-->
ಮಲಯಾಳಂ ನಟಿ ರೆಂಜುಷಾ ಮೆನನ್ ಆತ್ಮಹತ್ಯೆಗೆ ಶರಣು

ಮಲಯಾಳಂ ನಟಿ ರೆಂಜುಷಾ ಮೆನನ್ ಆತ್ಮಹತ್ಯೆಗೆ ಶರಣು


ತಿರುವನಂತಪುರಂ: ಪ್ರಸಿದ್ಧ ಮಲಯಾಳಂ ನಟಿ ರೆಂಜುಷಾ ಮೆನನ್ (35) ಸೋಮವಾರ ಬೆಳಗ್ಗೆ ತಿರುವನಂತಪುರಂನ ತಮ್ಮ ಫ್ಲ್ಯಾಟ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ತಮ್ಮಪತಿ, ನಟ ಮನೋಜ್ ರೊಂದಿಗೆ ವಾಸಿಸುತ್ತಿದ್ದರು. ರೆಂಜುಷಾ ಮೆನನ್ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದರು ಎಂದು ಕೆಲ ವರದಿಗಳು ಹೇಳಿವೆ.

ರೆಂಜುಷಾ ಮೆನನ್ ಅವರದ್ದು ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಲಾಗಿದೆ. ಆದರೂ ಆತ್ಮಹತ್ಯೆಗೆ ಕಾರಣವಾಗಿರುವ ಅಂಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ. ಕೊಚ್ಚಿ ಮೂಲದ ರೆಂಜುಷಾ ಮೊದಲು ಟಿವಿ ಆ್ಯಂಕರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಬಳಿಕ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಸ್ತ್ರೀ ಧಾರಾವಾಹಿಯಲ್ಲಿ ಮೊದಲು ಕಾಣಿಸಿಕೊಂಡ ಅವರು ಪೋಷಕನಟಿ ಪಾತ್ರದಲ್ಲಿ “ಸಿಟಿ ಆಫ್ ಗಾಡ್”, “ಮೇರಿಕ್ಕುಂಡೋರು ಕಂಜಾಡು", "ಬಾಂಬೆ ಮಾರ್ಚ್," “ಕಾರ್ಯಸ್ಥಾನ್, "ಒನ್ ವೇ ಟಿಕೆಟ್”, “ಅದ್ಭುತ ದ್ವೀಪು” ಮುಂತಾದ ಟಿವಿ ಧಾರಾವಾಹಿ, ಸಿನೆಮಾಗಳಲ್ಲಿ ಮಿಂಚಿದ್ದರು.

ಹಲವಾರು ಧಾರಾವಾಹಿಗಳನ್ನು ನಿರ್ಮಿಸಿದ್ದ ಅವರು ವೃತ್ತಿಪರ ಭರತನಾಟ್ಯಂ ಕಲಾವಿದೆಯೂ ಆಗಿದ್ದರು. ತಮ್ಮಸಾವಿಗೆ ಕೆಲವೇ ಗಂಟೆಗಳ ಮೊದಲು ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ “ಆನಂದ ರಾಗಂ” ಸಹನಟಿ ಶ್ರೀದೇವಿ ಅನಿಲ್ ಅವರೊಂದಿಗಿನ ತಮಾಷೆಯ ವೀಡಿಯೋ ಶೇರ್ ಮಾಡಿದ್ದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article