ಪುತ್ತೂರು: ಮದ್ಯ ಕುಡಿಸಿ ಮಹಿಳೆಯ ಅತ್ಯಾಚಾರಗೈದ ಕಾಮುಕ ಅರೆಸ್ಟ್
Wednesday, November 29, 2023
ಪುತ್ತೂರು: ಮದ್ಯ ಕುಡಿಸಿ ಮಹಿಳೆಯೊಬ್ಬರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಗೈದ ಕಾಮುಕನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಆರ್ಯಾಪು ಗ್ರಾಮದ ನಿವಾಸಿ, ಸದ್ಯ ಬನ್ನೂರಿನಲ್ಲಿ ವಾಸ್ತವ್ಯವಿರುವ ಸಂಶುದ್ದೀನ್ ಅಸ್ಗರ್ ಆಲಿ (23) ಬಂಧಿತ ಆರೋಪಿ.
ಹಾಸನ ತಾಲೂಕಿನ ಚೆನ್ನರಾಯಪಟ್ಟಣ ನಿವಾಸಿಯಾಗಿರು ಸಂತ್ರಸ್ಥ ಮಹಿಳೆ ನವೆಂಬರ್ 24ರಂದು ರಾತ್ರಿ ಪುತ್ತೂರು ಬಸ್ ನಿಲ್ದಾಣದಲ್ಲಿದ್ದರು. ಈ ವೇಳೆ ಆಕೆಯನ್ನು ಪರಿಚಯ ಮಾಡಿಕೊಂಡ ಸಂಶುದ್ದೀನ್ ಅಸ್ಗರ್ ಆಲಿ ಮಹಿಳೆಗೆ ಮದ್ಯವನ್ನು ಸೇವಿಸಲು ನೀಡಿದ್ದಾನೆ. ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.
ಈ ಬಗ್ಗೆ ಸಂತ್ರಸ್ತೆ ಪುತ್ತೂರು ನಗರ ಠಾಣೆಯಲ್ಲಿ ಮರುದಿನ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ನವೆಂಬರ್ 28 ರಂದು ಸಂಜೆ ಪುತ್ತೂರು ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದಿದ್ದಾರೆ.