-->

ಸಂದರ್ಶನದ ನೆಪದಲ್ಲಿ ಸೌದಿ ಮೂಲದ ಮಹಿಳೆಯನ್ನು ಮಂಚಕ್ಕೆಳೆದ ಕೇರಳದ ಖ್ಯಾತ ಯೂಟ್ಯೂಬರ್ : ಆತನ ಮಾತಿನಿಂದ ಸಂತ್ರಸ್ತೆ ಶಾಕ್

ಸಂದರ್ಶನದ ನೆಪದಲ್ಲಿ ಸೌದಿ ಮೂಲದ ಮಹಿಳೆಯನ್ನು ಮಂಚಕ್ಕೆಳೆದ ಕೇರಳದ ಖ್ಯಾತ ಯೂಟ್ಯೂಬರ್ : ಆತನ ಮಾತಿನಿಂದ ಸಂತ್ರಸ್ತೆ ಶಾಕ್

ತಿರುವನಂತಪುರಂ: ಕೇರಳದ ಖ್ಯಾತ ಯೂಟ್ಯೂಬರ್​ ಒಬ್ಬನು ಸೌದಿ ಅರೇಬಿಯಾ ಮೂಲದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಈತನ ಮೇಲೆ ಪ್ರಕರಣ ದಾಖಲಾಗಿದ್ದು, ಯೂಟ್ಯೂಬರ್​ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮಲ್ಲು ಟ್ರಾವೆಲ್ಲರ್​ ಅಲಿಯಾಸ್​ ಶಕೀರ್​ ಸುಭಾನ್​ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ. ಸೆ.13ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್​ ಮಾಡಿಕೊಳ್ಳುವ ಮೂಲಕ ಶಕೀರ್​ ಸುಭಾನ್​ ವಿರುದ್ಧ ಸಂತ್ರಸ್ತೆ ಆರೋಪಗಳ ಸುರಿಮಳೆಗೈದಿದ್ದಾರೆ.

ಶಕೀರ್ ಸಂದರ್ಶನಕ್ಕೆಂದು ಕೊಚ್ಚಿಯ ಖಾಸಗಿ ಹೋಟೆಲ್‌ಗೆ ತನ್ನನ್ನು ಕರೆದಿದ್ದನು. ನಾನು ಕೋಯಿಕ್ಕೋಡ್ ಮೂಲದ ನನ್ನ ಭಾವಿ ಪತಿಯೊಂದಿಗೆ ಹೋಟೆಲ್‌ಗೆ ಹೋಗಿದ್ದೆ. ನನ್ನ ಭಾವಿ ಪತಿ ಹೊರಹೋದ ವೇಳೆ, ಶಕೀರ್ ತನ್ನ ಬಳಿಗೆ ಬಂದು ಮಾತನಾಡಿದ್ದಾನೆ. ಬಳಿಕ ನನ್ನ ಕೈ ಹಿಡಿದಿದ್ದಾನೆ. ಅಲ್ಲದೆ ತನ್ನನ್ನು ಹಾಸಿಗೆಯ ಮೇಲೆ ತಳ್ಳಿ ನನ್ನ ಖಾಸಗಿ ಅಂಗಗಳನ್ನು ಮುಟ್ಟಿದ್ದಾನೆ. ಈ ವೇಳೆ ನಾನು ಅವನನ್ನು ಬಲವಾಗಿ ತಳ್ಳಿ, ನನ್ನ ಒಪ್ಪಿಗೆಯಿಲ್ಲದೆ ನನ್ನ ದೇಹವನ್ನು ಏಕೆ ಮುಟ್ಟಿದೆ ಎಂದು ಪ್ರಶ್ನೆ ಮಾಡಿದೆ. 'ನಾನು ಓರ್ವ ಮನುಷ್ಯ ಮತ್ತು ನನ್ನಲ್ಲೂ ಭಾವನೆಗಳಿವೆ. ನಿನ್ನೊಂದಿಗೆ ಸಂಭೋಗಿಸಲು ಬಯಸುತ್ತಿರುವುದಾಗಿ' ಎಂದು ಹೇಳಿದ್ದಾನೆ. ಆತನ ಉತ್ತರ ಕೇಳಿ ನನಗೆ ಆಘಾತವಾಯಿತು ಎಂದು ಸಂತ್ರಸ್ತೆ ವಿಡಿಯೋದಲ್ಲಿ ಹೇಳಿದ್ದಾರೆ.

ಇದೇ ಸಂದರ್ಭ ಶಕೀರ್ ಸುಭಾನ್ ಈ ಆರೋಪವನ್ನು ನಿರಾಕರಿಸಿದ್ದಾನೆ. ಇದು ಕಿರುಕುಳದ ನಕಲಿ ದೂರು ಆಗಿದ್ದು, ಸಾಕ್ಷ್ಯಾಧಾರಗಳೊಂದಿಗೆ ಅದನ್ನು ಎದುರಿಸುತ್ತೇನೆ ಎಂದು ಹೇಳಿದ್ದಾನೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article