನು ನನ್ನ ಮಹಿಳಾ ಸಹ- ನಟರನ್ನು ಗೌರವಿಸುತ್ತೇನೆ. ತ್ರಿಶಾ ಅವರು ಎಡಿಟ್ ಮಾಡಿದ ವಿಡಿಯೋ ನೋಡಿದ್ದಾರೆ. ಯಾರಾದರೂ ಅನುಚಿತವಾಗಿ ವರ್ತಿಸಿದರೆ, ನಾನು ಹೆದರುವವನಲ್ಲ. ನಾನು ಅಂತಹ ಕೆಲಸವನ್ನು ಮಾಡುವವನಲ್ಲ. ಏಕೆಂದರೆ ನನ್ನ ಮಗಳು ತ್ರಿಷಾ ಅವರ ದೊಡ್ಡ ಅಭಿಮಾನಿ. ಇವುಗಳನ್ನು ಬಿಟ್ಟು ಬೇರೆ ವಿಚಾರಗಳತ್ತ ಗಮನ ಹರಿಸಿ" ಎಂದು ಮನ್ಸೂರ್ ಅಲಿ ಖಾನ್ ಹೇಳಿಕೆ ನೀಡಿದ್ದಾರೆ.