-->
1000938341
ಮಂಗಳೂರು: ಪೊಲೀಸ್ ಕಮಿಷನರ್ ಹೆಸರಿನಲ್ಲಿ‌ ವಾಟ್ಸ್ಆ್ಯಪ್ ಸೃಷ್ಟಿಸಿ ಹಣಕ್ಕೆ ಬೇಡಿಕೆ

ಮಂಗಳೂರು: ಪೊಲೀಸ್ ಕಮಿಷನರ್ ಹೆಸರಿನಲ್ಲಿ‌ ವಾಟ್ಸ್ಆ್ಯಪ್ ಸೃಷ್ಟಿಸಿ ಹಣಕ್ಕೆ ಬೇಡಿಕೆ


ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ಹೆಸರಲ್ಲಿ ನಕಲಿ ವಾಟ್ಸ್ಆ್ಯಪ್ ಸೃಷ್ಟಿಸಿ ಹಣಕ್ಕೆ ಬೇಡಿಕೆಯಿಟ್ಟಿರುವ ಪ್ರಕರಣ ಬಯಲಾಗಿದೆ.

ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ಅಧಿಕೃತ ವಾಟ್ಸ್ಆ್ಯಪ್ ನಲ್ಲಿರುವ  ಫೋಟೋವನ್ನೇ ದುರ್ಬಳಕೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ‌. ಬಳಿಕ ಪೊಲೀಸ್ ಕಮಿಷನರ್ ಹೆಸರಲ್ಲಿ ಹಲವರಿಗೆ ವಾಟ್ಸ್ಆ್ಯಪ್ ಸಂದೇಶ ಕಳಿಸಿ ''ತಾನು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್. ತಾನು ಆಸ್ಪತ್ರೆಯಲ್ಲಿದ್ದೇನೆ. ಯುಪಿಐ ಕೆಲಸ ಮಾಡ್ತಿಲ್ಲ, ಸ್ವಲ್ಪ ಹಣ ಇದ್ದರೆ ಕೊಡಿ, ಒಂದು ಗಂಟೆಯಲ್ಲಿ ವಾಪಾಸ್ ಕೊಡುತ್ತೇನೆ" ಎಂದು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಡಲಾಗಿದೆ.


ಮಂಗಳೂರಿನ ಹಲವರಿಗೆ ಕಮಿಷನರ್ ಹೆಸರಲ್ಲಿ ಇದೇ ರೀತಿಯಲ್ಲಿ ಸಂದೇಶ ರವಾನೆಯಾಗಿದೆ. ಮಂಗಳೂರು ಕಮಿಷನರ್ ಅಧಿಕೃತ ವಾಟ್ಸ್ಆ್ಯಪ್ ಖಾತೆಯ ಫೋಟೋ ಬಳಸಿ ನಕಲಿ ಖಾತೆ ಸೃಷ್ಟಿಸಲಾಗಿದೆ‌. 8319051976 ಮೊಬೈಲ್ ಸಂಖ್ಯೆಯಲ್ಲಿ ಈ ನಕಲಿ ವಾಟ್ಸ್ಆ್ಯಪ್ ಖಾತೆ ಸೃಷ್ಟಿಯಾಗಿದೆ. ನಕಲಿ ಖಾತೆ ಸೃಷ್ಟಿಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಕಮಿಷನರ್ ಸ್ಪಷ್ಟನೆ ನೀಡಿದ್ದು ಯಾರೂ ಹಣ ನೀಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಸೈಬರ್ ಕ್ರೈಂಗೆ ಕ್ರಮಕ್ಕೆ ಸೂಚಿಸಿದ್ದಾರೆ.

Ads on article

Advertise in articles 1

advertising articles 2

Advertise under the article